ಭಜರಂಗದಳದ ಮಾಜಿ ರಾಜ್ಯ ಸಂಚಾಲಕ ಮಹೇಂದ್ರ ಕುಮಾರ್ ವಿಧಿವಶ

ನ್ಯೂಸ್ ಕೊಪ್ಪ: ಭಜರಂಗದಳದ ಮಾಜಿ ರಾಜ್ಯ ಸಂಚಾಲಕ ಕೊಪ್ಪದ ಮಹೇಂದ್ರ ಕುಮಾರ್ ಇಂದು ಬೆಳಗಿನ ಜಾವ ತೀವ್ರ ಹೃದಯಾಘಾತದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಜನ ಜಾಗೃತಿ ಚಟುವಟಿಕೆಯಲ್ಲಿ ಸಕ್ರಿಯವಾಗಿರುತ್ತಿದ್ದ ಮಹೇಂದ್ರ ಕುಮಾರ್, ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಸಿಎಎ ಕಾಯ್ದೆ ವಿರುದ್ಧವೂ ಹಲವಾರು ಪ್ರತಿಭಟನೆಗಳಲ್ಲಿ ಭಾವವಹಿಸಿ ಮಾತನಾಡಿದ್ದರು. ನಮ್ಮ ಧ್ವನಿ ಎಂಬ ಯೂಟ್ಯೂಬ್ ಚಾನೆಲ್ ಮೂಲಕವೂ ವಿವಿಧ ವಿಷಯಗಳ ಬಗ್ಗೆ ಮಾತನಾಡುತ್ತಿದ್ದರು.

ಅವರ ನಿಧನಕ್ಕೆ ಅವರ ತವರೂರಾದ ಕೊಪ್ಪದಲ್ಲಿನ ಅವರ ಸ್ನೇಹಿತರ ವಲಯದಲ್ಲಿ ದುಖಃ ಮಡುಗಟ್ಟಿದೆ. ಹಿಂದೂ ಪರ ಸಂಘಟನೆಯಲ್ಲಿ ಅವರ ಜೊತೆಗೂಡಿ ಹೋರಾಡಿದ ಅಂದಿನ ದಿನಗಳನ್ನು ನೆನಪು ಮಾಡಿಕೊಂಡು ಕಣ್ಣಿರಾಗುತ್ತಿದ್ದಾರೆ.

ಬೆಂಗಳೂರಿನ ರಾಮಯ್ಯ ಆಸ್ಪತ್ರೆಯಲ್ಲಿ ಪಾರ್ಥಿವ ಶರೀರವನ್ನು ಇಡಲಾಗಿದ್ದು, ಅವರ ತವರೂರಾದ ಕೊಪ್ಪದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.

…..ವಿಕ್ರಮ್ ಕೊಪ್ಪ…