ಪ್ರಧಾನಿಯ 9 ಗಂಟೆ 9 ನಿಮಿಷದ ರಹಸ್ಯವೇನು? “ಲಾಕ್ ಡೌನ್”ಅಂತ್ಯಕ್ಕೆ ಆರಂಭದ ಮುನ್ಸೂಚನೆಯ?

ನ್ಯೂಸ್ ಕೊಪ್ಪ: ಇದೆ (ಏ 5) ರ ಭಾನುವಾರ ರಾತ್ರಿ 9 ಗಂಟೆಗೆ ಎಲ್ಲರೂ ತಮ್ಮ ಮನೆಯ ವಿದ್ಯುತ್ ದೀಪಗಳನ್ನು ಆರಿಸಿ ಮನೆಯ ಜಗಲಿ ತಾರಾಸಿಯ ಮೇಲೆ 9 ನಿಮಿಷಗಳ ಕಾಲ ದೀಪ ಉರಿಸಿ ಈ ದೇಶದ ಜನರ ಒಗ್ಗಟ್ಟನ್ನು ವಿಶ್ವಕ್ಕೆ ಪರಿಚಯಿಸಲು ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ದೀಪ, ಕ್ಯಾಂಡಲ್ ಮೋಬೈಲ್ ಟಾರ್ಚ್, ಲಾಟೀನು,ಹಚ್ಚಿ ಒಗ್ಗಟ್ಟು ಪ್ರದರ್ಶನಕ್ಕೆ ಮೋದಿ ಕರೆ ನೀಡಿದ್ದಾರೆ. ಆದರೆ ಪ್ರಧಾನಿ ಮೋದಿ ಕೇವಲ 9 ನಿಮಿಷಗಳ ಕಾಲ ಎಂದು ನಿರ್ದಿಷ್ಟವಾಗಿ ಹೇಳಿರುವುದೇಕೆ ಎಂಬ ಪ್ರಶ್ನೆ ಇದೀಗ ಎಲ್ಲರಲ್ಲೂ ಮೂಡಿದೆ.

ಭಾನುವಾರದ 9 ಗಂಟೆಯ 9 ನಿಮಿಷದಲ್ಲಿ ಅಡಗಿದೆಯ ಮೋದಿಜಿಯ ಲಾಕ್ ಡೌನ್ ಅಂತ್ಯದ ಲೆಕ್ಕಾಚಾರ?

ಹೌದು ಪ್ರಧಾನಿ ಮೋದಿ ಅವರ ಈ 9 ನಿಮಿಷದ ದೀಪದ ಮನವಿಯ ಹಿಂದೆ ಲಾಕ್‌ಡೌನ್ ಅಂತ್ಯದ ಲೆಕ್ಕಾಚಾರ ಅಡಗಿದೆ.ಲಾಕ್‌ಡೌನ್ ಆದೇಶ ಇದೇ ಏ. 14ರಂದು ಕೊನೆಗೊಳ್ಳಲಿದ್ದು, ಏ.5 ರಿಂದ ಏ.14ರವೆರೆಗೆ ಬರೋಬ್ಬರಿ 9 ದಿನಗಳು ಉಳಿಯುತ್ತವೆ. ಈ 9 ದಿನಗಳ ಲಾಕ್‌ಡೌನ್ ಅಂತ್ಯದ ಆರಂಭವನ್ನೂ ದೀಪ ಬೆಳಗುವ ಮೂಲಕ ಸ್ವಾಗತಿಸುವಂತೆ ಪ್ರಧಾನಿ ಮೋದಿ ಪರೋಕ್ಷವಾಗಿ ಹೇಳಿದ್ದಾರ? ಅಂದರೆ 9 ನಿಮಿಷಗಳ ಮೇಣದ ಬತ್ತಿ ದೀಪ ಉರಿಸುವ ಮನವಿಯ ಹಿಂದೆ ಲಾಕ್‌ಡೌನ್ ಅಂತ್ಯದ ಮುನ್ಸೂಚನೆ ಅಡಗಿದೆಯ? ಇದೆ ಎಲ್ಲರಲ್ಲೂ ಕಾಡುತ್ತಿರುವ ಪ್ರಶ್ನೆ.

ಅಥವಾ ಈ ದೇಶವನ್ನು ಕಾಪಾಡಲು ಆಧ್ಯಾತ್ಮದ ಮೊರೆ ಹೋದರ?

ದೀಪ ಬೆಳಗುವ ಸಂದೇಶ ಸಾರಿದ ಪ್ರಧಾನಿ.

ಈ ದೇಶ ಶತ ಶತಮಾನಗಳಿಂದಲೂ ಅನ್ಯರ ದಾಳಿಗಳ ವಿರುದ್ಧ ಹೋರಾಡುತ್ತಲೆ ಬಂದಿದೆ, ಆದರೆ ಇಲ್ಲಿನ ಆಧ್ಯಾತ್ಮ ಸಂಸ್ಕೃತಿ, ಸಂತರು ಸನ್ಯಾಸಿಗಳ ಚಿಂತನೆಯೆ ಫಲದಿಂದಲೆ ಈ ದೇಶ ಶಮಾನಗಳಿಂದಲೂ ಅನ್ಯರ ದಾಳಿಗಳಿಗೆ ಎದೆಕೊಟ್ಟು ನಿಂತಿದೆ, ಆಧ್ಯಾತ್ಮ ಈ ನೆಲದ ಶಕ್ತಿ. ಮೋದಿ ಪ್ರಧಾನಿ, ವಿಶ್ವನಾಯಕ, ಎನ್ನುವುದಕ್ಕಿಂತಲು ಅವರೊಬ್ಬ ಆಧ್ಯಾತ್ಮ ವ್ಯಕ್ತಿ ಬಂದೊದಗಿದ ಸಂಕಷ್ಟವನ್ನು ತಡೆಯುವುದು ತಪೋಶಕ್ತಿಗಿದೆ ಎಂಬುದನ್ನು ಈ ದೇಶ ಪ್ರತಿ ಕ್ಷಣವೂ ಸಾಬೀತುಪಡಿಸಿದೆ. ಇಂದು ಅಮೇರಿಕಾ, ಬ್ರಿಟನ್, ಚೈನ, ಪ್ರಾನ್ಸ್ ಹತ್ತಾರು ಮುಸ್ಲಿಂ ರಾಷ್ಟ್ರಗಳು ಈ ಕರೋನ ವೈರಸ್ ನಿಂದ ನಲುಗಿ ಹೋಗಿವೆ, ಅವರ ಬಳಿ ಬಾಂಬ್ ಗಳಿವೆ, ಅತ್ಯಾದುನಿಕ ಶಸ್ತ್ರಗಳಿವೆ ಇಡಿ ಭೂಖಂಡವನ್ನೆ ನಾಮಾವಶೇಷ ಮಾಡಿಬಿಡುವ ಪವರ್ ಇದೆ, ಆದರೆ ಅವರ ಬಳಿ ಆದ್ಯಾತ್ಮವಿಲ್ಲ ಅದು ಇರುವುದು ಭಾರತದಲ್ಲಿ ಮಾತ್ರ ಅದು ಈ ಎಲ್ಲ ಮಾನವ ನಿರ್ಮಿತ ಶಸ್ತ್ರಗಳಿಗಿಂತಲೂ ಬಲಶಾಲಿ. ನಾವು ಅದೇನೆ ಮೆರೆದರೂ ಅದೇನೆ ಶಕ್ತಿಶಾಲಿಗಳು ಅಂದರೂ ನಾವು ಕೂಡ ಯಕಶ್ಚಿತ್ ಮನುಷ್ಯರೆ ! ಅದೇನು ಪವರ್ ಇದ್ದರೂ ಸಂಕಷ್ಟದ ಕಾಲಕ್ಕೆ ದೇವರ ಬಳಿಯೇ ಹೋಗಬೇಕು ಬೆಳಕು ಅನ್ನೊದೆ ದೇವರು ಮೋದಿ ಹೇಳಿದ್ದು ಅದನ್ನೆ.

ಕೊರೊನಾ ವೈರಸ್ ದಾಳಿಯ ನಡುವೆ ದೇಶವನ್ನುದ್ದೇಶಿಸಿ ಮೂರನೆ ಬಾರಿ ಮಾತನಾಡಿರುವ ಪ್ರಧಾನಿ ಇಂತಹ ಸಂಕಷ್ಟದ ಸಮಯದಲ್ಲಿ ದೇಶದ ಒಗ್ಗಟ್ಟನ್ನು ಮತ್ತೊಮ್ಮೆ ಇಡಿ ವಿಶ್ವದ ಮುಂದೆ ಪ್ರದರ್ಶಿಸಬೇಕಾಗಿದೆ ಮಾರ್ಚ್ 22 ರ ಜನತಾ ಕರ್ಪ್ಯೂ ಗೆ ದೇಶವಾಸಿಗಳು ನೀಡಿದ ಬೆಂಬಲ ಅದನ್ನು ಇತರ ದೇಶಗಳು ಅನುಸರಿಸುವಂತೆ ಮಾಡಿತು ಎಂದರು.
ಲಾಕ್‌ಡೌನ್‌ನ್ನು ಶಿಕ್ಷೆ ಎಂದು ಪರಿಗಣಿಸದೇ ಎಲ್ಲಾ 130 ಕೋಟಿ ಭಾರತೀಯರ ಒಗ್ಗಟ್ಟಿಗೆ ಸಾಕ್ಷಿ ಎಂದು ಭಾವಿಸಬೇಕು ಎಂದು ಇದೇ ವೇಳೆ ಪ್ರಧಾನಿ ಮೋದಿ ಜನತೆಯಲ್ಲಿ ಮನವಿ ಮಾಡಿದ್ದಾರೆ. ಮಾರ್ಚ್22 ರ ಜನತ ಕರ್ಪ್ಯೂ ಹಾಗೂ ಮಾ 24 ರ ನಂತರದ 21 ದಿನಗಳ ಪ್ರಧಾನಿಗಳ ಲಾಕ್ ಡೌನ್ ಆದೇಶವನ್ನು ಈ ದೇಶ ಸ್ವಾಗತಿಸಿತು ಜನರೂ ಕೂಡ ತಮ್ಮ ತಮ್ಮ ಮನೆಯಲ್ಲಿಯೆ ಇರುವ ಮೂಲಕ ಪ್ರಧಾನಿಯ , ಲಾಕ್‌ಡೌನ್ ಆದೇಶವನ್ನು ಇಡೀ ದೇಶ ಶ್ರದ್ಧೆಯಿಂದ ಪಾಲಿಸುತ್ತಿದೆ. ಅಲ್ಲಲ್ಲಿ ಕೆಲವು ಲೋಪ ದೋಷಗಳು ಕಂಡು ಬಂದಿದ್ದರೂ, ಒಟ್ಟಾರೆಯಾಗಿ ಲಾಕ್‌ಡೌನ್ ಆದೇಶ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂಬುದರಲ್ಲಿ ಸಂದೇಹವಿಲ್ಲ.

ಭಾನುವಾರ ಒಗ್ಗಟ್ಟು ಪ್ರದರ್ಶಿಸಲಿದೆ ಭಾರತ.

ಪ್ರಧಾನಿಯವರ ಮನವಿಯನ್ನು ಈ ದೇಶ ಪಾಲಿಸಲಿದೆ. ಇಷ್ಟು ದಿನ ಆವರಿಸಿದ್ದ ಕತ್ತಲೆಯನ್ನು ಅಂದು ಮನೆ ಮನೆಯಲ್ಲಿ ದೀಪ ಬೆಳಗುವ ಮೂಲಕ ಓಡಿಸಲಿದ್ದಾರೆ ಈ ದೇಶದ ಪ್ರಜೆಗಳು.ಸಂಕಷ್ಟದ ಸಮಯದಲ್ಲಿ ನಾವೆಲ್ಲಾ ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶವನ್ನು ಇಡಿ ವಿಶ್ವಕ್ಕೆಭಾರತ ತೊರಲಿದೆ,

ಪ್ರಧಾನಿ ಮೋದಿಯವರ ಕೈ ಬಲಪಡಿಸುವ ಮೂಲಕ ನಾವೆಲ್ಲಾ ಒಂದಾಗಿ “ಕೊರೊನಾ ವೈರಸ್” ಎಂಬ ಭಯಂಕರ ಶತ್ರುವನ್ನು ಮಣಿಸಲಿದ್ದೇವೆ ಎಂಬ ಸಂದೇಶವನ್ನು ದೇಶವಾಸಿಗಳು ಸಾರಲಿದ್ದಾರೆ ಎಂಬುದ ಖಚಿತ.

…….ವಿಕ್ರಮ್ ಕೊಪ್ಪ…..