ಕೊಪ್ಪದ ಶತಮಾನದ ಶಾಲೆಯಲ್ಲಿ ಇಂದು ಶಾರದ ಪೂಜಾ ಸಂಭ್ರಮ

ನ್ಯೂಸ್ ಕೊಪ್ಪ: ಮಕ್ಕಳು ಶಿಕ್ಷಣದ ಹಸಿವನ್ನು ಬೆಳೆಸಿಕೊಂಡರೆ ಈ ಸಮಾಜದಲ್ಲಿ ಎಂತಹ ಸ್ಥಾನಕ್ಕಾದರೂ ಏರಬಹುದು ‘ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣದಿಂದ ಜಗತ್ತು ನಿಂತಿದೆ. ವಿದ್ಯೆ ಇಲ್ಲದೆ ಯಾರೊಬ್ಬರು ಪರಿಪೂರ್ಣ ವ್ಯಕ್ತಿಯಾಗಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆಯ ದಿದ್ದರೆ ಯಾವೊಂದು ಕೆಲಸಕ್ಕೆ ಹೋದರೂ ಪ್ರಯೋಜನವಿಲ್ಲ. ಪರೀಕ್ಷೆಯಲ್ಲಿ ಪಡೆಯುವ ಒಂದೊಂದು ಅಂಕವೂ ಮಹತ್ವವಾಗಿರುತ್ತದೆ. ಅಂಕಕ್ಕೆ ನಮ್ಮ ಜೀವನವನ್ನೇ ಬದಲಾಯಿಸಿ ಬಿಡುವ ಶಕ್ತಿ ಇದೆ’ಎಂದು ಪಟ್ಟಣ ಶಾಲೆಯ ಸಂಪನ್ಮೂಲ ವ್ಯಕ್ತಿ ಹಾಗೂ ಶಿಕ್ಷಕರಾದ ರುದ್ರೇಶ್ ಅಭಿಪ್ರಾಯ ಪಟ್ಟರು. ಕೊಪ್ಪದ ಶತಮಾನದ ಶಾಲೆ ಪಟ್ಟಣದ “ಕೆಪಿಎಸ್” ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶಾರದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

10ಗಂಟೆಗೆ ಶಾಲೆಗೆ ತಳಿರು ತೋರಣ ಕಟ್ಟಿ ಶಾರದಾ ದೇವಿಯ ಭಾವಚಿತ್ರಕ್ಕೆ ಹೂವಿನ ಅಲಂಕಾರ ಮಾಡಿ ಶಾಲೆಯ ವಿಧ್ಯಾರ್ಥಿಯಿಂದಲೆ ಪೂಜೆ ನೆರವೇರಿಸಲಾಯಿತು. ಬಣ್ಣ ಬಣ್ಣದ ಉಡುಗೆ ತೊಟ್ಟ ಶಾಲೆಯ ಎಲ್ಲ ವಿಧ್ಯಾರ್ಥಿಗಳು ಉತ್ಸಾಹದಿಂದ ಪೂಜೆಯಲ್ಲಿ ಪಾಲ್ಗೊಂಡರು

ಪ್ರಭಂದ ಹಾಗೂ ಆಶುಭಾಷಣ ಸ್ಪರ್ದೆಯಲ್ಲಿ ವಿಜೇತರಾದ ವಿಧ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಎಸ್ ಡಿ ಎಂ ಸಿ ಸದಸ್ಯ ವಿಕ್ರಮ್ ಕೊಪ್ಪ, ಮುಖ್ಯ ಶಿಕ್ಷಕರಾದ ಕುಸುಮ, ಶಿಕ್ಷಕಿಯರಾದ ಸಾವಿತ್ರಿ, ಸವಿತ ರುಬಿನಾ ಪವಿತ್ರ, ಶಿಕ್ಷಕರಾದ ಚಂದ್ರಶೇಖರ್, ಜಗದೀಶ್ ಪಾಲ್ಗೊಂಡಿದ್ದರು.

……….ವಿಕ್ರಮ್ ಕೊಪ್ಪ….