ಪ್ರೇಮಿಗಳ ಸರಸ ಸಲ್ಲಾಪದ ವಿಡಿಯೊ ಚಿತ್ರೀಕರಣ..! ವೈರಲ್ ಮಾಡಿದ್ದ ಇಬ್ಬರ ಬಂಧನ, ಓರ್ವ‌ ನಾಪತ್ತೆ


ಜಾಹಿರಾತು


ನ್ಯೂಸ್ ಕೊಪ್ಪ, ನ.18: ತಾಲೂಕಿನ ಜಯಪುರ ಸಮೀಪದ ಕೊಗ್ರೆ ಬಳಿಯ ಜೈನ ಧಾರ್ಮಿಕ ಕೇಂದ್ರ ಪಂಚಮಿಕಲ್ಲಿನಲ್ಲಿ ಸರಸ ಸಲ್ಲಾಪದಲ್ಲಿ ತೊಡಗಿದ್ದ ಪ್ರೇಮಿಗಳ ವಿಡಿಯೊ ಚಿತ್ರೀಕರಣ ಮಾಡಿದ ಆರೋಪದ ಮೇಲೆ ಜಯಪುರ ಪೊಲೀಸರು ಇಬ್ಬರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.


ಜಾಹಿರಾತು


ಶೃಂಗೇರಿಯ ಯುವಕ ತನ್ನ ಗೆಳತಿಯೊಂದಿಗೆ ಪಂಚಮಿಕಲ್ಲಿಗೆ ತೆರಳಿ ಏಕಾಂತದಲ್ಲಿದ್ದ ವೇಳೆ ಆರೋಪಿಗಳು ಅದನ್ನು ಚಿತ್ರೀಕರಿಸಿ ವೈರಲ್ ಮಾಡಿದ್ದಲ್ಲದೆ, ಕೊಲೆ ಬೆದರಿಕೆ, ಹಲ್ಲೆ ನಡೆಸಿ, ಹಣ ದೋಚಿ, ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಜಯಪುರ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಸಂಬಂಧ ಪೊಲೀಸರು ಕೊಗ್ರೆಯ ನವೀನ್ ಜೈನ್ ಹಾಗೂ ಮನೋಜ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪ್ರಮುಖ ಆರೋಪಿ ವಿಶ್ವನಾಥ್ ಪೂಜಾರಿ ಆಲಿಯಾಸ್ ವಿಶ್ವ ನಾಪತ್ತೆಯಾಗಿದ್ದು, ಪೊಲೀಸರು ಆತನ ಪತ್ತೆಗೆ ಬಲೆ ಬೀಸಿದ್ದಾರೆ.


ಜಾಹಿರಾತು