ಸೂರ್ಳಿ ಗಣೇಶ ಮೂರ್ತಿಗೆ ಕಲಾಜ್ಯೋತಿ ಪ್ರಶಸ್ತಿ

ನ್ಯೂಸ್ ಕೊಪ್ಪ, ಆ.22: ಹರಿಹರಪುರದ ತ್ಯಾಗರಾಜ ಸಂಗೀತ ಮಹಾವಿದ್ಯಾಲಯದ ಖ್ಯಾತ ಮೃದಂಗ ವಿದ್ವಾಂಸ ಸೂರ್ಳಿ ಆರ್. ಗಣೇಶ ಮೂರ್ತಿ ಅವರಿಗೆ ಗಾಯನ ಸಮಾಜದ ಕಲಾಜ್ಯೋತಿ ಪ್ರಶಸ್ತಿ ಪ್ರಧಾನ ಮಾಡಲಾಗಿದೆ.


ಜಾಹಿರಾತು


ಭಾನುವಾರ ಬೆಂಗಳೂರಿನ ಬಸವನಗುಡಿಯಲ್ಲಿರುವ ಗಾಯನ ಸಮಾಜದ ೫೦ನೇ ಸಂಗೀತ ಸಮ್ಮೇಳನ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಗಣೇಶ ಮೂರ್ತಿ ಅವರು ಕಳೆದ ೪ ದಶಕಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಲಯವಾದ್ಯ ಮೃದಂಗವನ್ನು ಬೋಧಿಸುತ್ತಿದ್ದು, ನಾಡಿನ ವಿವಿಧ ಗಾಯಕರಿಗೆ ಪ್ರಮುಖ ಕಛೇರಿಗಳಲ್ಲಿ ಪಕ್ಕವಾದ್ಯ ಸಾಥ್ ನೀಡಿರುತ್ತಾರೆ, ಇವರು ಭದ್ರಾವತಿಯ ಆಕಾಶವಾಣಿ ಕಲಾವಿದರಾಗಿದ್ದು, ಹರಿಹರಪುರದ ಸಚ್ಚಿದಾನಂದ ನಾದಸಭಾದ ಅಧ್ಯಕ್ಷರೂ ಆಗಿದ್ದರು.


ಜಾಹಿರಾತು