ಫೆ.9 ರಂದು ಪ್ರಭೋದಿನಿ ಗುರುಕುಲ ಅರ್ಧಮಂಡಲೋತ್ಸವದ ಸಮಾರೋಪ | ಸರಸಂಘಚಾಲಕ್ ಮೋಹನ್ ಭಾಗವತ್ ಭಾಗಿ

ಪ್ರಭೋದಿನಿ ಗುರುಕುಲವು ಕಳೆದ 24 ವರ್ಷಗಳಿಂದ ಸ್ವಸ್ಥ ಸಮಾಜವನ್ನು ಕಟ್ಟುವ ಮಹೋನ್ನತ ಉದ್ದೇಶದಿಂದ ಗುರುಕುಲ ಶಿಕ್ಷಣದ ಪುನರುತ್ತಾನಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.

ನ್ಯೂಸ್ ಕೊಪ್ಪ, ಫೆ.09: ಇಂದು ಭಾರತದಲ್ಲಿ ಶಿಕ್ಷಣವಿದೆ, ಆದರೆ ಶಿಕ್ಷಣದಲ್ಲಿ ಭಾರತೀಯತೆ ಇಲ್ಲ. ಭಾರತೀಯ ಶಿಕ್ಷಣ ವಿಲ್ಲದೆ ದೇಶಪ್ರೇಮ, ಹಾಗೂ ಭಾರತೀಯರ ನಿರ್ಮಾಣ ಅಸಾಧ್ಯ.


ಜಾಹಿರಾತು


ಶಿಕ್ಷಣ ಕ್ಷೇತ್ರದಲ್ಲಿ ಭಾರತೀಕರಣದ ಬಗ್ಗೆ 30 ವರ್ಷಗಳ ಹಿಂದೆಯೇ ಶಿಕ್ಷಣ ತಜ್ಞರ ಗುಂಪೊಂದು ಚರ್ಚೆ ಮಾಡಿ, ಭಾರತೀಯ ಶಿಕ್ಷಣ ಪರಂಪರೆಯಿಂದ ಮಾತ್ರ ಸಮಾಜದ ಏಳ್ಗೆ ಸಾಧ್ಯ ಎಂಬ ನಿರ್ಧಾರ ತಳೆದಿತ್ತು. 1970ರ ದಶಕದಲ್ಲಿ ರೂಪು ತಳೆದ ವಿದ್ವಾಂಸರ ಒಮ್ಮತದ ಅಭಿಪ್ರಾಯದ ಫಲವೇ ಪ್ರಸ್ತುತ ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗುರುಕುಲಗಳು. ಶಂಕರಾಚಾರ್ಯರ ಪುಣ್ಯ ತಪೋಭೂಮಿ ಶೃಂಗೇರಿಯ ಅನತಿ ದೂರದಲ್ಲಿರುವ ಹರಿಹರಪುರದ ಪವಿತ್ರ ತುಂಗಾತಟದ ಚಿತ್ರಕೂಟದಲ್ಲಿ ಕಳೆದೆರಡು ದಶಕಗಳಿಂದ ಋಷಿಪ್ರಣೀತವಾದ ಆರ್ಷವಿದ್ಯಾ ಪರಂಪರೆಯ ಆಧಾರದಲ್ಲಿ ರೂಪುಗೊಂಡ ಗುರುಕುಲ.

ಪ್ರಸ್ತುತ ಪ್ರಬೋಧಿನೀ ಗುರುಕುಲದಲ್ಲಿ ಕರ್ನಾಟಕದ 24 ಜಿಲ್ಲೆಗಳ 63 ತಾಲೂಕುಗಳ 91 ಸ್ಥಾನಗಳಿಂದ ಆಯ್ಕೆಯಾಗಿರುವ 103 ವಿದ್ಯಾರ್ಥಿಗಳು ಅಧ್ಯಯನ ನಿರತರಾಗಿದ್ದಾರೆ 12 ವರ್ಷಗಳ ಅವಧಿಯಲ್ಲಿ, ವೇದ, ವಿಜ್ಞಾನ, ಯೋಗ, ಕೃಷಿ ಭಗವದ್ಗೀತೆ, ವೇದಗಣಿತ, ತರ್ಕಶಾಸ್ತ್ರ, ಪದಾರ್ಥ, ವಿಜ್ಞಾನ, ರಾಮಾಯಣ, ಮಹಾಭಾರತ, ಪುರಾಣಗಳು,ಉಪನಿಷತ್ತುಗಳು, ಬ್ರಹ್ಮಸೂತ್ರ, ಅಮರಕೋಶ, ಮುಂತಾದ ಪ್ರಾಚೀನ ವಿಶಿಷ್ಟ ಕಲಿಕಾ ವಿಷಯಗಳೊಂದಿಗೆ ವಿಜ್ಞಾನ. ಇತಿಹಾಸ, ಗಣಿತ, ಭೂಗೋಳ, ಕನ್ನಡ, ಹಿಂದಿ, ಆಂಗ್ಲಬಾಷೇ, ಕಂಪ್ಯೂಟರ್, ಮುಂತಾದ ಆದುನಿಕ ವಿಷಯಗಳನ್ನು ಒಳಗೊಂಡ ಪಂಚಮುಖಿ ಶಿಕ್ಷ ಣವನ್ನು ಜಾತಿ ಮತ ಅಂತಸ್ತು ತಾರತಮ್ಯ ಭೇದವಿಲ್ಲದೇ ವಿಶಾಲ ಹಿಂದೂ ಸಮಾಜಕ್ಕೆ ನೀಡುತ್ತಿರುವ ಕೇಂದ್ರವೇ ಪ್ರಬೋಧಿನೀ ಗುರುಕುಲ. ಪರೀಕ್ಷೆಗಳ ಬಂಧನ, ಪಠ್ಯಪುಸ್ತಕದ ಚೌಕಟ್ಟಿರದ ಸಮಗ್ರ ಅಧ್ಯಯನ ಪದ್ಧತಿ ಗುರುಕುಲದ ವಿಶೇಷತೆಗಳಲ್ಲೊಂದು. ಕಾಲಕಾಲಕ್ಕೆ ತಕ್ಕಂತೆ ತಾವೇ ತಯಾರಿಸಿದ ಪ್ರಶ್ನೆ ಪತ್ರಿಕೆಗಳಿಗೆ ತಾವೇ ಉತ್ತರ ಹುಡುಕುವ ಜ್ಞಾನಾವಲೋಕನ ಪದ್ಧತಿ ಗುರುಕುಲದಲ್ಲಿದೆ.

ಈಗಾಗಲೇ ಗುರುಕುಲದಲ್ಲಿ ಅಧ್ಯಯನ ಪೂರೈಸಿದ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸ್ವಾವಲಂಬಿ ಕೃಷಿಕರಾಗಿ, ಕಾಲೇಜು-ವಿಶ್ವವಿದ್ಯಾನಿಲಯಗಳಲ್ಲಿ ಉಪನ್ಯಾಸಕರಾಗಿ, ಇದೇ ಪ್ರಭೋದಿನಿ ಗುರುಕುಲದಲ್ಲಿ ಆಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಅರ್ಧಮಂಡಲೋತ್ಸವ

ಅರ್ಧಮಂಡಲೋತ್ಸವ ಕಾರ್ಯಕ್ರಮದ ಬಗ್ಗೆ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಭೋದಿನಿ ಟ್ರಸ್ಟ್ ನ ಕಾರ್ಯಧರ್ಶಿ ಉಮೇಶ್ ರಾವ್
ಸನಾತನ ಸಂಸ್ಕೃತಿಯಲ್ಲಿ 48 ವರ್ಷಕ್ಕೆ ಒಂದು ಮಂಡಲ. 1995ರಲ್ಲಿ ಆರಂಭಗೊಂಡ ಪ್ರಭೋದಿನಿ ಗುರುಕುಲಕ್ಕೆ ಈಗ 24 ವರ್ಷಗಳು 2019-2020 ನೇ ವರ್ಷವು “ಪ್ರಭೋದಿನಿ ಗುರುಕುಲದ ಅರ್ಧಮಂಡಲೋತ್ಸವದ ವರ್ಷ” ಈ ಹಿನ್ನಲೆಯಲ್ಲಿ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಯೋಗ,ಕೃಷಿ, ಮತ್ತು ಪರಿಸರ ಜಾಗೃತಿ, ಇವುಗಳಿಗೆ ಸಂಭಂದಪಟ್ಟ ವಿಚಾರ ಸಂಕಿರಣಗಳನ್ನು, ಮತ್ತು ಸಮಾಜದ ವಿವಿದ ಕ್ಷೇತ್ರಗಳ ಪ್ರಮುಖರ ನಡುವೆ ವಿಚಾರಗೋಷ್ಠಿ ಸಮಾವೇಶಗಳನ್ನು‌ ಕರ್ನಾಟಕದ ಆಯ್ದ 36 ಪ್ರಮುಖ ಸ್ಥಾನಗಳಲ್ಲಿ “ಗುರುಕುಲ ಪರಿಚಯ” ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಇದು ವರೆಗೂ 10,000 ಕ್ಕೂ ಹೆಚ್ಚು ಜನರನ್ನು ತಲುಪುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.


 

ಜಾಹಿರಾತು


ಫೆ.9- 2020 ರಂದು ಬೆಳಗ್ಗೆ 11ಕ್ಕೆ ಸಮಾರೋಪ ಸಮಾರಂಭ ಏರ್ಪಡಿಸಲಾಗಿದೆ. ಉತ್ಸವ ಸಮಿತಿ ಗೌರವಾಧ್ಯಕ್ಷ ಡಾ. ವಿ.ಆರ್‌.ಗೌರೀಶಂಕರ್‌ ಅಧ್ಯಕ್ಷತೆ ವಹಿಸಲಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್‌ ಭಾಗವತ್‌ ಸಮಾರೋಪ ಭಾಷಣ ಮಾಡಲಿದ್ದಾರೆ. ಅಮೆರಿಕದ ವೇದ ವಿದ್ವಾಂಸ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಡೇವಿಡ್‌ ಫ್ರಾಲಿ ಪಾಲ್ಗೊಳ್ಳಲಿದ್ದಾರೆ.
ಪದ್ಮಶ್ರೀ ಡಾ, ವಿಜಯ ಸಂಕೇಶ್ವರ್, ಸಮಿತಿಯ ಕಾರ್ಯಾಧ್ಯಕ್ಷರಾದ ಎಚ್ ಬಿ ರಾಜಗೋಪಾಲ್ ಮುಂತಾದ ಗಣ್ಯರು ಪಾಲ್ಗೊಳ್ಳುವ ಈ ಕಾರ್ಯಕ್ರಮ, ಇದಕ್ಕೂ ಮೊದಲು ಮಕ್ಕಳಿಂದ ಗುರುಕುಲ ದರ್ಶನಂ ಕಾರ್ಯಕ್ರಮ ನಡೆಯಲಿದೆ ಎಂದರು.

ಫೆ.8 ರಂದು ಶನಿವಾರ ಬೆಳಿಗ್ಗೆ 10-30ಕ್ಕೆ ಗುರುಕುಲದಲ್ಲಿ ಪ್ರಭೋದಿನಿ ಗುರುಕುಲದ ಶಿಕ್ಷಣ ಕ್ರಮವನ್ನು ಬಿಂಬಿಪ್ರವ ಪ್ರದರ್ಶಿನಿ ಹಾಗೂ ಗುರುಕುಲ ಶಿಕ್ಷಣ ಸಂಭಂದಿತ 3 ಗ್ರಂಥಗಳು ಲೋಕಾರ್ಪಣೆಗೊಳ್ಳಲಿವೆ. ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿಗಳಾದ ಶ್ರೀ ಹರೀಶ್ ಪಾಂಡೆ ನೆರವೇರಿಸಲಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಕಾರ್ಯಾಧ್ಯಕ್ಷರಾದ ಹೆಚ್ ಬಿ ರಾಜಗೋಪಾಲ್ ಉಪಸ್ಥಿತಿ ಇದ್ದರು.

ವರದಿ: ವಿಕ್ರಮ್ ಕೊಪ್ಪ