ವರುಣನ ಆರ್ಭಟ ನುಗ್ಗಿ ಗ್ರಾಮದಲ್ಲಿ ಅಪಾರ ಹಾನಿ. ಎಚ್ ಆರ್ ಜಗದೀಶ್ ನೇತೃತ್ವದಲ್ಲಿ ರಕ್ಷಣೆ, ಪರಿಹಾರ, ಕಾರ್ಯ ಚುರುಕು

ನ್ಯೂಸ್ ಕೊಪ್ಪ: ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಕುಂಭದ್ರೋಣ ಮಳೆಗೆ ತಾಲೂಕಿನ ನುಗ್ಗಿ ಗ್ರಾಮದಲ್ಲಿ‌ ಅಪಾರ ಹಾನಿ ತಂದಿತ್ತಿದೆ. ಗ್ರಾಮದ ಹಲವು ಕಡೆ ಮೋರಿ ಕುಸಿದಿದೆ. ರಸ್ತೆಗಳು ಕುಸಿದು ದೊಡ್ಡ ದೊಡ್ಡ ಚರಂಡಿಗಳು ನಿರ್ಮಾಣವಾಗಿವೆ, ಸಣ್ಣ ಸಣ್ಣ ಸೇತುವೆಗಳು, ಕಾಲು ಸಂಕಗಳು ನೀರಿನ ಹೊಡೆತಕ್ಕೆ ಕೊಚ್ಚಿಹೋಗಿವೆ,

ಬಿರುಗಾಳಿ ಹೊಡೆತಕ್ಕೆ ಸಿಲುಕಿ ಅನೇಕ ಮರಗಳು ಧರೆಗುರುಳಿದ್ದು, ವಿದ್ಯುತ್‌ ಕಂಬಗಳೂ ಉರುಳಿ ಬಿದ್ದಿವೆ. ಜತೆಗೆ ಗ್ರಾಮದ ಹಲವಾರು ಮನೆಗಳ ಮೇಲೆ ಮಣ್ಣು ಕುಸಿದು ಮನೆಗಳಿಗೆ ಹಾನಿಯಾಗಿದೆ.

ಗ್ರಾಮದಲ್ಲಿ ಹಾದುಹೋಗುವ ಮುಖ್ಯರಸ್ತೆಯ ಬದಿಯ ಗುಡ್ಡಗಳು ಜರಿದು ಮರಗಳು ನೆಲಕ್ಕುರುಳಿವೆ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದ್ದು ನುಗ್ಗಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಎಚ್ ಆರ್ ಜಗದೀಶ್ ಗ್ರಾಮದಲ್ಲಿ ಹಾನಿಯಾದ ಎಲ್ಲ ಸ್ಥಳಗಳಿಗೂ ಬೇಟಿನೀಡಿ ಸಮರೋಪಾದಿಯಲ್ಲಿ ರಕ್ಷಣೆ ಪರಿಹಾರ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆ.

ಇಂದು ಹಾನಿಯಾದ ಸ್ಥಳಗಳಿಗೆ
ಗ್ರಾಮ ಲೆಕ್ಕಾಧಿಕಾರಿಗಳಾದ ಸಿದ್ದಪ್ಪ ಮಧುಸೂದನ್ ನೇಸರ ಹಾಗೂ ಗ್ರಾಮಪಂಚಾಯಿತಿ ಅಭಿವೃದ್ದಿ ಅಧಿಕಾರಿ ಪ್ರಸನ್ನ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಸ್ಥಳ ಪರಿಶೀಲನೆ ಮಾಡಿದರು.

….ವಿಕ್ರಮ್ ಕೊಪ್ಪ