ಕೊಪ್ಪ: ನವರಾತ್ರಿ ಅಂಗವಾಗಿ ದುರ್ಗೆ ಪ್ರತಿಷ್ಠಾಪನೆ

ನ್ಯೂಸ್ ಕೊಪ್ಪ, ಸೆ.30: ಫ್ರೆಂಡ್ಸ್ ಸರ್ಕಲ್‌ ಗೆಳೆಯರ ಬಳಗದ ವತಿಯಿಂದ ಪಟ್ಟಣದ ಮಾರ್ಕೆಟ್ ರಸ್ತೆಯಲ್ಲಿರುವ ಬಲಮುರಿ ವೀರಗಣಪತಿ ಮತ್ತು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಾನುವಾರ ದುರ್ಗಾ ದೇವಿ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು.
ನೂರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ, ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.