ಜನತಾ ಕರ್ಫ್ಯೂಗೆ ಕೊಪ್ಪ ಸ್ಥಬ್ದ : ಪ್ರಧಾನಿ ಕರೆಗೆ ಬೆಂಬಲ

ನ್ಯೂಸ್ ಕೊಪ್ಪ, ಮಾ.22: ಕರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ಜನತಾ ಕರ್ಫ್ಯೂಗೆ ಕೊಪ್ಪ ತಾಲೂಕು ಸಂಪೂರ್ಣ ಸ್ಥಬ್ದವಾಗಿದ್ದು, ಪಟ್ಟಣ ಸೇರಿದಂತೆ ಹಳ್ಳಿಗಳಲ್ಲಿಯೂ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿ, ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಆದಿತ್ಯವಾರ ಮನೆಯಲ್ಲಿ ಉಳಿದು ಐದು ಗಂಟೆ ಸುಮಾರಿಗೆ ಚಪ್ಪಾಳೆ ತಟ್ಟಿ ವೈದ್ಯಕೀಯ ಲೋಕಕ್ಕೆ ಧನ್ಯವಾದ ಸಲ್ಲಿಸಿದರು.

ಕೊಪ್ಪ ಪಟ್ಟಣದಲ್ಲಿ ಮುಂಜಾನೆಯಿಂದಲೇ ಅಂಗಡಿ, ಹೋಟೆಲ್‌ಗಳು ಬಂದಿದ್ದು, ಆಟೋಗಳು, ಬಸ್‌ಗಳು ರಸ್ತೆಗೆ ಇಳಿಯದ ಕಾರಣ ಆಟೋ ನಿಲ್ದಾಣ, ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ಭಾನುವಾರ ಸಂತೆಯನ್ನು ಸ್ಥಗಿತಗೊಳಿಸಲಾಗಿತ್ತು, ಮೀನು ಮಾರುಕಟ್ಟೆಗಳಲ್ಲಿ ವ್ಯಾಪಾರ ಸ್ಥಗಿತಗೊಳಿಸಿ ಜನತಾ ಕರ್ಫ್ಯೂಗೆ ಬೆಂಬಲ ವ್ಯಕ್ತ ಪಡಿಸಲಾಗಿದೆ.