ಕೊಪ್ಪ: ಅಪ್ರಾಪ್ತ ಯುವತಿಯ  ಮಾನಭಂಗಕ್ಕೆ ಯತ್ನ | ಆರೋಪಿ‌ ಸೆರೆ


ಜಾಹಿರಾತು


ನ್ಯೂಸ್ ಕೊಪ್ಪ, ನ.20: ಅಪ್ರಾಪ್ತ ಯುವತಿಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಮಾನಭಂಗಕ್ಕೆ‌ ಯತ್ನ ನಡೆಸಿದ‌ ಹಿನ್ನೆಲೆಯಲ್ಲಿ ಓರ್ವ ಯುವಕನನ್ನು ಬಂಧಿಸಲಾಗಿದೆ.
ಬಪ್ಪುಂಜಿ ಕೈಮಾರದ ನಿವಾಸಿಯಾದ ಸುನೀಲ್ ಕುಮಾರ್ ಎಂಬುವವನು‌ ನುಗ್ಗಿ ಗ್ರಾಮದ ಅಪ್ರಾಪ್ತ ಯುವತಿಯನ್ನು ಆಕೆ ಗ್ರಾಮದಿಂದ ಹಿಂಬಾಲಿಸಿಕೊಂಡು ಬಂದಿದ್ದು, ಕೊಪ್ಪದ ರಂಗೋಲಿ ಸ್ಟೋರ್ ಮುಂಭಾಗ ಆಕೆಯ ಕೈಹಿಡಿದು ಎಳೆದು, ಆಕೆಗೆ ಚುಂಬಿಸಲು ಮುಂದಾಗಿ ಆಕೆಯ ಮಾನಭಂಗಕ್ಕೆ ಯತ್ನಿಸಿ ಪ್ರಾಣ ಬೆದರಿಕೆಯನ್ನು ಹಾಕಿದ್ದ ಎಂದು ಅಪ್ರಾಪ್ತ ಯುವತಿಯ ತಂದೆ ಕೊಪ್ಪ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದೂರು ನೀಡಿದ್ದಾರೆ. ಅರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


ಜಾಹಿರಾತು