ಭೂ ತಾಯಿಗೆ ಬಯಕೆ ತೀರಿಸಿದ ಸಂಭ್ರಮದಲ್ಲಿ ಮಲೆನಾಡ ರೈತ

ನ್ಯೂಸ್ ಕೊಪ್ಪ, ಆ.13: ಮಲೆನಾಡಿನ ಭಾಗದಲ್ಲಿ ಭೂಮಿ ಹುಣ್ಣಿಮೆ ಬರುತ್ತಿದಂತೆ ಭೂಮಿ ಮೇಲೆ ಬೆಳೆದ ಬೆಳೆಗಳು ಫಲವನ್ನು ನೀಡುವ ಸಮಯ. ಈ ವೇಳೆಯಲ್ಲಿ ಮಲೆನಾಡು ಭಾಗದಲ್ಲಿ ಭೂಮಿ ಗರ್ಭಿಣಿಯಾಗಿದ್ದಳೆ ಆಕೆಗೆ ಬಯಕೆ ತಿ

ತೀರಿಸಬೇಕೆಂದು ಇಲ್ಲಿನ ರೈತರು ಭೂಮಿ ಹುಣ್ಣಿಮೆಯ ಹೆಸರಿನಲ್ಲಿ ವಿಶೇಷವಾದ ಆಚರಣೆಯನ್ನು ಮಾಡಿಕೊಂಡು ಬಂದಿದ್ದಾರೆ.

ರೈತರು ಮುಂಜಾನೆ ತಮ್ಮ ಅಡಿಕೆ ತೋಟ, ಭತ್ತದ ಗದ್ದೆಯಲ್ಲಿ ಚಪ್ಪರ ಹಾಕಿ ಆಲಂಕಾರ ಮಾಡಿ ಭೂ ತಾಯಿಗೆ ವಿಶೇಷವಾಗಿ ಪೂಜೆ ಸಲ್ಲಿಸಿ ಭೂಮಿ ಹುಣ್ಣಿಮೆಯನ್ನು ಆಚರಿಸಿದರು. ಭೂಮಿ ಹುಣ್ಣಿಮೆಯ ನಿಮಿತ್ತ ಮನೆಯಲ್ಲಿ ಸಿದ್ದ ಪಡಿಸಿದ್ದ ತಿಂಡಿ, ತಿನಿಸು ಹಾಗೂ ಅಡುಗೆ ಪಾಧರ್ಥಗಳನ್ನು ಭೂಮಿಗೆ ನೈವೆದ್ಯ ಮಾಡಿ ಮನೆಮಂದಿಯೆಲ್ಲ ಒಟ್ಟಾಗಿ ಕುಳಿತು ಊಟ ಮಾಡುತ್ತಾರೆ.