ಏಳು ವರ್ಷಗಳ ನಂತರ ಮತ್ತೊಮ್ಮೆ ಕೊಪ್ಪದಲ್ಲಿ ಆರ್ಟ್ ಅಟ್ಯಾಕ್!

ಮಕ್ಕಳಲ್ಲಿ ಈ ಎಲ್ಲಾ ಬೆಳವಣಿಗೆಗಳ ಸಾಮರ್ಥ್ಯವನ್ನು ಬೆಳೆಸುವ ಹಿನ್ನೆಲೆಯಲ್ಲಿ ಚಿತ್ರಕಲಾ ಶಿಕ್ಷಣ ಕೊಡಿಸಿ. ಮಕ್ಕಳ ಕನಸುಗಳಿಗೆ ಬಣ್ಣ ತುಂಬಿ. ಮನಸ್ಸು ಮಾಡಿದರೆ ಮಕ್ಕಳಲ್ಲಿ ಏನೇಲ್ಲಾ ಕ್ರಿಯಾಶೀಲತೆಯನ್ನು ತುಂಬಬಹುದು ಎನ್ನುವುದಕ್ಕೆ ಚಿತ್ರಕಲೆಯೇ ಸಾಕ್ಷಿಯಾಗುತ್ತದೆ.

ನ್ಯೂಸ್ ಕೊಪ್ಪ, ಫೆ.23: ಕೊಪ್ಪದ ಪ್ರಸಿದ್ದ ಚಂದು ಆರ್ಟ್ಸ್‌ನ ನಾಗರಾಜ್ ಪವಾರ್ ಹಾಗೂ ಶಿವ ಆರ್ಟ್ಸ್ ನ ವಿನೋದ್ ಶೆಟ್ಟಿ ಸಾರಥ್ಯದಲ್ಲಿ ಏಳು ವರ್ಷಗಳ ನಂತರ ಮತ್ತೊಮ್ಮೆ ಕೊಪ್ಪ, ಶೃಂಗೇರಿ, ನ.ರಾ‌ಪುರ. ಕಳಸ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ದೆ, ಪ್ರದರ್ಶನ ಮತ್ತು ಮಾರಾಟದ ಕಾರ್ಯಕ್ರಮವನ್ನು 02 ಮತ್ತು 03 ನೇ ಮೇ 2020 ರಂದು ಕೊಪ್ಪದ ಪುರಭವನದಲ್ಲಿ ಏರ್ಪಡಿಸಿದ್ದಾರೆ. ಪುಟ್ಟ ಮಕ್ಕಳಿಂದ ಹಿಡಿದು ಹಿರಿಯ ನಾಗರೀಕರವರೆಗೂ ಸುಮಾರು 500 ಕಲಾವಿದರು ಈ ಬಣ್ಣದ ಹಬ್ಬದಲ್ಲಿ ಸ್ಪರ್ದಿಸುವ ನಿರೀಕ್ಷೆ ಇದೆ.

ಎಲ್ಲಾ ವಿಭಾಗದಲ್ಲೂ ಮೂರು ಬಹುಮಾನಗಳು ಹಾಗೂ ಭಾಗವಹಿಸಿದ ಎಲ್ಲರಿಗೂ ಸ್ಮರಣಿಕೆ ನೀಡಲಾಗುತ್ತದೆ ಎಂದು ನಾಗರಾಜ್ ಪವಾರ್ ತಿಳಿಸಿದರು.
02-05-2020 ರಂದು ಬೆಳಿಗ್ಗೆ 10 ಗಂಟೆಯಿಂದ ಮದ್ಯಾನ್ನ 01.00 ಗಂಟೆಯವರೆಗೆ ಸ್ಪರ್ಧೆ ನಡೆಯಲಿದ್ದು ಅದೇ ದಿನ ಬೆಳಿಗ್ಗೆ ಶೃಂಗೇರಿ ಕ್ಷೇತ್ರದ ಆಯ್ದ ಸುಮಾರು 20 ಚಿತ್ರ ಕಲಾವಿದರ ಕುಂಚದಲ್ಲಿ ಮೂಡಿದ ಸುಪ್ತ ಮನಸ್ಸಿನಲ್ಲಿ ಅರಳಿದ ಚಿತ್ರಗಳ ಪ್ರದರ್ಶನವೂ ನಡೆಯಲಿದೆ. ನಂತರ ಚಿತ್ರಕಲಾ ತರಬೇತಿ ಹಾಗೂ ಭವಿಷ್ಯದ ಅವಕಾಶಗಳ ಬಗ್ಗೆ ಮಾಹಿತಿ ಕಾರ್ಯಾಗಾರವೂ ನಡೆಯಲಿದೆ ಎಂದರು.

ದಿ 03-05-2020 ರಂದೂ ಸಹ ಚಿತ್ರಗಳ ಪ್ರದರ್ಶನ ಮುಂದುವರೆಯಲಿದ್ದು ಮದ್ಯಾನ್ನ 3 ಗಂಟೆಯಿಂದ ಸಮರೋಪ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ.

ಚಿತ್ರಕಲೆ ಒಂದು ವಿಶ್ವ ಭಾಷೆ

ಚಿತ್ರಕಲೆಯ ಬಗ್ಗೆ ಒಂದಿಷ್ಟು….

`ಬಲ್ಲವನೇ ಬಲ್ಲ ಬೆಲ್ಲದ ರುಚಿಯ‘ ಎನ್ನುವ ಹಾಗೆ ಚಿತ್ರಕಲೆಯ ಸವಿಯು ಸವಿದವನಿಗೇ ಗೊತ್ತು. ಚಿತ್ರಕಲೆಯ ಬಗ್ಗೆ ತಿಳಿಯುವ ಮುನ್ನ ನಾವು ಕಲೆಯ ಬಗ್ಗೆ ಅರಿತುಕೊಳ್ಳಲೇಬೇಕು. ಕಲೆ ಎಂದರೇನು? ಎಂಬುದನ್ನು ತಿಳಿಯುವುದರೊಂದಿಗೆ `ಕಲೆ’ , `ಚಿತ್ರ’ ಹಾಗೂ ಚಿತ್ರಕಲೆ ಬಗ್ಗೆ ಅರಿತುಕೊಳ್ಳಬೇಕಾಗಿದೆ. ಕಲೆ ಎಂದರೇನು? ಈ ಪ್ರಶ್ನೆಗೆ ಉತ್ತರಿಸುವುದು ಸುಲಭವಲ್ಲ ಸಮುದ್ರದ ದಡದಲ್ಲಿ ನಿಂತು .. ಒಂದು ಬೊಗಸೆ ಸಮುದ್ರದ ನೀರನ್ನು ಎತ್ತಿ ಹಿಡಿದು ` ನೋಡಿ ನನ್ನ ಬೊಗಸೆಯಲ್ಲಿರುವುದೇ ಸಮುದ್ರ ‘ ಎಂದು ಕೂಗಿಕೊಂಡಂತೆ. ಮನುಷ್ಯ ಜೀವನದ ಉತ್ತಮ ರೂಪ ಅದು ಸಂಸ್ಕೃತಿ. ಆ ಸಂಸ್ಕೃತಿಯ ಉತ್ತಮ ರೂಪ ಕಲೆಗಳು, ಕಲೆಗಳಲ್ಲಿ ಲಲಿತ ಕಲೆಗಳು ಉತ್ತಮವಾದುವು. ಇವುಗಳಲ್ಲಿ ಹೆಚ್ಚು ಪ್ರಾಧಾನ್ಯತೆ ಪಡೆದಿರುವುದು ಚಿತ್ರಕಲೆ, ಶಿಲ್ಪಕಲೆ ಮುಂತಾದ ದೃಶ್ಯಕಲೆಗಳು.

ಚಿತ್ರಕಲೆ ಚಿತ್ತಾರ ಗೀಚಾಟ ಇವೆಲ್ಲ ನಮಗೆ ಸಂಬಂಧಿಸಿದ್ದಲ್ಲ; ಇದು ಕಲಾಶಿಕ್ಷಕರಿಗೆ ಮತ್ತು ಚಿತ್ರಕಲಾ ವಿದ್ಯಾರ್ಥಿಗಳಿಗೆ ಮಾತ್ರ ಎಂದು ಭಾವಿಸಬೇಡಿ. ಚಿತ್ರಕಲೆಯು ರೂಪರಚನಾ ಸಾಮರ್ಥ್ಯ ಕಡಿಮೆ ಇರುವ ಹಾಗೂ ಬೌದ್ಧಿಕವಾಗಿ ಮಂದವಾಗಿರುವ ಮಕ್ಕಳಿಗೆ ಮಹತ್ವದ್ದಾಗಿದೆ. ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಸೃಜನಾತ್ಮಕ ಗುಣಗಳನ್ನು ಹುಟ್ಟುತ್ತದೆ. ಸ್ವಾತಂತ್ರ್ಯ ನೀಡಿ ಆಲೋಚನಾಶಕ್ತಿಯನ್ನು ಉಪಯೋಗಿಸುವಂತೆ ಮಾಡುತ್ತದೆ. ಬುದ್ಧಿಮತ್ತೆ ಬೆಳೆಯುತ್ತದೆ

ಮಗುವಿನ ಮಾನಸಿಕ ಬೆಳವಣೆಗೆಗೆ ಸ್ವಾಭಾವಿಕ ಸಾಧನ ‘ಹಳೆಮನೆಯ ಬಿಟ್ಟು, ಹೊಸಮನೆಗೆ ಬಂದೆವು ಸಾಮಾನು ಸಟ್ಟು ಅಲ್ಲಿಂದಿಲ್ಲಿಗೆ ಬಂದವು ಮಗು ಬಿಡಿಸಿದ ಗೋಡೆ ಗೀಚು, ಚಿತ್ರ ಮಾತ್ರ ತರಲಾಗಲಿಲ್ಲ.’ ಕನ್ನಡದ ಕವಿಯೊಬ್ಬನ ಈ ಸಾಲುಗಳು ಮುಗ್ಧ ಮಗುವಿನ ಗೀಚಾಟದ ಹಿಂದೆ ತುಡಿದ ನೆನಪು, ನೋವು ಹರ್ಷಗಳನ್ನು ಹೇಳುತ್ತವೆ. ಮಕ್ಕಳ ಚಿತ್ರಗಳಲ್ಲಿ ಹೆಚ್ಚಾಗಿ ಕೆಂಪು, ಹಳದಿ ಬಣ್ಣಗಳ ಬಳಕೆ ಹೆಚ್ಚಾಗಿರುತ್ತದೆ. ಚಿತ್ರಕಲೆ ಮಗುವಿಗೆ ತುಂಬಾ ಆನಂದ ಕೊಡುವ ಪ್ರಕ್ರಿಯೆ, ಯಾಕೆಂದರೆ ತಾನು ರೂಪಿಸಿದ ಚಿತ್ರದ ಮೂಲಕ ತನ್ನ ಮನಸ್ಸಿನಲ್ಲಿರುವ ಅದೃಶ್ಯವಾದ ಅನೇಕ ಭಾವನೆಗಳ ಸ್ವರೂಪವನ್ನು ತಾನೇ ಸೃಷ್ಟಿಸಿಕೊಳ್ಳುತ್ತದೆ.

ಚಿತ್ರಕಲೆಯು ಮಕ್ಕಳ ರಚನಾ ಸಾಮರ್ಥ್ಯದ ಬೆಳವಣಿಗೆ, ಭಾವಾಭಿವ್ಯಕ್ತಿ, ಕಲ್ಪನಾಶಕ್ತಿ ವರ್ಧಿಸುವುದಕ್ಕೆ ಅವಕಾಶ ನೀಡುತ್ತದೆ. ಕೆಲವು ಹಂತಗಳಲ್ಲಿ ಮಗು ಮಾತಿನಲ್ಲಿ ವ್ಯಕ್ತಪಡಿಸಲಾಗದ ತನ್ನ ಸಂವೇದನೆಯನ್ನು ಹೊರಗೆಡವಲು ಚಿತ್ರಕಲೆಯಂತಹ ಮೌನ ಭಾಷೆಯನ್ನು ಅವಲಂಭಿಸುತ್ತದೆ. ಚಿತ್ರಕಲೆಯೆಂಬ ಈ ವರ್ಣಮಯ ಕ್ರಿಯೆ ಮಗುವಿನ ಆಪ್ತಮಿತ್ರನಂತೆ. ಯಾಕೆಂದರೆ ತಾನು ರೂಪಿಸಿದ ಚಿತ್ರದ ಮೂಲಕ ತನ್ನ ಮನಸ್ಸಿನಲ್ಲಿರುವ ಅದೃಶ್ಯವಾದ ಅನೇಕ ಭಾವನೆಗಳ ಸ್ವರೂಪವನ್ನು ತಾನೇ ಸೃಷ್ಟಿಸಿ ಅದನ್ನು ತಾನೇ ನೋಡಿ ಆನಂದಿಸುತ್ತದೆ

ಮಕ್ಕಳಲ್ಲಿ ಈ ಎಲ್ಲಾ ಬೆಳವಣಿಗೆಗಳ ಸಾಮರ್ಥ್ಯವನ್ನು ಬೆಳೆಸುವ ಹಿನ್ನೆಲೆಯಲ್ಲಿ ಚಿತ್ರಕಲಾ ಶಿಕ್ಷಣ ಕೊಡಿಸಿ. ಮಕ್ಕಳ ಕನಸುಗಳಿಗೆ ಬಣ್ಣ ತುಂಬಿ. ಮನಸ್ಸು ಮಾಡಿದರೆ ಮಕ್ಕಳಲ್ಲಿ ಏನೇಲ್ಲಾ ಕ್ರಿಯಾಶೀಲತೆಯನ್ನು ತುಂಬಬಹುದು ಎನ್ನುವುದಕ್ಕೆ ಚಿತ್ರಕಲೆಯೇ ಸಾಕ್ಷಿಯಾಗುತ್ತದೆ.

ಚಿತ್ರಗಳ ಮೂಲಕ ನಾವು ಮಕ್ಕಳಿಗೆ ಹೀಗೆ ಪರಿಣಾಮಕಾರಿಯಾಗಿ ಶಿಕ್ಷಣ, ಮಾರ್ಗದರ್ಶನ, ಉತ್ತಮ ಸಂಸ್ಕಾರ ನೀಡಬಹುದು. ನಾಗರಾಜ್ ಪವಾರ್ ಹಾಗೂ ವಿನೋದ್ ಶೆಟ್ಟಿ ಯವರ ಕಾರ್ಯ ಶ್ಲಾಘನೀಯ ಇಂದಿನ ಕಾಲದಲ್ಲಿ ಮಕ್ಕಳಿಗೆ ಮೊಬೈಲ್ ಚಟದಿಂದ ಪಾರುಮಾಡುವಂತ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಈ ಕ್ಷೇತ್ರದ ಎಲ್ಲ ಚಿತ್ರಕಲಾಭಿಮಾನಿಗಳೂ ಕೈಜೋಡಿಸೋಣ.

……ವಿಕ್ರಮ್ ಕೊಪ್ಪ…