ನಾಗರೀಕತೆ ಭೋದಿಸುವ ಆಲಯದ ಎದುರೆ ಕಸ ಸುರಿಯುವ ಅನಾಗರೀಕ ಜನ!.

ಸ್ಚಚ್ಛತಾ ಆಂದೋಲನದ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ, ಕೆಲವೆಡೆ ಇದು ಪ್ರಚಾರಕ್ಕೆ ಮಾತ್ರ ಸೀಮಿತವಾಗುತ್ತಿದೆ ಎಂಬುದಕ್ಕೆ ಇಲ್ಲೊಂದು ಉದಾಹರಣೆ ಇದೆ.

ವರದಿ ವಿಕ್ರಮ್ ಕೊಪ್ಪ…..

ನ್ಯೂಸ್ ಕೊಪ್ಪ: ತಾಲೂಕಿನ ಹರಂದೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮೊರಾರ್ಜಿ ವಸತಿ ಶಾಲೆ ಇದೆ ಈ ವಸತಿ ಶಾಲೆಯಲ್ಲಿ ಈ ಜಿಲ್ಲೆಯ ಹೊರ ಜಿಲ್ಲೆಯ ನೂರಾರು ವಿಧ್ಯಾರ್ಥಿಗಳಿಗೆ ಉತ್ತಮ ವ್ಯಾಸಂಗ ನೀಡಿ ಅವರಿಗೆ ವಸತಿ ಊಟ ಕಲ್ಪಿಸಿ ಉತ್ತಮ ನಾಗರೀಕರನ್ನಾಗಿಸುವ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡುತ್ತಿದೆ ಮತ್ತು ಆ ಶಾಲೆ ನಮ್ಮ ಕೊಪ್ಪದ ಹೆಮ್ಮೆ,

ಶಾಲೆಯ ಹೊರಗೆ ಅನಾಗರೀಕ ಪ್ರಪಂಚದ ಅನಾವರಣ!

ಶಾಲೆಯ ಒಳಗೆ ನಾಗರೀಕತೆಯ ಬೋದನೆ ಕೇಳಿ ಬರುವ ಮಕ್ಕಳಿಗೆ ಶಾಲೆಯ ಕಾಂಪೋಂಡಿನ ಹೊರಗಿನ ರಸ್ತೆ ಬದಿ ಚೀಲ ಚೀಲ ಕಸ ತಂದು ಸುರುದಿರುವುದನ್ನು ನೋಡಿದರೆ ಸಂಪೂರ್ಣ ಗೊಂದಲ ಯಾವುದು ನಾಗರೀಕತೆ? ಹೌದು ಕೊಪ್ಪದ ಹರಂದೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಮೊರಾರ್ಜಿ ಶಾಲೆಯ ಕಾಂಪೌಂಡ್ ನ ಹೊರಗೆ ನಾಗರೀಕತೆಯ ಗಂಧಗಾಳಿ ಗೊತ್ತಿಲ್ಲದ ಜನ ರಾಜಾರೋಷವಾಗಿ ದಿನವೂ ಕಸ ತಂದು ಸುರಿಯುತ್ತಲೆ ಇದ್ದಾರೆ. ಇದು ವಿಧ್ಯಾರ್ಥಿಗಳು ಇರುವ ಪರಿಸರ ಎಂಬುದು ತಿಳಿಯದ ಜನ ಮಧ್ಯದ ಬಾಟಲಿಗಳನ್ನು ಪೌಚ್ಗಳನ್ನು ತಂದು ಸುರಿಯುತ್ತಿದ್ದಾರೆ ಇದನ್ನು ಪ್ರಶ್ನಿಸಬೇಕಾದ ಸರಿಪಡಿಸಬೇಕಾದ ಹರಂದೂರು ಗ್ರಾಮ ಪಂಚಾಯತಿಯ ಅಧಿಕಾರಿಗಳಿಗೆ ಅವರ ದೇಹವೆ ಅವರಿಗೆ ಭಾರ!

ಗ್ರಾಮದ ಕಸ ವಿಲೆವಾರಿಗೆ ತಲೆಕೆಡಿಸಿಕೊಳ್ಳದ ಪಂಚಾಯಿತಿ. ತಮ್ಮ ಕರ್ತವ್ಯ ಏನು ಎಂದೇ ಗೊತ್ತಿರದ ಜನಪ್ರತಿನಿಧಿಗಳು!

ಅದೇ ಪಂಚಾಯಿತಿಗೆ ಚುನಾಯಿತರಾದ ಜನಪ್ರತಿನಿದಿಗಳ ಮನೆ ಅಲ್ಲೆ ಅಕ್ಕ ಪಕ್ಕದಲ್ಲೆ ಇದೆ ದಿನಾವೂ ಅದೇ ರಸ್ತೆಯಲ್ಲಿ ಓಡಾಡುತ್ತಾರೆ ಅದೆಷ್ಟು ತಿಂಗಳಿನಿಂದ ಅಲ್ಲಿ ಕಸ ಬಿದ್ದಿದೆ, ಇನ್ನು ಬೀಳುತ್ತಲೆ ಇದೆ! ಅವರಿಗೆ ಕುರುಡೊ! ಅಥವ ಅದೇನು ನಮ್ಮ ಮನೆ ಬಾಗಿಲಲ್ಲಿ ಬಿದ್ದಿಲ್ಲ ಎಂಬ ಸಮಾದಾನದ ತಾತ್ಸಾರವೋ? ಅಥವಾ ನಾವು ಚುನಾಯಿತರಾಗಿದ್ದು ಏಕೆ ಎಂಬುದೆ ಇವರಿಗೆ ಗೊತ್ತಿಲ್ಲವೋ?

ಸತ್ತ ಸಾಕು ಪ್ರಾಣಿಗಳನ್ನು ತಂದು ಬಿಸಾಡುತ್ತಾರೆ ಜನ.

ಈಗ ಮಳೆ ಪ್ರಾರಂಭವಾಗಿದೆ ವಿದ್ಯಾರ್ಥಿಗಳು ಇದನ್ನೇ ತುಳಿದುಕೊಂಡು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣ ಆಗಲಿದೆ. ಇದರಿಂದ ರೋಗಗಳು ಬಂದರೆ ಯಾರು ಹೊಣೆ’ ಎಂದು ಗ್ರಾಮಸ್ಥರು ಅಲವತ್ತುಕೊಂಡಿದ್ದಾರೆ

ಇಲ್ಲಿ ಮನೆಗಳಲ್ಲಿ ನಾಯಿ ಬೆಕ್ಕು ಕೋಳಿಗಳಂತ ಸಾಕು ಪ್ರಾಣಿಗಳು ಸತ್ತಾಗ ಅದನ್ನು ಕೂಡ ತಂದು ಇಲ್ಲಿ ಬಿಸಾಕಿ ಹೋಗುತ್ತಾರೆ ಎಂದರೆ ಆ ವಾಸನೆಗೆ ಅಲ್ಲಿ ವ್ಯಾಸಂಗ ಮಾಡುತ್ತಿರುವ ವಿಧ್ಯಾರ್ಥಿಗಳ ಪಾಡೇನು?. ಅಲ್ಲಿ ಸುತ್ತಮುತ್ತ ಪರಿಸರ ಸಹಿಸಲಾಸಾದ್ಯವಾದ ದುರ್ನಾಥ ಬೀರುತ್ತಿದೆ. ಬೀದಿ ನಾಯಿಗಳು ಕಸ ತುಂಬಿದ ಚೀಲಗಳನ್ನು ಹರಿದು ಅದರಲ್ಲಿಯ ಕಸವನ್ನು ಇಡಿ ರಸ್ತೆ ತುಂಬ ಹರಡಿವೆ ಓಡಾಡಲು ಅಸಹ್ಯವಾಗುತ್ತಿದೆ, ಸಾಂಕ್ರಾಮಿಕ ರೋಗದ ಬೀತಿ ಬೇರೆ, ಆದರೂ ಅಲ್ಲಿ ಎಲ್ಲರದ್ದೂ ಮೌನ!

ಅಲ್ಲಿಯ ಒಬ್ಬ ನಿವಾಸಿಯನ್ನು ನ್ಯೂಸ್ ಕೊಪ್ಪ ಮಾತನಾಡಿಸಿದಾಗ ಸಾರ್ ಇದು ಇವತ್ತು ನಿನ್ನೆಯದಲ್ಲ ಎಂಟು ಹತ್ತು ತಿಂಗಳಿನಿಂದಲೂ ಇಲ್ಲಿ ಕಸ ಸುರಿಯುತ್ತಿದ್ದರೆ ಕಸ ಹಾಕುವುದು ಬೇರೆ ಯಾರೂ ಅಲ್ಲ ಇಲ್ಲಿನ ಸುತ್ತಮುತ್ತ ಜನರೆ! ಕೇಳಲು ಹೋದರೆ ಜಗಳ ಮಾಡಬೇಕಾಗುತ್ತದೆ ಗ್ರಾಮ ಪಂಚಾಯಿತಿಗೆ ದೂರು ನೀಡಿ ನೀಡಿ ಸಾಕಾಗಿ ಹೋಗಿದೆ ಅವರೆ ಸುಮ್ಮನಿದ್ದಾರೆ ನಮಗೇಕೆ? ಇದು ಸ್ಥಳಿಯರ ಮಾತು.
ಗ್ರಾಮವನ್ನು ಸ್ವಚ್ಚವಾಗಿಡುವುದು ಅಲ್ಲಿನ ಜನರ ಕರ್ತವ್ಯ, ಅದು ಆಗದೇ ಇದ್ದಾಗ ಗ್ರಾಮ ಪಂಚಾಯತಿ ಅಧಿಕಾರಿಗಳು ಜನಪ್ರತಿನಿಧಿಗಳು ಸೂಕ್ತ ವ್ಯವಸ್ಥೆ ಮಾಡಬೇಕು, ಆದಷ್ಟು ಬೇಗ ಮೊರಾರ್ಜಿ ಶಾಲೆ ಎದುರಿನ ರಸ್ತೆಯಲ್ಲಿ ಚೆಲ್ಲಾಡಿರುವ ಕಸ ಸ್ವಚ್ಚ ಮಾಡಿ‌ ಅಲ್ಲಿ ಕಸ ಹಾಕುವವರಿಗೆ ಎಚ್ಚರಿಕೆ ನೀಡಿ ಶಾಲೆಯ ಸುತ್ತ ಮುತ್ತಲಿನ ಪರಿಸರ ಸ್ವಚ್ಚವಾಗಿರುವಂತೆ ನೋಡಿಕೊಳ್ಳುತ್ತದೆ ಎಂಬುದು ನ್ಯೂಸ್ ಕೊಪ್ಪದ ಆಶಯ

ಮೊದಲು ಮನುಷ್ಯನನ್ನು ನಾಗರೀಕನಾಗಿ ಮಾಡದ ಹೊರತು ಈ “ಸ್ವಚ್ಛ ಭಾರತ” ಎಂಬ ಕಲ್ಪನೆಯೆ ಹಾಸ್ಯಸ್ಪದ!