ಪೌರ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಸುಭ್ರಮಣ್ಯ ಶೆಟ್ಟಿ ಮೂರನೇ ಭಾರಿ ಆಯ್ಕೆ

ನ್ಯೂಸ್ ಕೊಪ್ಪ, ಜುಲೈ.24: ಕೊಪ್ಪ ಪಟ್ಟಣದ 45ನೇ ವರ್ಷದ ಪೌರ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಪ.ಪಂ ಸದಸ್ಯ ಕೆ.ಎಸ್ ಸುಬ್ರಮಣ್ಯ ಶೆಟ್ಟಿ ಮೂರನೇ ಭಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸೆ.02ರಿಂದ ಹನ್ನೊಂದು ದಿನಗಳ ಕಾಲ ನಡೆಯುವ ಗಣೇಶೋತ್ಸವದಲ್ಲಿ ಪ್ರತಿ ಧಾರ್ಮಿಕ ಕಾರ್ಯಕ್ರಮದೊಂದಿಗೆ ಸಂಜೆ ವಿವಿದ ಕಲಾ, ಸಂಸ್ಕೃತಿಕ ತಂಡಗಳ ಪ್ರದರ್ಶವನ್ನು ಹಮ್ಮಿಕೊಳ್ಳಲಾಗುದು ಹಾಗೂ ವಿಸರ್ಜನೆಯ ಕೊನೆಯ ದಿನ ಬೆಳಿಗ್ಗೆ 10 ಗಂಟೆಯಿಂದಲೇ ರಾಜಬೀದಿ ಉತ್ಸವವನ್ನು ನಡೆಸಲಾಗುವುದು ಎಂದು ತೀರ್ಮಾನಿಸಲಾಗಿದೆ.