ಕೊಪ್ಪ: ಕ್ವಾರಂಟೈನ್’ನಲ್ಲಿದ್ದ ಮೂವರಲ್ಲಿ ಸೋಂಕು ಪತ್ತೆ

ನ್ಯೂಸ್ ಕೊಪ್ಪ, ಮೇ.19: ಮೇ.14ರಂದು ಮುಂಬೈಯಿಂದ ಆಗಮಿಸಿದ್ದ ಒಂದೇ ಕುಟುಂಬದ ಒಂಬತ್ತು ಜನರನ್ನು ಕೊಪ್ಪದ ಹೊರ ವಲಯದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ‌ಮಾಡಲಾಗಿತ್ತು. ಅದರಲ್ಲಿ ಮೂವರಿಗೆ ಕರೋನಾ ಸೋಂಕು ಇರುವುದು ಇಂದು ದೃಢ ಪಟ್ಟಿದೆ.

ಎನ್.ಆರ್ ಪುರ ತಾಲೂಕಿನ ಸೀತೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆರೆಗದ್ದೆ ಮೂಲದವರು ಮುಂಬೈಯಲ್ಲಿ ನೆಲೆಸಿದ್ದು, ಕಳೆದ 14ರಂದು ಪಾಸ್ ಪಡೆದು ಆಗಮಿಸಿದ್ದರು.

16 ರಂದು ಏಳು ವರ್ಷದ ಹುಡುಗ, ಹತ್ತು ವರ್ಷದ ಹುಡುಗ ಹಾಗೂ ಹದಿನೇಳು ವರ್ಷದ ಯುವತಿಯ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ವರದಿಯಲ್ಲಿ ಕರೊನಾ ಪಾಸಿಟಿವ್ ಬಂದಿದೆ. ಅವರನ್ನು ಚಿಕ್ಕಮಗಳೂರಿನಲ್ಲಿ ‌ನಿಗಧಿತ ಆಸ್ಪತ್ರೆಗೆ ದಾಖಲು‌ ಮಾಡಲಾಗಿದೆ. ಅದೇ, ಕುಟುಂಬದ ಆರು ಜನರ ಗಂಟಲು‌ ದ್ರವದ ಪರೀಕ್ಷೆಯ ಮಾಡಲು ಕ್ರಮ ವಹಿಸಲಾಗುತ್ತಿದೆ.

ಸೋಂಕಿತರು ಆಗಮಿಸಿದ ಕೂಡಲೇ ಕ್ವಾರಂಟೈನ್’ಗೆ ದಾಖಲು ಮಾಡಿದ್ದಾರೆ. ಆದ್ದರಿಂದ ಕೊಪ್ಪ, ಎನ್.ಆರ್ ಪುರದ ತಾಲೂಕಿನಲ್ಲಿ ಸೋಂಕಿತರು ಓಡಾಡಿಲ್ಲ. ಅದ್ದರಿಂದ ಎರಡು ತಾಲೂಕಿನ ಜನತೆ ನಿಟ್ಟುಸಿರು ಬಿಡಬಹುದು.

ಕೃಪೆ: Chikkamagalurulive.com