ಬೈಕ್- ದೋಸ್ತ್ ಮುಖಾಮುಖಿ : ಬೈಕ್ ಸವಾರ ಸ್ಥಳದಲ್ಲೇ ಸಾವು

ನ್ಯೂಸ್ ಕೊಪ್ಪ, ಆ.06: ಕೊಪ್ಪ ಪಟ್ಟಣದ ಹೊರ ವಲಯದಲ್ಲಿ ಸೂರ್ಯಸ್ತಮ ಸ್ಥಳದ ಬಳಿ ಬೈಕ್ ಹಾಗೂ ಆಶೋಕ್ ಲೇಲ್ಯಾಂಡ್ ದೋಸ್ತ್ ವಾಹನ ಮುಖಾಮುಖಿ ಡಿಕ್ಕಿಯಾಗಿದ್ದು ಬೈಕ್’ನ ಹಿಂಬದಿಯ ಸವಾರ ಸ್ಥಳದಲ್ಲಿಯೇ ಸಾವನಪ್ಪಿದ್ದ ಘಟನೆ ಭಾನುವಾರ ಬೆಳಿಗ್ಗೆ 6.30ರ ಸುಮಾರಿಗೆ ನಡೆದಿದೆ.

ಬೈಕ್ ಹಿಂಬದಿಯ ಸವಾರ ಹಪೀಜ್(17)ಸ್ಥಳದಲ್ಲೇ ಮೃತರದರು ಇವರು ವಜ್ರ ಶಕ್ತಿ ಪತ್ರಿಕೆಯ ಸಂಪಾದಕ ಹೆಚ್ ಕೆ ಹಂಸ ರವರ ದ್ವಿತೀಯ ಪುತ್ರ ಎಂದು ಗುರುತಿಸಲಾಗಿದೆ. ಇನ್ನೊಬ್ಬನ ಸ್ಥಿತಿ ಗಂಭೀರವಾಗಿದ್ದು‌ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.