ಬಿಜೆಪಿ ಹರಿಹರಪುರ ಹೋಬಳಿ ಮಹಾಶಕ್ತಿಕೇಂದ್ರದ ಅಧ್ಯಕ್ಷರಾಗಿ ಅಜಿತ್ ಬಿಕ್ಕಳಿ

ನ್ಯೂಸ್ ಕೊಪ್ಪ: ಬಿಜೆಪಿ ಹರಿಹರಪುರ ಹೋಬಳಿ ಮಹಾಶಕ್ತಿಕೇಂದ್ರದ ಪದಾಧಿಕಾರಿಗಳ ಜವಾಬ್ದಾರಿ ಸ್ವೀಕಾರ ಕಾರ್ಯಕ್ರಮ ಹರಿಹರಪುರ ಅಂಬಳಿಕೆಯ
ಕೆ ಟಿ ಕೆ ಸಭಾಂಗಣದಲ್ಲಿ ನಡೆಯಿತು. ಹರಿಹರಪುರ ಹೋಬಳಿ ಮಹಾಶಕ್ತಿಕೇಂದ್ರದ ಅಧ್ಯಕ್ಷರಾಗಿ ಅಜಿತ್ ಬಿಕ್ಕಳಿ ನೇಮಕಗೊಂಡರು. ಉಪಾಧ್ಯಕ್ಷರಾಗಿ ಕೃಷ್ಣಮೂರ್ತಿ ಮಠಗೋಡು ಹಾಗೂ ಸೃಜನ್,
ಪ್ರಧಾನ ಕಾರ್ಯದರ್ಶಿಯಾಗಿ ಬಿಷೇಜ್ ಭಟ್ ಭಂಡಿಗಡಿ ಅಧಿಕಾರ ವಹಿಸಿಕೊಂಡರು. ಮಾಜಿ ಶಾಸಕರಾದ ಡಿ ಎನ್ ಜೀವರಾಜ್, ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷರಾದ ಎಸ್ ಎನ್ ರಾಮಸ್ವಾಮಿ, ಬಿಜೆಪಿ ಮುಖಂಡರಾದ ದಿನೇಶ್ ಹೊಸೂರು, ವಿಭಾಗ ಸಂಘಟನಾ ಕಾರ್ಯದರ್ಶಿ ಗಣೇಶ್ ರಾಯರು, ಬಿಜೆಪಿ ಕೊಪ್ಪ ಮಂಡಲ ಅಧ್ಯಕ್ಷರಾದ ಸತೀಶ್ ಅದ್ದಡ, ಬಿಜೆಪಿ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಸೇರಿದ್ದರು.

….ವಿಕ್ರಮ್ ಕೊಪ್ಪ….