ನುಗ್ಗಿ ಗ್ರಾಮದ ಕೈಮರದಲ್ಲಿ ನೂತನ ವಾಣಿಜ್ಯ ಸಂಕೀರ್ಣ ಉದ್ಘಾಟನೆ

 

ನ್ಯೂಸ್ ಕೊಪ್ಪ, ಫೆ.13: ತಾಲೂಕಿನ ನುಗ್ಗಿ ಗ್ರಾಮದ ಬಪ್ಪುಂಜಿ ಕೈಮರದಲ್ಲಿ ನೂತನ ವಾಣಿಜ್ಯ ಸಂಕೀರ್ಣ, ಶುದ್ದ ನೀರಿನ ಘಟಕ ಹಾಗೂ ಶೌಚಾಲಯವನ್ನು ಇಂದು ಜಿಲ್ಲಾ ಪಂಚಾಯತಿ ಸದಸ್ಯರಾದ ಶ್ರೀಮತಿ ದಿವ್ಯ ದಿನೇಶ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಇದೇ ರೀತಿ ಅಭಿವೃದ್ಧಿ ಕೆಲಸಗಳು ಈ ಗ್ರಾಮದಲ್ಲಿ ನಡೆಯುತ್ತಿದ್ದರೆ ನುಗ್ಗಿ ಗ್ರಾಮ ಮಾದರಿ ಗ್ರಾಮವಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು.

ಹೆಚ್ ಆರ್ ಜಗದೀಶ್ ಮಾತನಾಡಿ ಗ್ರಾಮ ಪಂಚಾಯತಿ- ಗ್ರಾಮಗಳ ಸುವ್ಯವಸ್ಥೆಯನ್ನು ನಿರ್ವಹಿಸುವ ಒಂದು ಪ್ರಜಾಸತ್ತಾತ್ಮಕ ಸಂಸ್ಥೆ, ಅಭಿವೃದ್ಧಿ ಕೆಲಸ ಕಾರ್ಯಗಳು ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಅನುಷ್ಠಾನಗೊಳಿಸಿದಾಗ ಗ್ರಾಮ ಸಮಗ್ರ ಅಭಿವೃದ್ಧಿ ಹೊಂದುತ್ತದೆ. ಅದೇ ರೀತಿ ಇಂದು ನುಗ್ಗಿ ಗ್ರಾಮದಲ್ಲಿ ಗ್ರಾಮ ವಿಕಾಸ್ ಯೋಜನೆ ಮತ್ತು ಹದಿನಾಲ್ಕನೆ ಹಣಕಾಸು ಹಾಗೂ ಶಾಸನಬದ್ದ ಅನುಧಾನದಲ್ಲಿ 6.55 ಲಕ್ಷ ರೂ ವೆಚ್ಚದಲ್ಲಿ ನಮ್ಮ ನುಗ್ಗಿ ಗ್ರಾಮದಲ್ಲಿ ವಾಣಿಜ್ಯ ಸಂಕೀರ್ಣ ಹಾಗೂ ಶುದ್ದಗಂಗ ನೀರಿನ ಘಟಕ ಹಾಗೂ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಲಾಗಿದೆ. ಗ್ರಾಮದ ಅಭಿವೃದ್ಧಿಗೆ ನನ್ನ ಮೊದಲ ಆಧ್ಯತೆ ನುಗ್ಗಿ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡುವುದೆ ನನ್ನ ಗುರಿ ಎಂದರು..

ಪಂಚಾಯಿತಿಗಳಲ್ಲಿ ಸಿಗುವ ಅನುದಾನಗಳನ್ನು ವ್ಯವಸ್ಥಿತ ಹಾಗೂ ಪಾರದರ್ಶಕವಾಗಿ ರೂಪಿಸಿ ಜನರಿಗೆ ಸದುಪಯೋಗವಾಗುವಂತೆ ಗ್ರಾಮವನ್ನು ಅಭಿವೃದ್ಧಿ ಮಾಡಲಾಗಿದೆ. ಕೇಂದ್ರ ಹಾಗೂ ರಾಜ್ಯ ನೀಡಿರುವ ಅನುಧಾನದಲ್ಲಿ ಶೇ80 ರಷ್ಟು ಕೆಲಸ ಮುಗಿಸಿಯಾಗಿದೆ, ಗ್ರಾಮಪಂಚಾಯತಿ ಅನುಧಾನದಲ್ಲಿ ಮಾಡುವ ಎಲ್ಲಾ ಕೆಲಸಗಳು ಪೂರ್ಣಗೊಂಡಿವೆ. ಸರ್ಕಾರ ಗ್ರಾಮಾಭಿವೃದ್ದಿಗೆ ನೀಡಿದ ಹಣ ಸಂಪೂರ್ಣವಾಗಿ ಬಳಸಲಾಗಿದೆ ಎಂದರು. ಕೇಂದ್ರ ಸರ್ಕಾರದ ಪಂಡಿತ್ ದೀನ್ ದಯಾಳ್ ವಿದ್ಯುತ್ ಯೋಜನೆಯಲ್ಲಿ 36 ಮನೆಗಳಿಗೆ ಉಚಿತವಾಗಿ ವಿದ್ಯುತ್ ಕಂಬ ನೆಟ್ಟು ವಿದ್ಯುತ್ ನೀಡಲಾಗಿದೆ, ಅಂಗವಿಕಲ ವೇತನ ವಿದವಾ ವೇತನ ಸಂದ್ಯಾಸುರಕ್ಷ , ಮನಸ್ವಿನಿ ಯೋಜನೆಯನ್ನು ಗ್ರಾಮದ ಎಲ್ಲ ಅರ್ಹ ಪಲಾನುಭವಿಗಳಿಗೆ ನೀಡಲಾಗಿದೆ. ಗ್ರಾಮದ ಶಾಲೆಗಳು ಹಾಗೂ ಅಂಗನವಾಡಿಗಳಿಗೆ ಪಂಚಾಯತಿ ವತಿಯಿಂದ ಪರಿಕರಗಳನ್ನು ನೀಡಲಾಗಿದೆ

25 ರಲ್ಲಿ ಶಾಲಾ ಮಕ್ಕಳಿಗೆ ಕಂಪ್ಯೂಟರ್ ಕಲಿಕೆಗೆ ಆರ್ಥಿಕ ನೆರವಿನ ಚೆಕ್ ವಿತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಇವೆಲ್ಲ ಸಾದ್ಯವಾಗಿದ್ದು ನಮ್ಮ ನುಗ್ಗಿ ಗ್ರಾಮದ ಗ್ರಾಮಸ್ಥರ ಸಹಕಾರ ಹಾಗೂ ಪ್ರೀತಿಯಿಂದ ಎಂದರು.

ತಾಲೂಕೂ ಪಂಚಾಯತಿ ಸದಸ್ಯ ಸುಧಾಕರ್ ಮಾತನಾಡಿದರು, ನುಗ್ಗಿ ಗ್ರಾಮ ಪಂಚಾಯತಿ ಸದಸ್ಯರು ಬಿಜೆಪಿ ಮುಖಂಡರಾದ ಹೊಸೂರು ದಿನೇಶ್ ಪಿಡಿಒ ಪ್ರಸನ್ನ ಕಾರ್ಯದರ್ಶಿ ವಸಂತ್ ಕುಮಾರ್ ಮಾಜಿ ಅಧ್ಯಕ್ಷ ಸವಿನಾಥ್ ಹಾಗೂ ಎಲ್ಲ ಗ್ರಾಮಸ್ಥರು ಹಾಜರಿದ್ದರು.