ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಪತಿ ಪರಾರಿ

ನ್ಯೂಸ್ ಕೊಪ್ಪ, ಫೆ.03; ತಾಲೂಕಿನ‌ ನುಗ್ಗಿ ಗ್ರಾಮದ ದೇವನ್ ಎಷ್ಟೇಟಿನಲ್ಲಿ ಫೆ.೦1ನೇ ತಾರೀಕಿನಂದು ಎಷ್ಟೇಟಿಗೆ ಕೂಲಿ ಕೆಲಸಕ್ಕೆ ಹೊರಟಿದ್ದ ಪತ್ನಿಯ ಮೇಲೆ ಪತಿಯೇ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಹಲವು ದಿನದ ಹಿಂದೆ ಪತ್ನಿಯೊಂದಿಗೆ ಜಗಳ ಮಾಡಿ ಮನೆಯಿಂದ ಕಾಣೆಯಾಗಿದ್ದ ರಾಜನ್ ಎಂಬ ವ್ಯಕ್ತಿ ಮೊನ್ನೆ ಇದ್ದಕ್ಕಿದ್ದಂತೆ ಎಷ್ಟೇಟಿನ ಕಾಡು ರಸ್ತೆಯಲ್ಲಿ ಪ್ರತ್ಯಕ್ಷವಾಗಿ ಪತ್ನಿಯನ್ನು ಅಡ್ಡಗಟ್ಟಿ ನೆಲಕ್ಕೆ ಹಾಕಿ ಕಲ್ಲಿನಿಂದ ಜಜ್ಜಿದ್ದಾನೆ ಮಹಿಳೆಯ ಆಕ್ರಂದನ ಕೇಳಿ ಅಲ್ಲೆ ಪಕ್ಕದಲ್ಲಿದ್ದ ವ್ಯಕ್ತಿಯೊಬ್ಬರು ಓಡಿಬಂದು ಬಿಡಿಸಿದ್ದಾರೆ ಆರೋಪಿಯು ತಕ್ಷಣ ಸ್ಥಳದಿಂದ ಪರಾರಿಯಾಗಿದ್ದಾನೆ. ಮಹಿಳೆ ತಲೆಗೆ ಬಲವಾಗಿ ಪೆಟ್ಟು ಬಿದ್ದಿದ್ದು ತಕ್ಷಣವೆ ಕೊಪ್ಪದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಐಪಿಸಿ ಸೆಕ್ಷನ್ 341, 504, 324,307, ಪ್ರಕಾರ ಕೇಸು ದಾಖಲಾಗಿದ್ದು ಕೊಪ್ಪ ಠಾಣೆಯ ದಕ್ಷ ಠಾಣಾಧಿಕಾರಿ ಎನ್ ಎನ್ ರವಿ ಪ್ರಕರಣ ಕೈಗೆತ್ತಿಕೊಂಡಿದ್ದು ತಲೆತಪ್ಪಿಸಿಕೊಂಡಿರುವ ಆರೋಪಿ ಅತೀ ಶೀಘ್ರದಲ್ಲಿ ಬಂದನವಾಗುವ ನಿರೀಕ್ಷೆ ಇದೆ..

ಮೇಲಿನ ಪೊಟೋದಲ್ಲಿರುವ ಆರೋಪಿ ಎಲ್ಲಿಯಾದರೂ ಕಂಡರೆ ತಕ್ಷಣ ಕೊಪ್ಪ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ಮಹಿಳೆಯ ಕುಟುಂಭಸ್ಥರು ನ್ಯೂಸ್ ಕೊಪ್ಪ ಮುಖಾಂತರ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ವರದಿ ವಿಕ್ರಮ್ ಕೊಪ್ಪ