ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಶಿಕ್ಷಕಿ ಸಾವು

ನ್ಯೂಸ್ ಕೊಪ್ಪ: ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಕೊಪ್ಪ ತಾಲೂಕಿನ ಜಯಪುರ ಸಮೀಪದ ಕಟ್ಟೆಮನೆಯ ಶಿಕ್ಷಕಿ ಬೆನಿಲ್ಡ್ಡಾ ಮಸ್ಕರೇನಸ್ (56)ಭಾನುವಾರ ನಿಧನರಾದರು.

ಶಿಕ್ಷಕ ಪತಿ ಅಂತೋನಿ ಮಸ್ಕರೇನಸ್ ಹಾಗೂ ಮೂವರು ಪುತ್ರರನ್ನು ಅಗಲಿರುವ ಇವರ ಅಂತ್ಯಕ್ರಿಯೆಯನ್ನು ಜಯಪುರದಲ್ಲಿ ಸೋಮವಾರ ನೆರವೇರಿಸಲಾಯಿತು.

ಕಳೆದ 33 ವರ್ಷ ಗಳಿಂದ ಶಿಕ್ಷಕಿಯಾಗಿ ಇವರು ಕಾರ್ಯನಿರ್ವಹಿಸುತ್ತಿದ್ದರು 2005-06ರಲ್ಲಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.