ಬಿಂತ್ರವಳ್ಳಿ, ನುಗ್ಗಿ ಗ್ರಾಮಸ್ಥರ ದಶಕದ ಕನಸು ನನಸು

ನ್ಯೂಸ್ ಕೊಪ್ಪ, ಮಾ.15: ತಾಲೂಕಿನ ನುಗ್ಗಿ ಹಾಗೂ ಬಿಂತ್ರವಳ್ಳಿ ಗ್ರಾಮಗಳ ಮದ್ಯೆ ಹರಿಯುವ ಕಪಿಲಾ ನದಿಗೆ ಸೇತುವೆ ನಿರ್ಮಿಸುವ ಉಭಯ ಗ್ರಾಮಗಳ ಗ್ರಾಮಸ್ಥರ ದಶಕಗಳ ಕನಸು ಇಂದು ನನಸಾಗಿದೆ. ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ದಿವ್ಯ ದಿನೇಶ್ ಅವರ ಅನುದಾನದಲ್ಲಿ ನಿರ್ಮಾಣವಾದ ಸೇತುವೆ ಇಂದು ಉದ್ಘಾಟನೆ ಕಂಡಿದೆ.

ಕನಸು ನನಸಾಗಿದ್ದನ್ನು ಕಣ್ತುಂಬಿಕೊಳ್ಳಲು ಉಭಯ ಗ್ರಾಮಸ್ಥರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು ವಿಶೇಷವಾಗಿತ್ತು. ಹಲವಾರು ವರ್ಷಗಳಿಂದಲೂ ಮರದ ಕಾಲುಸಂಕವನ್ನೆ ಉಪಯೋಗಿಸಿ ಭಯದಿಂದ ಅತ್ತ ಇತ್ತ ಓಡಾಡುತ್ತಿದ್ದರು ಮಳೆಗಾಲದಲ್ಲಿ ಕಪಿಲಾ ನದಿ ತುಂಬಿ ಹರಿಯುತ್ತಿತ್ತು ಆಗ ಅಲ್ಲಿನ ಜನರ ಪಾಡು ಕಷ್ಟಕರವಾಗಿತ್ತು.
ಹಲವು ವರ್ಷಗಳಿಂದಲೂ ಈ ಸೇತುವೆಗಾಗಿ ಎಷ್ಟೇ ಬೇಡಿಕೆ ಇಟ್ಟರೂ ಅದು ಭರವಸೆಯಾಗಿ ಅಷ್ಟೇ ಉಳಿಯುತ್ತಿತ್ತು, ಈಗ ಆದ ಸೇತುವೆಯನ್ನು ನೋಡುತ್ತ ಗ್ರಾಮಸ್ಥರು ಆಶ್ಚರ್ಯದಿಂದ ನಿಂತಿದ್ದರು.

ನ್ಯೂಸ್ ಕೊಪ್ಪ ಅವರಲ್ಲಿ ಒಬ್ಬ ಗ್ರಾಮಸ್ಥನನ್ನು ಮಾತಿಗೆಳೆದಾಗ ಅವರು ಸೇತುವೆ ನಿರ್ಮಾಣಕ್ಕೆ ಅನುದಾನ ದೊರಕುವಲ್ಲಿ ಜಿಲ್ಲಾ ಪಂಚಾಯತಿ, ಶಾಸಕರು, ಸಚಿವರು, ಎಲ್ಲರ ಬೆನ್ನು ಬಿದ್ದು ನಿಸ್ವಾರ್ಥದಿಂದ ಕೆಲಸ ಮಾಡಿದ ವ್ಯಕ್ತಿಯೊಬ್ಬರಿದ್ದಾರೆ ಅವರೇ ನುಗ್ಗಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಹೆಚ್ ಆರ್ ಜಗದೀಶ್, ನುಡಿದಂತೆ ನಡೆಯುವ, ನಾಯಕ
ಕಳೆದ ಎರಡು ವರ್ಷಗಳಿಂದ ಸೇತುವೆ ನಿರ್ಮಾಣದ ಕನಸು ಹೊತ್ತು ನಿರಂತರವಾಗಿ ಅಧಿಕಾರಿಗಳು ಮತ್ತು ಸರಕಾರದ ಸಂಪರ್ಕ ಸಾಧಿಸಿ ಕೊನೆಗೂ ಅನುದಾನ ಬಿಡುಗಡೆಗೊಳ್ಳುವಂತೆ ಮಾಡಿದ್ದರು
ಅವರಿಲ್ಲದೆ ಬೇರೆ ಯಾರೂ ಕೂಡ ಈ ಕಾಡಂಚಿನ ಗ್ರಾಮದ ಜನರ ಕಷ್ಟಕ್ಕೆ‌ ಕರಗುತ್ತಿರಲಿಲ್ಲ ಎಂದರು.

ಮಾತುಗಳು ಸಾಧನೆ ಅಲ್ಲ, ಸಾಧನೆಗಳೆ ಮಾತುಗಳಾಗಬೇಕು.

ನ್ಯೂಸ್ ಕೊಪ್ಪ ಹೆಚ್ ಆರ್ ಜಗದೀಶ್ ರವರನ್ನು ಮಾತಿಗೆಳೆದಾಗ ಈ ಸೇತುವೆ ಈ ಎರಡು ಗ್ರಾಮಗಳ ಜನರ ಬಹಳ ವರ್ಷಗಳ ಬೇಡಿಕೆ ಮಳೆಗಾಲದಲ್ಲಿ ಈ ಕಾಡಿನ ಬದಿ ವಾಸಿಸುವ ಗ್ರಾಮಸ್ಥರ ಪಾಡು ಅತೀ ಯಾತನದಾಯಕವಾಗಿತ್ತು, ನನ್ನ ಅವಧಿಯಲ್ಲಿ ಇಲ್ಲಿ ಸೇತುವೆ ನಿರ್ಮಾಣವಾಗಿದ್ದು ಅತೀವ ಸಂತಸ ತಂದಿದೆ. ನಾನು ನುಗ್ಗಿ ಗ್ರಾಮ ಪಂಚಾಯತ್ ಸದಸ್ಯನಾಗಿ, ಅಧ್ಯಕ್ಷನಾಗಿ, ಈ ಗ್ರಾಮಕ್ಕಾಗಿ ಮಾಡಿದ ಕೆಲಸ ನನ್ನ ಮನಸ್ಸಿಗೆ ತುಂಬಾ ತೃಪ್ತಿ ತಂದಿದೆ ಈ ಗ್ರಾಮದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಲ್ಲಿಸಿದ ಸಮಾದಾನ ಇದೆ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಎಲ್ಲಾ ಅನುಧಾನವನ್ನು ಈ ಗ್ರಾಮದ ಎಲ್ಲಾ ಅರ್ಹರಿಗೂ ಯಾವುದೇ ಬೇದಬಾವ ಮಾಡದೆ ತಲುಪಿಸಿದ್ದೇನೆ, ನನ್ನ ಈ ಎಲ್ಲಾ ಕಾರ್ಯಕ್ಕೆ ಬೆನ್ನೆಲುಬಾಗಿ ನಿಂತ ನನ್ನ ಪಕ್ಷದ ನಾಯಕರನ್ನು ಎಲ್ಲಾ ಅಧಿಕಾರಿಗಳನ್ನು ಈ ಕ್ಷಣ ಧನ್ಯತೆಯಿಂದ ನೆನೆಯುತ್ತೇನೆ, ಎಲ್ಲದಕ್ಕಿಂತ ಹೆಚ್ಚಾಗಿ ನಮ್ಮನುಗ್ಗಿ ಗ್ರಾಮದ ಜನ ನನ್ನ ಮೇಲೆ ಇಟ್ಟ ನಂಬಿಕೆ‌ ಹಾಗೂ ಪ್ರೀತಿಗೆ ಆಭಾರಿಯಾಗಿದ್ದೇನೆ ಎಂದರು.

ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನೇಶ್ ಹೊಸೂರು, ತಾ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸುಧಾಕರ್,ನುಗ್ಗಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಹೆಚ್ ಆರ್ ಜಗದೀಶ್,ಮಾಜಿ ಅಧ್ಯಕ್ಷರಾದ ಸವಿನಾಥ್, ಸದಸ್ಯರಾದ ಶ್ರೀಮತಿ ವನಿತಾ, ಶಾಂತಿ, ಶೇಖರ್, ಬಿಂತ್ರವಳ್ಳಿ ಗ್ರಾಮ ಪಂಚಾಯತಿ ಸದಸ್ಯ ಗಣೇಶ್,
ವಿಪ್ರ ಮಹಾಸಭಾದ ಅಧ್ಯಕ್ಷರಾದ ಕೃಷ್ಣಮೂರ್ತಿ ಭಟ್ ಕೆಸಕುಡಿಗೆ, ಗ್ರಾಮಸ್ಥರಾದ ಶಿವಣ್ಣ, ದುಗ್ಗಪ್ಪ ಸುರೇಶ್ ಶೆಟ್ಟಿ, ರವಿ ಸೇರಿದಂತೆ ಅನೇಕ ಗ್ರಾಮಸ್ಥರು ಹಾಜರಿದ್ದರು

….ವಿಕ್ರಮ್ ಕೊಪ್ಪ..