ಮಾಜಿ ಸಚಿವ ಡಿ ಎನ್ ಜೀವರಾಜ್ ರೈತಪರ ಕಾಳಜಿಯಿಂದ ಶೃಂಗೇರಿ ಕ್ಷೇತ್ರದಲ್ಲಿ ಅಕ್ರಮ ಸಕ್ರಮ ಸಮಿತಿ ರಚನೆ, ಹೆಚ್ ಆರ್ ಜಗದೀಶ್ ಶ್ಲಾಘನೆ

ನ್ಯೂಸ್ ಕೊಪ್ಪ; ಜೀವನಕ್ಕಾಗಿ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡಿದ ರೈತರ ಸಂಕಷ್ಟವನ್ನು ಗಮನಿಸಿ, ತಾವು ಶಾಸಕರಾಗಿದ್ದ ಅವಧಿಯಲ್ಲಿ ನೀಡಿದ್ದ ಸಾಗುವಳಿ ಪತ್ರಗಳಿಗೆ ಇನ್ನೂ ಪಹಣಿಯನ್ನು ವಿತರಿಸದೆ ನೆಪಗಳನ್ನೆ ಹೇಳಿಕೊಂಡು ಕಾಲಹರಣ ಮಾಡುತ್ತಿದ್ದ ಕ್ಷೇತ್ರದ ಶಾಸಕರ ಆಡಳಿತವನ್ನು ಖಂಡಿಸಿ, ಮಾಜಿ ಸಚಿವ ಶ್ರೀ ಡಿ ಎನ್ ಜೀವರಾಜ್ ರವರು ಅಕ್ರಮ ಸಕ್ರಮ ಸಮಿತಿಯನ್ನು ರಚಿಸುವಂತೆ ಮುಖ್ಯಮಂತ್ರಿಗಳಾದ ಶ್ರೀ ಯಡಿಯೂರಪ್ಪ ನವರಲ್ಲಿ ಮನವಿ ಮಾಡಿ ಇತ್ತೀಚೆಗೆ ಕಂದಾಯ ಸಚಿವರಾದ ಶ್ರೀ ಆರ್ ಆಶೋಕ್ ರವರನ್ನು ಭೇಟಿಯಾಗಿ ಈಗ ಕ್ಷೇತ್ರದಲ್ಲಿ ಅಕ್ರಮ ಸಕ್ರಮ ಸಮಿತಿಯ ರಚನೆ ಮಾಡಿ ಕ್ಷೇತ್ರದ ಜನತೆ ಉಸಿರಾಡುವಂತೆ ಮಾಡಿದ್ದಾರೆ. ಎಂದು ಬಿಜೆಪಿ ಮುಖಂಡ ಹಾಗೂ ನುಗ್ಗಿ ಗ್ರಾಮ ಪಂಚಾಯತಿ ಅಧ್ಯಕ್ಷ ಹೆಚ್ ಆರ್ ಜಗದೀಶ್ ಹೇಳಿದರು.

ಅಕ್ರಮ ಸಕ್ರಮ ಸಮಿತಿಗೆ ಆಯ್ಕೆಯಾದ ನಮ್ಮ ಕ್ಷೇತ್ರದ ಬಿಜೆಪಿ ಮುಖಂಡರಾದ ಹೆಚ್ ಕೆ ದಿನೇಶ್ ಹೊಸೂರು ಹಾಗೂ ಮಂಜುನಾಥ್ ಭಟ್ ಇವರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡುತಿದ್ದರು

ಇದನ್ನು ವಿರೋದ ಮಾಡುತ್ತಿರುವ ಕಾಂಗ್ರೇಸ್ಸಿನ ನಾಯಕರು ಒಂದೂವರೆ ವರ್ಷಗಳಿಂದ ನೆನೆಗುದಿಗೆಗೆ ಬಿದ್ದಿದ್ದ ಅಕ್ರಮ ಸಕ್ರಮ ಸಮಿತಿಗೆ ಜೀವ ತುಂಬಿದ ಸರ್ಕಾರದ ನಿಲುವನ್ನು ಟೀಕಿಸುತ್ತಿದ್ದಾರೆ. ಹಿಂದಿನ ಸರ್ಕಾರ ಒಂದೂವರೆ ವರ್ಷವಾದರೂ ಅಕ್ರಮ ಸಕ್ರಮ ಸಮಿತಿ ನೇಮಕ ಮಾಡಿರಲಿಲ್ಲ ನಮ್ಮ ಸರ್ಕಾರ ಈ ನಾಡಿನ ರೈತರ ನೆಮ್ಮದಿಗಾಗಿ ಕೇವಲ ಹನ್ನೊಂದು ತಿಂಗಳಲ್ಲಿ ಸಮಿತಿ ನೇಮಕ ಮಾಡಿದೆ. ಈಗ ವಿರೋದ ಮಾಡುತ್ತಿರುವ ನಮ್ಮ ಕ್ಷೇತ್ರದ ಕಾಂಗ್ರೇಸ್ ನ ನಾಯಕರು ಅರ್ಥ ಮಾಡಿಕೊಳ್ಳಬೇಕು ನಮ್ಮ ಕ್ಷೇತ್ರದ ಪಕ್ಕದ ಕ್ಷೇತ್ರವಾದ ಮೂಡಿಗೆರೆ ಕ್ಷೇತ್ರದಲ್ಲಿ ಶ್ರೀ ನಿಂಗಯ್ಯನವರು ಶಾಸಕರಾಗಿದ್ದ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರ ಅಂದಿನ ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಮೋಟಮ್ಮನವರ ಅಧ್ಯಕ್ಷತೆಯಲ್ಲಿ ಒಂದು ಅಕ್ರಮ ಸಕ್ರಮ ಸಮಿತಿಯನ್ನು ಅಂದಿನ ಪರಿಸ್ಥಿತಿಗೆ ಅನುಗುಣವಾಗಿ ಜನತೆಯ ಅನುಕೂಲಕ್ಕಾಗಿ ಈ ಸಮಿತಿ ರಚಿಸಲಾಗಿತ್ತು
ದುರುದ್ದೇಶದಿಂದ ರೈತರಿಗೆ ಪಹಣಿ ನೀಡುವುದು ವಿಳಂಬವಾಗಬಾರದೆಂದು ಸದುದ್ದೇಶದಿಂದ ಎರಡು ಸಮಿತಿಯನ್ನು ಒಂದು ಶಾಸಕರ ಅಧ್ಯಕ್ಷತೆಯಲ್ಲಿ ,ಇನ್ನೊಂದು ವಿಧಾನ ಪರಿಷತ್ ಸದಸ್ಯರ ಅಧ್ಯಕ್ಷತೆಯಲ್ಲಿ ಮಾಡಲಾಗಿದೆ. ಇದರಲ್ಲಿ ಯಾವುದೇ ಸಂವಿಧಾನ ವಿರೋಧಿ ನೀತಿಯನ್ನು ಮಾಡಿಲ್ಲ. ಹಿಂದೆ ಮಾಡಿದ್ದನ್ನೇ ಮತ್ತೆ ಜನರ ಅನುಕೂಲಕ್ಕಾಗಿ ಮಾಡಲಾಗಿದೆ ಎಂದರು.

ರೈತರಿಗೆ ಸಂಪೂರ್ಣ ಸಹಕಾರ.- ದಿನೇಶ್ ಹೊಸೂರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ದಿನೇಶ್ ಹೊಸೂರು ನಮ್ಮ ನಾಯಕರಾದ ಡಿ ಎನ್ ಜೀವರಾಜ್ ರವರ ರೈತಪರ ಕಾಳಜಿಯಿಂದಲೆ ಈ ಸಮಿತಿ ರಚನೆಯಾಗಿದೆ ಈ ಸಮಿತಿಯ ಸದಸ್ಯರಾಗಿ ರೈತರಿಗೆ ಸಂಪೂರ್ಣ ನ್ಯಾಯ ಒದಗಿಸಿಕೊಡುವುದಾಗಿ ತಿಳಿಸಿದರು.

ಬಾಚಿ ತಿನ್ನುವ ಅವಕಾಶ ತಪ್ಪಿದ್ದಕೆ ವಿರೋದ- ಸತೀಶ್ ಅದ್ದಡ

ಮಂಡಲ ಅಧ್ಯಕ್ಷರಾದ ಸತೀಶ್ ಅದ್ದಡ ಮಾತನಾಡಿ ಈ ಸಮಿತಿಯ ವಿರುದ್ದ ಮಾತನಾಡುತ್ತಿರುವ ಕಾಂಗ್ರೇಸಿಗರ ಅಳಲು ಏನೆಂದರೆ ಅಕ್ರಮ ಸಕ್ರಮ ದಲ್ಲಿ ಬಾಚಿ ತಿನ್ನುವ ಅವಕಾಶ ತಪ್ಪಿದ ಹತಾಶೆ ಅಷ್ಟೇ ಎಂದರು,

……ವಿಕ್ರಮ್ ಕೊಪ್ಪ…