ಮಗುವಿಗೆ ಬಂದ ಸಣ್ಣ ಜ್ವರಕ್ಕೆ ಟೈಫೈಡ್ ಎಂದು ಚಿಕಿತ್ಸೆ ‌: ಆರೋಪ


ಜಾಹಿರಾತು


ನ್ಯೂಸ್‌ ಕೊಪ್ಪ, ಫೆ.28: ಮಗುವಿಗೆ ಟೈಫೈಡ್ ಜ್ವರ ಇಲ್ಲದಿದ್ದರೂ, ಮೂರು ದಿನಗಳ‌ ಕಾಲ ಅಡ್’ಮಿಟ್ ಮಾಡಿಕೊಂಡಿದ್ದಾರೆ. ಮಗುವಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಔಷಧಿಗಳನ್ನು ನೀಡಿದ್ದಾರೆ ಎಂದು ಕೊಪ್ಪದ ಖಾಸಗಿ ಆಸ್ಪತ್ರೆಯೊಂದರ ಮೇಲೆ ಪಟ್ಟಣದ ಇಂದಿರ ನಗರದ ನಿವಾಸಿ ನವೀನ್ ಆರೋಪ ಮಾಡಿದ್ದಾರೆ.


ಜಾಹಿರಾತು


ಇತ್ತಿಚೆಗೆ ಮಗುವಿಗೆ ಜ್ವರ ಬಂದ ಕಾರಣ ಕೊಪ್ಪದ ಖಾಸಗಿ ಆಸ್ಪತ್ರೆಗೆ ತೆರಳಿ ಮಗುವನ್ನು‌ ಪರೀಕ್ಷಿಸಲಾಯಿತು, ಆಗ ಅಲ್ಲಿನ ಮಕ್ಕಳ ವೈದ್ಯ ಮಗುವಿಗೆ ಟೈಫೈಡ್ ಎಂದು ಮೂರು ದಿನ ಆಸ್ಪತ್ರೆಯಲ್ಲಿ ಇರಲು ಹೇಳಿ ಚಿಕಿತ್ಸೆಯನ್ನು‌ ನೀಡಿದ್ದಾರೆ. ನಂತರ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆದ ಎರಡು ದಿನ ಬಿಟ್ಟು ಮತ್ತೆ ಮಗುವಿಗೆ ಜ್ವರ ಬಂದಿದ್ದು, ಆಗ ಅದೇ, ವೈದ್ಯರ ಬಳಿ‌ ತೆರಳಿದಾಗ, ಆಸ್ವತ್ರೆಯಲ್ಲಿ ವೈದ್ಯರು ಇರಲಿಲ್ಲ, ನಂತರ ಮಣಿಪಾಲ್ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆಗೆ ನೀಡಿದಾಗ, ಮಗುವಿಗೆ ಟೈಫೈಡ್ ಜ್ವರ ಬಂದಿಲ್ಲ ಕೊಪ್ಪದ ವೈದ್ಯರು ಮಗುವಿನ ಬೆಳವಣಿಗೆಯ ಮೇಲೆ ದುಷ್ಟ ಪರಿಣಾಮ ಬೀರುವಂತ ಔಷಧಿಯನ್ನು ನೀಡಿದ್ದಾರೆ. ನಿಮಗೆ ಸುಳ್ಳು ಹೇಳಿ ಅಡ್’ಮಿಟ್ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ ಎಂದು ನವೀನ್ ನ್ಯೂಸ್ ಕೊಪ್ಪದ ಬಳಿ‌ ಹೇಳಿದ್ದಾರೆ.


ಜಾಹಿರಾತು