ಶಾನುವಳ್ಳಿ: ವ್ಯಕ್ತಿಯ ಮೇಲೆ ಚಿರತೆ‌ ಆಟ್ಯಾಕ್ | ಬೈಕ್ ಸವಾರರೇ ಚಿರತೆಯ ಟಾರ್ಗೆಟ್.!

ನ್ಯೂಸ್ ಕೊಪ್ಪ, ಮಾ.18: ತಾಲೂಕಿನ ಶಾನುವಳ್ಳಿ ಗ್ರಾಮ ಪಂಚಾಯತಿ ‌ವ್ಯಾಪ್ತಿಯಲ್ಲಿ‌ ಹತ್ತು ದಿನದ ಅಂತರದಲ್ಲಿ ಎರಡು ಬಾರಿ‌ ಬೈಕ್ ಸವಾರರ ಮೇಲೆ ಚಿರತೆಯೊಂದು ಆಟ್ಯಾಕ್ ‌ಮಾಡಿದ ಘಟನೆ ನಡೆದಿದೆ.

ಕಳೆದ ವಾರ ಶಾನುವಳ್ಳಿಯ ಮುಖೇಶ್ ಎಂಬವರ ಮೇಲೆ ಆಟ್ಯಾಕ್ ಮಾಡಿದ್ದ ಚಿರತೆ, ಇಂದು ಬೆಳಿಗ್ಗೆ ಹಸಿರುಕೊಡಿಗೆಯ ಮಂಜುನಾಥ್ (54) ಮೇಲೆ ದಾಳಿ ಮಾಡಿದೆ.

ಮಂಜುನಾಥ್ ತಮ್ಮ ಮನೆಯಿಂದ ವಿನಾಯಕಪುರಕ್ಕೆ ಚೌರ ಮಾಡಿಸಲು ಬೈಕ್ ನಲ್ಲಿ ಹೋಗುತ್ತಿರುವಾಗ ಸೊಪ್ಪಿನಮಕ್ಕಿ ಬಳಿ ಪೊದೆಯಲ್ಲಿ ಅಡಗಿದ್ದ ಚಿರತೆ ಏಕಾಏಕಿ ದಾಳಿ ಮಾಡಿದೆ. ಘಟನೆಯಲ್ಲಿ ಮಂಜುನಾಥ್ ತೊಡೆ ಭಾಗಕ್ಕೆ ಚಿರತೆಯ ಪರಚಿದ ಗುರುತು ಬಿದ್ದಿದೆ. ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಯ ಕುರಿತು ಜಿ.ಪಂ ಸದಸ್ಯ ಎಸ್.ಎನ್ ರಾಮಸ್ವಾಮಿ ನ್ಯೂಸ್ ‌ಕೊಪ್ಪದೊಂದಿಗೆ ಮಾತನಾಡಿ, ಕಳೆದ ಹತ್ತು‌‌‌‌ ದಿನದಲ್ಲಿ ಶಾನುವಳ್ಳಿ ಗ್ರಾಮ‌ ಪಂಚಾಯತ್ ವ್ಯಾಪ್ತಿಯಲ್ಲಿ ಇದು ಎರಡನೇ ಘಟನೆ. ಘಟನೆಯಿಂದ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ಅರಣ್ಯ ಇಲಾಖೆಯ ನಿರ್ಲಕ್ಷ್ಯ ತನದಿಂದ ಘಟನೆ ಮರುಕಳಿಸಿದ್ದು. ಇಲಾಖೆಯೂ ಕೂಡಲೇ ಎಚ್ಚೆತ್ತು. ಚಿರತೆಯನ್ನು ಸೆರೆ ಹಿಡಿಯಬೇಕು ಎಂದು ಒತ್ತಾಯಿಸಿದ್ದಾರೆ.