ನುಗ್ಗಿ ಗ್ರಾಮದ ಹಂತುವಾನೆ ಸೇತುವೆ ಉದ್ಘಾಟನೆ||

ಗ್ರಾಮೀಣ ಭಾಗವು ನಗರಕ್ಕೆ ಸಂಪರ್ಕ ಹೊಂದಿದಲ್ಲಿ ಮಾತ್ರ ಒಂದು ಗ್ರಾಮ ಅಭಿವೃದ್ಧಿ ಹೊಂದಲು ಸಾಧ್ಯ.

ನ್ಯೂಸ್ ಕೊಪ್ಪ: ತಾಲೂಕಿನ ನುಗ್ಗಿಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಸೂರಿನಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಹಾಗೂ ಗ್ರಾಮ ಪಂಚಾಯತ್ ಅನುದಾನದಲ್ಲಿ ಹಂತುವಾನೆ, ಮಾರಿಗಂಡಿ, ಹೊಟ್ಟನಕುಡಿಗೆ ಗ್ರಾಮಗಳಿಗೆ ಸಂಪರ್ಕಿಸುವ ನೂತನ ಸೇತುವೆಯನ್ನು ಇಂದು ಜಿಲ್ಲಾ ಪಂಚಾಯತ್ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ದಿವ್ಯ ದಿನೇಶ್ ಉದ್ಘಾಟಿಸಿದರು. ಅಲ್ಲಿ ಸೇರಿದ್ದ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ ಸೇತುವೆ ನಿರ್ಮಿಸಲು ಸಹಕಾರ ನೀಡಿದ ಶ್ರೀಮತಿ ದಿವ್ಯ ದಿನೇಶ್ ಹಾಗೂ ತಾಲೂಕಿ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ಸುಧಾಕರ್ ಅವರನ್ನು ಶಾಲು ಹೊದೆಸಿ ಸನ್ಮಾನಿಸಿ ಸಿಹಿ ಹಂಚಿದರು.

ಮುಖಂಡರಾದ ದಿನೇಶ್ ಹೊಸೂರು ಮಾತನಾಡಿ ನಾವು ಕೊಟ್ಟ ಮಾತಿನಂತೆ ಈ ಮಳೆಗಾಲ ಶುರುವಾಗುವ ಮೊದಲೆ ಸೇತುವೆ ನಿರ್ಮಿಸಿಕೊಟ್ಟಿದ್ದೇವೆ ಇದರಲ್ಲಿ ಇನ್ನು ಸ್ವಲ್ಪ ಕೆಲಸ ಬಾಕಿ ಇದ್ದು ಅದನ್ನು ಆದಷ್ಟು ಬೇಗ ಮುಗಿಸಲಾಗುವುದು ಎಂದರು.

ನಂತರ ಮಾತನಾಡಿದ ನುಗ್ಗಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಹೆಚ್ ಆರ್ ಜಗದೀಶ್ ಮೂರು ಗ್ರಾಮಗಳಿಗೆ ಸಂಪರ್ಕ ಸೇತುವೆಯಾಗಿದ್ದ ಈ ಹಂತುವಾನೆ ಸೇತುವೆ ಕಳೆದ ಬಾರಿಯ ಭಾರಿ ಮಳೆಗೆ ಕೊಚ್ಚಿಕೊಂಡು ಹೊಗಿತ್ತು, ಈ ವಿಷಯ ಎಲ್ಲ ಸುದ್ದಿ ಮಾಧ್ಯಮಗಳಲ್ಲೂ ಸುದ್ದಿಯಾಗಿತ್ತು, ಸಂಸದೆ ಶೋಭಾ ಕರಂದ್ಲಜೆ ಕೂಡ ಇಲ್ಲಿಗೆ ಭೇಟಿ ನೀಡಿದ್ದರು, ಶಾಸಕರು ಇಲ್ಲಿಗೆ ಬೇಟಿ ನೀಡಿ ಸರ್ಕಾರ ನೀಡುವ ಅನುದಾನಕ್ಕೆ ಕಾಯದೆ ನನ್ನ ಸ್ವಂತ ಹಣದಲ್ಲಿ ಈ ಸೇತುವೆಯನ್ನು ನಿರ್ಮಿಸಿಕೊಡುತ್ತೇನೆ ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದ್ದರು ಆದರೆ ವರ್ಷ ಕಳೆದರೂ ಸೇತುವೆ ಆಗುವ ಯಾವ ಲಕ್ಷಣಗಳೂ ಕಾಣದೆ ಈ ಬಾರಿಯ ಮಳೆಗಾಲ ಕೂಡ ಹತ್ತಿರವಾದಂತೆ ಈ ಗ್ರಾಮಗಳ ಜನರ ಆತಂಕ ಮನಗಂಡು, ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಸದಸ್ಯರ ಗಮನಕ್ಕೆ ತಂದಾಗ ಅವರು ಈ ಗ್ರಾಮದ ಈ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಿ ಅನುದಾನ ಬಿಡುಗಡೆಗೊಳಿಸಿದ್ದರಿಂದ ಈ ಸೇತುವೆಗೆ ಇಂದು ಉದ್ಘಾಟನೆಯ ಭಾಗ್ಯ ಸಿಕ್ಕಿದೆ ಎಂದರು. ನಮ್ಮ ಗ್ರಾಮದ ಸೇತುವೆ ನಿರ್ಮಾಣಕ್ಕೆ ಸಹಕರಿಸಿದ ಎಲ್ಲ ನಾಯಕರಿಗೂ ಈ ಸಂಧರ್ಭದಲ್ಲಿ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ಸಮಾರಂಭದಲ್ಲಿ ಬಿಜೆಪಿ ಮುಖಂಡರಾದ ದಿನೇಶ್ ಹೊಸೂರು, ಕಸಬಾ ಹೋಬಳಿ ಅಧ್ಯಕ್ಷರಾದ ರೇವಂತ್, ನುಗ್ಗಿ ಗ್ರಾಮ ಪಂ ಮಾಜಿ ಅಧ್ಯಕ್ಷ ಸವಿನಾಥ್ ಸದಸ್ಯರಾದ ಶೇಕು, ವನಿತಾ, ಸೇರಿದಂತೆ ಹಲವಾರು ಗ್ರಾಮಸ್ಥರು ಸೇರಿದ್ದರು.

……ವಿಕ್ರಮ್ ಕೊಪ್ಪ..