ಮಲೆನಾಡಿನ ಕೆಟ್ಟ ಗ್ರಾಮೀಣ ರಸ್ತೆಗಳು ಭಾಗ 5,– ತಾಲೂಕಿನ ಹೂಗೆಬೈಲು ಕೊರಗೋಡು ರಸ್ತೆ.

ನ್ಯೂಸ್ ಕೊಪ್ಪ: ಮಲೆನಾಡಿನಲ್ಲಿ ಮಳೆ ಶುರುವಾಯಿತು ಎಂದರೆ ಸಾಕು ಗ್ರಾಮೀಣ ಪ್ರದೇಶದ ರಸ್ತೆಗಳು ಕಣ್ಮರೆಯಾಗುತ್ತವೆ! ಸಾರ್ವಜನಿಕರ ಪ್ರಾಣ ತಿನ್ನತೊಡಗುತ್ತವೆ. ಸಂಭಂದಪಟ್ಟ ಅಧಿಕಾರಿಗಳು,ಇಲಾಖೆಗಳು, ಜನಪ್ರತಿನಿಧಿಗಳು ನಮಗೂ ಅದಕ್ಕೂ ಸಂಬಂದವೇ ಇಲ್ಲ ಅನ್ನೋ ರೀತಿ ವರ್ತಿಸುತ್ತವೆ ಆ ರಸ್ತೆಯನ್ನು ಅವಲಂಬಿಸಿದ ಜನ ಯಾರಿಗೆ ಶಾಪ ಹಾಕಬೇಕು ಎಂದು ತಿಳಿಯದೆ ತಮ್ಮ ಹಣೆಬರಹಕ್ಕೆ ತಾವೇ ಅಸ್ಯಹಿಸಿಕೊಳ್ಳುತ್ತಾರೆ, ಇದು ಗ್ರಾಮೀಣ ಜನರ ಹಲವಾರು ಕಷ್ಟಗಳಲ್ಲಿ ಈ ರಸ್ತೆಗಳ ಮುಗಿಯದ ಗೋಳು.

ಕಥೆ ಕೊಪ್ಪ ತಾಲೂಕಿನ ತುಳುವಿನ ಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಲೋಕನಾಥಪುರ ಗ್ರಾಮದ ಹೊಗೆಬೈಲು- ಕೊರಗೋಡು ಮದ್ಯದ ಪರಿಶಿಷ್ಟ ಕಾಲೋನಿಯ ಸುಮಾರು ಒಂದುವರೆ ಎರಡು ಕಿ ಮೀ ರಸ್ತೆಯ ವ್ಯಥೆ. ಸುಮಾರು 15 ಪರಿಶಿಷ್ಟ ಜಾತಿ ಕುಟುಂಭಗಳು ವಾಸಿಸುವ ಈ ಹೊಗೆಬೈಲು ಕಾಲೋನಿಯ ಪಾದ ಚಾರಿಗಳಂತೂ ಇಲ್ಲಿ ಸಂಚರಿಸಲು ಹರಸಾಹಸ ಪಡುವಂತಾಗಿದೆ. ಮಕ್ಕಳು ಮತ್ತು ವಯಸ್ಸಾದವರು ಇಲ್ಲಿ ಓಡಾಡುವುದು ಕಷ್ಟವಾಗಿದೆ. ಕಾಲು ಇಟ್ಟರೆ ಎಲ್ಲಿ ಜಾರಿ ಬೀಳುತ್ತೇವೆ ಎನ್ನುವ ಪರಿಸ್ಥಿತಿಯಲ್ಲಿ ಎಚ್ಚರಿಕೆಯಿಂದ ಸಂಚರಿಸಬೇಕಾಗಿದೆ ಕಾಲೋನಿಗೆ ಮುಖ್ಯರಸ್ತೆಯಿಂದ ಮುಂದಕ್ಕೆ ಯಾವ ವಾಹನಗಳು ಬರುವುದಿಲ್ಲ ನಡೆದುಕೊಂಡು ಹೋಗಲು ಸಹ ಆಗದ ರಸ್ತೆಯಾಗಿ ಮಾರ್ಪಾಡಾಗುತ್ತದೆ ಮಳೆಗಾಲದಲ್ಲಿ. ಅಲ್ಲಿನ ಮಕ್ಕಳ ವೃದ್ದರ ಅನಾರೋಗ್ಯ ಪೀಡಿತರ ಕಷ್ಟ ಹೇಳತೀರದು

ಕೆಸರು ಗದ್ದೆ: ಮಳೆ ಬಂದರೆ ಕೆಸರು ಗದ್ದೆಗಳಾಗುವ ರಸ್ತೆಗಳು ಜನತೆ ಮನೆಯಿಂದ ಹೊರಗೆ ಬರುವುದು ಸಹ ಕಷ್ಟವಾಗುತ್ತಿದೆ. ದ್ವಿಚಕ್ರ ವಾಹನಗಳು ಸಹ ಹೋಗುವುದು ಕಷ್ಟವಾಗಿದೆ. ಕೆಲವು ಪ್ರದೇಶಗಳಿಗೆ ಬರಲು ಆಟೋದವರು ಸಹ ಹಿಂದೇಟು ಹಾಕುತ್ತಿದ್ದು ಒಟ್ಟಿನಲ್ಲಿ ಜನತೆಯ ಸಂಕಷ್ಟ ಕೇಳುವರಿಲ್ಲದಂತಾಗಿದೆ.
ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯ ದಿಂದ ಜನರಿಗೆ ಓಡಾಡಲು ಸಹ ಕಷ್ಟವಾಗುತ್ತಿದೆ. ರಸ್ತೆಯ ಅವ್ಯವಸ್ಥೆಯ ಬಗ್ಗೆ ಜನ ಗ್ರಾಮ ಪಂಚಾಯತಿ ಗೆ ಹಿಡಿ ಶಾಪ ಹಾಕುವಂತಾಗಿದೆ.

ಈ ವ್ಯವಸ್ಥೆಗಳು ಯಾಕೆ ಹೀಗೆ?

ಇನ್ನು ಜನಪ್ರತಿನಿದಿಗಳು ಅವರಿಗೆ ನಾವೇಕೆ ಚುನಾವಣೆಗೆ ನಿಂತು ಗೆದ್ದಿದ್ದೇವೆ, ಜನ ನಮಗೆ ಯಾಕೆ ಮತ ಹಾಕಿ ಗೆಲ್ಲಿಸಿದ್ದಾರೆ ಎಂಬ ಪ್ರಾಥಮಿಕ ಜ್ಙಾನವೂ ಇದ್ದಂತಿಲ್ಲ! ಚುನಾವಣೆಯಲ್ಲಿ ಮತ ಪಡೆದು ಗೆದ್ದು ಗ್ರಾಮದ ಸಮಸ್ಯೆಗಳ ಬಗ್ಗೆ ಕುರುಡಾಗಿ ವರ್ತಿಸುವುದು ಅಕ್ಷಮ್ಯ, ಇನ್ನು ಈ ಗ್ರಾಮ ಪಂಚಾಯತಿ ಗ್ರಾಮಸ್ಥರಿಗೆ ಮೂಲಸೌಕರ್ಯ ಒದಗಿಸಲು ಅಸಮರ್ಥವಾಗಿದೆ, ಮಳೆಗಾಲಕ್ಕೆ ಮೊದಲು ಜೆಸಿಬಿ ತಂದು ಮಣ್ಣುಸುರಿದು ಇದ್ದ ರಸ್ತೆಯನ್ನು ಹಾಳು ಮಾಡಿ ಜನರ ತೆರಿಗೆಯ ಹಣವನ್ನು ಜೇಬಿಗೆ ಇಳಿಸಿ ಹೋಗುವುದು ಪ್ರತಿ ವರ್ಷದ ವಾಡಿಕೆಯಂತೆ ಆಗಿದೆ, ಆ ರಸ್ತೆಗೆ ಪೂರ್ಣ ಪ್ರಮಾಣದ ಡಾಂಬರಿಕರಣ ಮಾಡುವ ಮನಸ್ಸು ಯಾವ ಜನಪ್ರತಿನಿದಿಗೂ ಇಲ್ಲ. ಈಗ ಮಳೆ ಶುರುವಾಗಿ ಆಗಿದೆ ಆ ರಸ್ತೆ ಕಾಣೆಯಾಗತೊಡಗಿದೆ ಜನಪ್ರತಿನಿದಿಗಳ ಅಧಿಕಾರದ ಅವದಿಯೂ ಮುಗಿದಿದೆ! ಅಧಿಕಾರಿಗಳು ಈ ಗ್ರಾಮಸ್ಥರ ಸ್ಥಿತಿ ಅರಿತು ಮಾನವೀಯವಾಗಿ ಅವರಿಗೆ ನೆರವಾಗಿ ಅನ್ನುವುದೊಂದೆ “ನ್ಯೂಸ್ ಕೊಪ್ಪ” ದ ಆಗ್ರಹ.

ಮಾದರಿ ಯುವ ಕೃಷಿಕ.

ಕೊರಗೋಡು ಗ್ರಾಮದ ಕೃಷಿಕರಾದ ವಿನಯ್ ರಾವ್ ಪ್ರತಿ ವರ್ಷವೂ ತಮ್ಮ ಸ್ವಂತ ಹಣ ಖರ್ಚು ಮಾಡಿ ಈ ರಸ್ತೆ ರಿಪೇರಿ ಮಾಡುತ್ತಾರೆ ಆದರೆ ಒಮ್ಮೊಮ್ಮೆ ಸುರಿಯುವ ಮಳೆ ಅವರ ಈ ಒಳ್ಳೆಯ ಕೆಲಸದ ಕುರುಹೇ ಇಲ್ಲದಂತೆ ಮಾಡಿಬಿಡುತ್ತದೆ, ಆದರೂ ಕೂಡ ಕುರುಡಾದ ವ್ಯವಸ್ಥೆಗೆ ದೂರು ಕೊಟ್ಟು ಕಾಯುವುದು ಸಮಯ ವ್ಯರ್ಥವೆಂದು ತಾವೇ ಕಲ್ಲು ಮಣ್ಣು ಹಾಕಿ ರಿಪೇರಿಗೆ ನಿಲ್ಲುತ್ತಾರೆ ಇದು ಪ್ರತಿ ವರ್ಷದ ಅಚ್ಚರಿ.

‌………ವಿಕ್ರಮ್ ಕೊಪ್ಪ……