ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸುಧಾಕರ್ ಪದಗ್ರಹಣ

ನ್ಯೂಸ್ ಕೊಪ್ಪ, ಮಾ.5: ಕೊಪ್ಪ ತಾಲೂಕು ಪಂಚಾಯತಿಯ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ತಾಲೂಕು ಪಂಚಾಯತಿ ಸದಸ್ಯ ಸುಧಾಕರ್ ಗುರುವಾರ ಅಧಿಕಾರ ವಹಿಸಿಕೊಂಡರು.

ಜಿಲ್ಲಾ ಪಂಚಾಯತಿ ಅಧ್ಯಕ್ಷರಾದ ಸುಜಾತ ಕೃಷ್ಣಪ್ಪ, ಜಿ ಪಂ ಸದಸ್ಯರಾದ ದಿವ್ಯ ದಿನೇಶ್,ತಾ ಪಂ ಅಧ್ಯಕ್ಷರಾದ ಜಯಂತಿ ನಾಗರಾಜ್, ಬಿಜೆಪಿ ತಾಲೂಕು ಅಧ್ಯಕ್ಷರಾದ ಸತೀಶ್ ಅದ್ದಡ, ಮುಖಂಡರಾದ ಹೊಸೂರು ದಿನೇಶ್, ನುಗ್ಗಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಹೆಚ್ ಆರ್ ಜಗದೀಶ್ ನೂತನ ಅಧ್ಯಕ್ಷರಿಗೆ ಶುಭಕೋರಿದರು

ಅಧಿಕಾರ ಪದಗ್ರಹಣ ನಂತರ ಮಾತನಾಡಿದ ಅಧ್ಯಕ್ಷರಾದ ಸುಧಾಕರ್, ಮಾಜಿ ಶಾಸಕರಾದ ಡಿ ಎನ್ ಜೀವರಾಜ್ ತಾಲೂಕಿನ ಬಿಜೆಪಿ ಮುಖಂಡರು ಹಾಗೂ ನನಗೆ ಈ ಮಟ್ಟಕ್ಕೆರಲು ಸಹಕರಿಸಿದ ಜನತೆಗೆ ಧನ್ಯವಾದ ಹೇಳಬಯಸುತ್ತೇನೆ.ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಬಡವರು,ದೀನದಲಿತರಿಗೆ ಸಮಾಜದ ಮುಖ್ಯ ವಾಹಿನಿ ಬರಲು ನೇರವು ನೀಡುವ ಉತ್ತಮ ಸ್ಥಾಯಿ ಸಮಿತಿಯಾಗಿದೆ ಆರ್ಥಿಕವಾಗಿ ಹಿಂದುಳಿದವರಿಗೆ ಹಲವು ಯೋಜನೆ,ಕಾರ್ಮಿಕರಿಗೆ ಕಾರ್ಪೆಂಟರಿ ಕಿಟ್ ,ಮಹಿಳಾ ಸಬಲೀಕರಣಕ್ಕೆ ಹೊಲಿಗೆ ಯಂತ್ರ , ಬೈಸಿಕಲ್ ,ಇಸ್ತ್ರಿ ಪಟ್ಟಿಗೆ ವಿವಿಧ ಸಲಕರಣೆ ಫಲಾನುಭವಿಗಳಿಗೆ ತಲುಪಿಸಿ ,ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡುವ ಮಹಾತ್ವ ಯೋಜನೆಗಳು ಸಾಮಾಜಿಕ ನ್ಯಾಯ ಸಮಿತಿಯಲ್ಲಿದೆ ಜನಪರ ಯೋಜನೆಗಳಿಗೆ .ಈ ವರ್ಷ ಕೊಪ್ಪ ತಾಲೂಕಿನ ಜನರಿಗೆ ವಿಶೇಷ ಯೋಜನೆ ರೂಪಿಸಿ , ಎಲ್ಲ ವರ್ಗ ,ಧರ್ಮದವರು ಆರ್ಥಿಕವಾಗಿ ಸಬಲರಾಗಲು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಎಲ್ಲ ಸದಸ್ಯರ ಜೊತೆಯಲ್ಲಿ ಕಾರ್ಯಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.

‌‌……ವಿಕ್ರಮ್ ಕೊಪ್ಪ…..