ಕೊಪ್ಪ ಸಹ್ಯಾದ್ರಿ ಲಯನ್ಸ್ ಗೆ ಜಿಲ್ಲಾ ಗೌರ್ನರ್ ಅಧಿಕೃತ ಭೇಟಿ


ಜಾಹಿರಾತು


ನ್ಯೂಸ್ ಕೊಪ್ಪ, ಜ.21: ಕೊಪ್ಪದ ಸಹ್ಯಾದ್ರಿ ಲಯನ್ಸ್ ಸಂಸ್ಥೆಗೆ ಲಯನ್ಸ್ ಜಿಲ್ಲಾ ಗೌರ್ನರ್ ಶ್ರೀ ರೊನಾಲ್ಡ್ ಗೋಮ್ಸ್, ಜಿಲ್ಲಾ ಪ್ರಥಮ ಮಹಿಳೆ ಅನಿತಾ ಗೋಮ್ಸ್ ಅಧಿಕೃತ ಬೇಟಿ ನೀಡಿದರು.


ಜಾಹಿರಾತು


ಕೊಪ್ಪ ಸಹ್ಯಾದ್ರಿ ಲಯನ್ಸ್ ಸಂಸ್ಥೆಯ ಅಧ್ಯಕ್ಷರಾದ
ಎಂ.ಟಿ ಶಂಕರಪ್ಪ ಮಾತನಾಡಿ 1817 ರಲ್ಲಿ ಸ್ಥಾಪನೆಯಾದ ಈ ಸಂಸ್ಥೆ ಈಗ ವಿಶ್ವದ 210 ದೇಶಗಳಲ್ಲಿ ನಲವತ್ತೆಂಟು ಸಾವಿರಕ್ಕೂ ಹೆಚ್ಚು ಸಂಸ್ಥೆಗಳು ಸಮಾಜ ಸೇವೆ ಮಾಡಿಕೊಂಡು ಬರುತ್ತಿದೆ ಎಂದರು.
ಲಯನ್ಸ್ ಕ್ಲಬ್ ಕೊಪ್ಪ ಸಹ್ಯಾದ್ರಿ ಸಂಸ್ಥೆಯು 2003ರಲ್ಲಿ ಸ್ಥಾಪನೆಗೊಂಡು ಇಲ್ಲಿವರೆಗೆ ಅನೆರಕ ಸೇವಾ ಚಟುವಟಿಕೆ ಮಾಡಿಕೊಂಡು ಬಂದಿದೆ ಈ ವರ್ಷ ನಮ್ಮ ಸಂಸ್ಥೆ ವಿಧ್ಯಾರ್ಥಿಗಳ ವಿಧ್ಯಾಭ್ಯಾಸಕ್ಕಾಗಿ ಪುಸ್ತಕ ಮತ್ತು ಪಾಠ ಪರಿಕರಗಳು, ಧನ ಸಹಾಯವನ್ನು ಶಾಲೆಗೆ ನೀಡಲಾಗಿದೆ ಈ ವರ್ಷ ಪ್ರಕೃತಿ ವಿಕೋಪಕ್ಕೆ ಒಳಗಾದ 43 ಕುಟುಂಭಗಳಿಗೆ ಸಹಾಯ ಧನ ನೀಡಲಾಗಿದೆ, ಆರೋಗ್ಯ, ಶಿಕ್ಷಣ, ಪರಿಸರ, ನೈರ್ಮಲ್ಯ, ವನಮಹೋತ್ಸವಗಳನ್ನು ನಡೆಸಲಾಗಿದೆ. ಮುಂದಿನ ತಿಂಗಳು ಉಚಿತವಾಗಿ ಕೃತಕ ಕಾಲು ಜೋಡಣ ಶಿಬಿರ ನಡೆಸಲಾಗುವುದು ಎಂದರು.


ಜಾಹಿರಾತು


ಇಂದು ಪಟ್ಟಣಕ್ಕೆ ಬೇಟಿ ನೀಡಿದ ಜಿಲ್ಲಾ ಗೌರ್ನರ್ ಬೆಳಿಗ್ಗೆ 11 ಘಂಟೆಗೆ ಪುರಭವನದಲ್ಲಿ ಶಂಕರ್ ನೇತ್ರಾಲಯದ ಸಹಯೋಗದೊಂದಿಗೆ ನೇತ್ರದಾನ ಕುರಿತು ಅರಿವಿನ ಶಿಬಿರದ ಉದ್ಘಾಟನೆ ನೆರವೇರಿಸಿದರು. ನಂತರ ಚಿಟ್ಟಿಕೊಡಿಗೆಯ ವಿಶೇಷ ವಿಕಲಚೇತನ ಮಕ್ಕಳ ಶಾಲೆಗೆ ಬೇಟಿ ನೀಡಿ ಶಾಲಾ ಪರಿಕರ ಮತ್ತು ಧನ ಸಹಾಯ ನೀಡಿದರು. ಕೊಪ್ಪ ಪಟ್ಟಣದ ಬಾಳಗಡಿಯಲ್ಲಿ ಸೂಚನ ಫಲಕ ಅಳವಡಿಸಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪ್ರಥಮ ಮಹಿಳೆ ಅನಿತಾ ಗೋಮ್ಸ್, ಕೊಪ್ಪ ಲಯನ್ಸ ಅಧ್ಯಕ್ಷರಾದ ಎಂಟಿ ಶಂಕರಪ್ಪ, ಪ್ರಕಾಶ್ ಕೌರಿ, ರತ್ನಾಕರ್, ಮಾಜಿ ಅಧ್ಯಕ್ಷರಾದ ಬಿ ಎಂ ಕೃಷ್ಣಪ್ಪ, ಪ್ರಭಾ ಪ್ರಕಾಶ್, ಶಂಕರ್ ನೇತ್ರಾಲಯದ ಡಾ. ಶ್ವೇತ ಇದ್ದರು.

ವರದಿ ವಿಕ್ರಮ್ ಕೊಪ್ಪ