ಕೊಪ್ಪದ ಕೊರೊನ ವಾರಿಯರ್ಸ್‌ ವೈದ್ಯರಿಗೆ ಸನ್ಮಾನ

 

ನ್ಯೂಸ್ ಕೊಪ್ಪ: ಮಾರಣಾಂತಿಕ ಕೊರೊನಾ ವೈರಸ್ ಇಡೀ ವಿಶ್ವವೇ ಮಹಾಮಾರಿಯಾಗಿ ಕಾಡುತ್ತಿದೆ. ವಿಶ್ವದ 209 ರಾಷ್ಟ್ರಗಳನ್ನು ಬಾಧಿಸುತ್ತಿರುವ ಕೋವಿಡ್-19 ಇಲ್ಲಿಯವರೆಗೂ 74,767 ಮಂದಿಯನ್ನು ಬಲಿ ಪಡೆದಿದೆ. ಅಮೇರಿಕಾ, ಸ್ಪೇನ್, ಇಟಲಿ, ಫ್ರಾನ್ಸ್, ಯುಕೆನಲ್ಲಿ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಏರುತ್ತಿದೆ. ಭಾರತದಲ್ಲೂ ಕೊರೊನಾ ಸೋಂಕಿತ ಪ್ರಕರಣಗಳು ಗಣನೀಯವಾಗಿ ಏರುತ್ತಲೇ ಇದೆ. ಜಗತ್ತಿಗೆ ದೊಡ್ಡ ಪೀಡೆಯಾಗಿ ಕಾಡುತ್ತಿರುವ ಕೊರೊನಾ ವೈರಸ್ ನ ಕಟ್ಟಿಹಾಕಲು ಎಲ್ಲ ದೇಶಗಳು ಹೋರಾಡುತ್ತಿವೆ, ಅದರಲ್ಲೂ ಕೊರೊನ ವಾರಿಯರ್ಸ್ ಗಳು ತಮ್ಮ ಪ್ರಾಣದ ಹಂಗನ್ನೆ ತೊರೆದು ಸೇವೆ ಮಾಡುತ್ತಿದ್ದಾರೆ. ಕರೊನಾ ಎಂಬಾ ಮಹಾಮಾರಿ ಜಗತ್ತನ್ನೇ ತಲ್ಲಣಗೊಳಿಸಿದೆ. ಅದರಲ್ಲಿ ನಮ್ಮ ಮಲೆನಾಡು ಹೊರತಾಗಿಲ್ಲ
ಕೊರೊನಾ ವೈರಸ್‌ ತಡೆಗಟ್ಟುವಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಸಾರ್ವಜನಿಕರಿಗೆ ಸೇವೆ ನೀಡಿದ ಕೊಪ್ಪ ಸರ್ಕಾರಿ ಆಸ್ಪತ್ರೆಯ ನಾಲ್ವರು ವೈದ್ಯರಿಗೆ ಕೊಪ್ಪ ಇಂದಿರನಗರದ ಶ್ರೀ ಚೌಡೇಶ್ವರಿ ನಾಗದೇವತ ದೇವಸ್ಥಾನ ಸಮಿತಿಯ ಸದಸ್ಯರು ಸನ್ಮಾನಿಸಿದರು,

ತಾಲೂಕು ವೈದ್ಯಾದೀಕಾರಿ ಡಾ,ಮಹೇಂದ್ರ ಕಿರೀಟಿ, ಕೊಪ್ಪ ಸರ್ಕಾರಿ ಆಸ್ಪತ್ರೆಯ ವೈದ್ಯಾದೀಕಾರಿ ಶ್ರೀಮತಿ ಗಾನವಿ, ವೈದ್ಯರಾದ ಉತ್ತಮ್ ಹಾಗೂ ರೂಪಶ್ರಿಯವರು ಸನ್ಮಾನ ಸ್ವೀಕರಿಸಿದರು. ತಾಲೂಕು ವೈದ್ಯಾದೀಕಾರಿ ಮಹೇಂದ್ರ ಕಿರೀಟಿ ಮಾತನಾಡಿ ಕೊರೊನ ವೈರಸ್ ಗೆ ಹೆದರಿಕೊಳ್ಳದೆ ನಾವೆಲ್ಲರೂ ಜವಾಬ್ದಾರಿಯಿಂದ ವರ್ತಿಸಿದರೆ ಈ ಮಹಾಮಾರಿಯನ್ನು ತಡೆಗಟ್ಟಬಹುದು ಎಂದರು, ಇದು ತುಂಬಾ ಕಡಿಮೆ ಜನರಲ್ಲಿ ವಿಕೋಪಕ್ಕೆ ಹೋಗಬಹುದು ಅಷ್ಟೇ ಆದ್ದರಿಂದ ಆರೋಗ್ಯ ಇಲಾಖೆಯ ಸೂಚನೆಗಳನ್ನು ಪಾಲಿಸಿ ಸುರಕ್ಷಿತವಾಗಿರಿ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾಧಿಕಾರಗಳಾದ ಶ್ರೀ ದಿನೇಶ್ ವಂದಿಸಿದರು ನವೀನ್ ಕೆ ಆರ್, ಶ್ರೀನಾಥ್ ಹೆಗ್ಡೆ ಸೇರಿದಂತೆ ಸಮಿತಿಯ ಸದಸ್ಯರೆಲ್ಲ ಹಾಜರಿದ್ದರು.

…………………ವಿಕ್ರಮ್ ಕೊಪ್ಪ