ಗಾಂಧೀಜಿ “ಆದರ್ಶ” ಶಾಸ್ತ್ರೀಜೀ ಸರಳತೆ” ಈಗಿನ ಯುವಕರು ಮೈಗೂಡಿಸಿಕೊಳ್ಳಬೇಕು: ಹೆಚ್ ಆರ್ ಜಗದೀಶ್

150 ನೇ ಗಾಂಧೀ ಜಯಂತಿ ಹಾಗೂ 115 ನೇ ಶಾಸ್ತ್ರೀಜಿ ಜಂಯಂತಿಯನ್ನು ಅರ್ಥಪೂರ್ಣವಾಗಿ‌ ಆಚರಿಸಿದ ನುಗ್ಗಿ ಗ್ರಾಮದ ಗ್ರಾಮಸ್ಥರು.

ನ್ಯೂಸ್ ಕೊಪ್ಪ: ಗಾಂಧೀಜಿ ಹಾಗೂ ಶಾಸ್ತ್ರೀಜೀ ಜಯಂತಿಯ ದಿನವನ್ನು ತಾಲೂಕಿನ ನುಗ್ಗಿ ಗ್ರಾಮ ಪಂಚಾಯತಿ ವತಿಯಿಂದ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. ಮಧ್ಯಪಾನ ಪ್ಲಾಸ್ಟಿಕ್ ನಂತಹ ಸಾಮಾಜಿಕ ಪಿಡುಗುಗಳ ಬಗ್ಗೆ ನುಗ್ಗಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಎಚ್ ಆರ್ ಜಗದೀಶ್ ರವರು ಗ್ರಾಮಸ್ಥರು, ಶಾಲಾ ವಿಧ್ಯಾರ್ಥಿಗಳು, ಶಾಲಾ ಶಿಕ್ಷಕರು ಪಂಚಾಯತಿ ಸದಸ್ಯರು ಇವರನ್ನೆಲ್ಲ ಒಟ್ಟುಗೂಡಿಸಿ ಇಡಿ ಗ್ರಾಮದಲ್ಲಿ‌ ಜಾಗೃತಿ ಮೂಡಿಸುವ ಅರ್ಥಪೂರ್ಣ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಹಾಗೂ ಶಾಸ್ತ್ರೀಜಿ‌ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಗಾಂಧೀಜಿ ದೇಶದ ಎಲ್ಲ ಜನರಿಗೆ ಸೇರಿದ ಶಕ್ತಿಯಾಗಿದ್ದರು. ಗ್ರಾಮರಾಜ್ಯ- ರಾಮರಾಜ್ಯದ ಕನಸು ಕಂಡಿದ್ದರು. ಅವರು ತಿಳಿಸಿದಂತೆ ನಾವೆಲ್ಲರೂ ಭಾರತೀಯರು ಎಂಬ ಭಾವನೆ ಹೊಂದಿ ದೇಶದ ಅಭಿವದ್ಧಿಗಾಗಿ ಶ್ರಮಿಸಬೇಕು ಎಂದರು
ಇಂದಿನ ಯುವಕರು ಗಾಂಧೀಜಿಯವರ ಆದರ್ಶ, ಅಹಿಂಸೆ, ಶಾಂತಿ ,ಹಾಗೂ ಶಾಸ್ತ್ರೀಜೀಯವರ ಗಟ್ಟಿ ನಾಯಕತ್ವ ಹಾಗೂ ಸರಳತೆಯನ್ನು ಮೈಗೂಡಿಸಿಕೊಳ್ಳಬೇಕಾದ ಅಗತ್ಯತೆಯನ್ನು ವಿವರಿಸಿದರು. ನಂತರ ಗ್ರಾಮದ ಎಲ್ಲಾ ಅಂಗನವಾಡಿಗಳಿಗೆ ಗ್ರಾಮ ಪಂಚಾಯತಿ ವತಿಯಿಂದ ಚಾಪೆ ಹಾಗೂ ನೀರಿನ ಪಿಲ್ಟರ್ ಗಳನ್ನು ವಿತರಿಸಲಾಯಿತು. ಪ್ರೌಡಶಾಲಾ ಮಕ್ಕಳಿಗೆ ಸೈಕಲ್ ವಿತರಿಸಲಾಯಿತು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಡಶಾಲೆಯ ವಿಧ್ಯಾರ್ಥಿಗಳು ಸ್ವಚ್ಚತಾ ಆಂದೋಲನ ನಡೆಸಿದರು ಶಾಲೆ ಹಾಗೂ ಗ್ರಾಮ ಪಂಚಾಯತಿ ಆವರಣ ಶ್ರಮಧಾನದ ಮೂಲಕ ಸ್ವಚ್ಚಗೊಳಿಸಿದರು

ಈ ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲ ಶಿಕ್ಷಕರು, ಗ್ರಾಮಸ್ಥರು ಗ್ರಾಮ ಪಂಚಾಯತಿಯ ಎಲ್ಲಾ ಸದಸ್ಯರು ಸೇರಿ ಈ ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ವಿಕ್ರಮ್ ಕೊಪ್ಪ…….