ಕೊಪ್ಪದಲ್ಲಿ ಮಳೆಯ ರೌದ್ರಾವತಾರ ಮುಸುರೆಹಳ್ಳ ಸೇತುವೆ ಕುಸಿತ

ನ್ಯೂಸ್ ಕೊಪ್ಪ, ಆ.10: ಕೊಪ್ಪದಲ್ಲಿ ಎಡಬಿಡದೆ ಸುರಿಯುತ್ತಿರುವ ರೌದ್ರ ಮಳೆಗೆ ಬಾಳಗಡಿಯಲ್ಲಿನ ಮುಸುರೆಹಳ್ಳದ ಒಂದು ಪಾರ್ಶ್ವ ಕುಸಿದ್ದು ಬಿದ್ದಿದ್ದು ಸೇತುವೆಯ ಒಂದು ಬದಿಯ ರಸ್ತೆಯಲ್ಲಿ ಸಂಚಾರ ನಿಷೇದಿಸಲಾಗಿದೆ. ಸೇತುವೆಯ ಮಣ್ಣು ಕುಸಿಯುತ್ತಲೆ ಇದ್ದು ಸಂಪೂರ್ಣ ಸೇತುವೆಗೆ ಗಂಡಾಂತರ ಎದುರಾಗಿದೆ.

ಸೇತುವೆ ಕುಸಿತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಕೊಪ್ಪ ಠಾಣಾಧಿಕಾರಿಗಳಾದ ಪುಟ್ಟೇಗೌಡರು ಅಲ್ಲಿ ಸಾರ್ವಜನಿಕರ ಸಹಾಯದೊಂದಿಗೆ ಮುಂಜಾಗ್ರತಾ ಕ್ರಮವಾಗಿ ಒಂದು ಬದಿಯ ರಸ್ತೆಗೆ ಕಲ್ಲು ಸಿಮೆಂಟ್ ಪೈಪ್ ಅಡ್ಡ ಇಟ್ಟು ಸಂಚಾರ ನಿಷೇದಿಸಿದರು.