ಹಿರೇಕೊಡಿಗೆಯಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ : ಮೆಸ್ಕಾಂ ವಿರುದ್ದ ಗ್ರಾಮಸ್ಥರ ಆಕ್ರೋಶ

ನ್ಯೂಸ್ ಕೊಪ್ಪ, ಮಾ.25: ಸತತ‌ ಮೂರು ದಿನಗಳಿಂದ ಹಿರೇಕೊಡಿಗೆ ಭಾಗದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತಿದ್ದು. ಗ್ರಾಮದಲ್ಲಿ ಕುಡಿಯುವ ನೀರಿಗೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಮೆಸ್ಕಾಂ ವಿರುದ್ಧ ಹಿರೇಕೊಡಿಗೆ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದು. ಸತತ ಮೂರು ದಿನಗಳಿಂದ ವಿದ್ಯುತ್ ಇಲ್ಲ. ಈ ಬಾಗದ ಲೈನ್ ಮ್ಯಾನ್ ಜನ ಸಂಪರ್ಕಕ್ಕೆ ಸಿಗದೇ, ವಿದ್ಯುತ್ ಕಡಿತದ ಬಗ್ಗೆ ಸರಿಯಾದ ಮಾಹಿತಿಯನ್ನು‌ ಸಹ‌ ನೀಡುತ್ತಿಲ್ಲ. ಯುಗಾದಿ ಹಬ್ಬದ ದಿನ ನೀರಿಗೆ ಪರದಾಡಿದು ಸ್ಥಿತಿ ನಿರ್ಮಾಣವಾಗಿದೆ. ರೈತರಿಗೆ ಕೃಷಿಗೆ ನೀರಿಲ್ಲದಂತೆಯಾಗಿದೆ ಎಂದು ಆಕ್ರೋಶ ವ್ಯಕ್ತವಾಗಿದ್ದು ಮೆಸ್ಕಾಂ ಅಧಿಕಾರಿಗಳಿ ಜನ ಶಾಪ ಹಾಕುತ್ತಿದ್ದಾರೆ.

ಹಿರೇಕೊಡಿಗೆ ಗ್ರಾಮ ಪಂಚಾಯಿತಿ, ಬಿಜೆಪಿ ರೈತ ಮೊರ್ಚಾದ ಕಾರ್ಯದರ್ಶಿ ಸದಸ್ಯ ವಿಶ್ವ ಹೊಸ್ಕೆರಿ ನ್ಯೂಸ್ ಕೊಪ್ಪದೊಂದಿಗೆ ಮಾತನಾಡಿ, ಈ ಭಾಗದ ಲೈನ್ ಮ್ಯಾನ್ ರಮೇಶ್ ನಿರ್ಲಕ್ಷತನದಿಂದ ಸಮಸ್ಯೆ ಉಲ್ಬಣವಾಗಿದೆ. ಮೆಸ್ಕಾಂ ಇಂಜಿನಿಯರ್ ಗಳ ಉದಾಸಿನತೆಯಿಂದ ಗ್ರಾಮದಲ್ಲಿ ವಿದ್ಯುತ್ ಇಲ್ಲದೆ ಜನ ನೀರಿಗೆ ಪರದಾಡುವಂತೆಯಾಗಿದೆ ಎಂದು ದೂರಿದ್ದಾರೆ.