ಗ್ರಾಮ ಗ್ರಾಮಗಳಲ್ಲಿ ಭಕ್ತಿ, ಶಾಂತಿ ಸಹಬಾಳ್ವೆ ನೆಲೆಸಬೇಕು: ವಿನಯ್ ಗುರೂಜಿ


ಜಾಹಿರಾತು


ನ್ಯೂಸ್ ಕೊಪ್ಪ, ನ.27: ಹಳ್ಳಿ ಹಳ್ಳಿಗಳಲ್ಲಿ ಶ್ರದ್ದೆ, ಭಕ್ತಿ, ಶಿಸ್ತು, ಸಂಯಮದಿಂದ ಕೂಡಿ ಪತ್ರಿ ಗ್ರಾಮವೂ ನಿತ್ಯ ಧರ್ಮಸ್ಥಳವಾಗ ಬೇಕು, ಗ್ರಾಮದಲ್ಲಿ ದೇವಸ್ಥಾನದೊಂದಿಗೆ ವಿದ್ಯೆದಾನ, ಅನ್ನದಾನ, ಆರೋಗ್ಯ ಕೇಂದ್ರವಾದ ವಾತವರಣ ನಿರ್ಮಾಣವಾಗಬೇಕು ಎಂದು ಗೌರಿಗದ್ದೆಯ ಅವದೂತ ವಿನಯ್ ಗುರೂಜಿ ಅಭಿಪ್ರಾಯ ಪಟ್ಟರು.
ಪಟ್ಟಣದ ನೇತಾಜಿ ನಗರದ ಚಕ್ರಸಹಿತ ಶ್ರೀ ಚೌಡೇಶ್ವರಿ ಮತ್ತು ನಾಗದೇವತಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ೫ನೇ ವರ್ಷದ ಪೂಜಾ ಮಹೋತ್ಸವದಲ್ಲಿ ನೆರೆದಿದ್ದ ಭಕ್ತರಿಗೆ ಆರ್ಶೀವಚನ ನೀಡಿದ ಅವರು, ಮನುಷ್ಯನಿಗೆ ದೇಶ ಬೆಳೆದರೆ ಸಾಲದು ಆತನಿಗೆ ಬುದ್ದಿ ಬೆಳೆಯಬೇಕು, ಅದರ ಜೊತೆಗೆ ಅಲೋಚಿಸಿ, ಅವಲೋಕಿಸಿ ಸಮಾಜಕ್ಕೆ ಉತ್ತಮ ಕೆಲಸವನ್ನು ಮಾಡುವ ಧೃಡ ಮನಸ್ಸು ರೂಪಗೊಳ್ಳಬೇಕು ಎಂದು ತಿಳಿಸಿದ ಅವರು, ಮನುಷ್ಯ ಇಂದಿನ ಕಾಲದಲ್ಲಿ ಹಣ, ಆಸ್ತಿಗೆ ಹೆಚ್ಚು ಮೌಲ್ಯವನ್ನು ನೀಡುತ್ತಿದ್ದಾನೆ. ಅವುಗಳೆ ಆಗತ್ಯ ವಸ್ತು ಎಂದು ತಿಳಿದಿದ್ದಾನೆ ಆದರೇ ಗಾಳಿ, ನೀರು, ಮಣ್ಣು ಈ ವಸ್ತುಗಳು ಅಗತ್ಯವಾದದ್ದು ಇವುಗಳು ಮಲೀನವಾಗದಂತೆ ನೋಡಿಕೊಂಡು ಸಂರಕ್ಷಿಸುವುದು ಪತ್ರಿ ಮನುಷ್ಯನ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.ಧಾರ್ಮಿಕ ಕಾರ್ಯಕ್ರಮವನ್ನು ಹುಲ್ಲುಮಕ್ಕಿಯ ಕಾರ್ತಿಕ್ ಭಟ್ ನೇತೃತ್ವದ ತಂಡ ನಡೆಸಿಕೊಟ್ಟರು, ಚಕ್ರಸಹಿತ ಶ್ರೀ ಚೌಡೇಶ್ವರಿ ಮತ್ತು ನಾಗದೇವತಾ ಸೇವಾ ಸಮಿತಿಯ ಅಧ್ಯಕ್ಷರಾದ ಗೋಪಾಲ್ ಗೌಡ, ಶ್ರೀನಾಥ್, ನವೀನ್, ನಾಗರಾಜ್ ಪವಾರ್, ಚನ್ನಪ್ಪ ಗೌಡ, ವೆಂಕಟೇಶ್, ಪ.ಪಂ ಸದಸ್ಯರಾದ ಗ್ರಾಯತ್ರೀ ಶೆಟ್ಟಿ, ಗ್ರಾಮಾಂತರ ಗ್ರಾ.ಪಂ ಸದಸ್ಯರಾದ ಹೆಚ್.ಆರ್ ಸಂಜೀವ ಮುಂತಾದವರಿದ್ದರು.


ಜಾಹಿರಾತು