ಕೊಪ್ಪ: ಪುಟಾಣಿ ಮಕ್ಕಳ ಆಕರ್ಷಕ ಪಥ ಸಂಚಲನ | ಗಣರಾಜ್ಯ ದಿನದಂದು ಪುಟ್ಟ, ಪುಟ್ಟ ಹೆಜ್ಜೆ ಹಾಕಿದ ಮಕ್ಕಳು

ನ್ಯೂಸ್ ಕೊಪ್ಪ, ಜ.26: 71ನೇ ಗಣರಾಜ್ಯೋತ್ಸವವನ್ನು ಕೊಪ್ಪ ತಾಲೂಕು ಆಡಳಿತದ ವತಿಯಿಂದ ಇಲ್ಲಿನ ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣದಲ್ಲಿ ಸಂಭ್ರಮದಿಂದ ಆಚರಿಸಲಾಗಿದೆ.

ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಶಾಲಾ- ಕಾಲೇಜುಗಳು ಪಥ ಸಂಚಲನದಲ್ಲಿ ಭಾಗಿಯಾಗಿದ್ದು. ವೆಂಕಟೇಶ್ವರ ವಿದ್ಯಾ ಮಂದಿರ ಶಾಲೆಯ ಪುಟ್ಟ ಮಕ್ಕಳು ಪಥ ಸಂಚಲನದಲ್ಲಿ ಹೆಜ್ಜೆ ಹಾಕಿ ಧ್ವಜ ವಂದನೆ ಸಲ್ಲಿಸಿದರು.  ಮಕ್ಕಳ ಪಥ ಸಂಚಲನ ಆಗಮಿಸಿದ್ದ ಅಧಿಕಾರಿಗಳು, ಜನಪ್ರತಿನಿಧಿಗಳ ಹಾಗೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.