ನುಗ್ಗಿ ಗ್ರಾಮದೇವತೆ ವನದುರ್ಗಿ ವರ್ದಂತಿ ಮಹೋತ್ಸವ.

ನ್ಯೂಸ್ ಕೊಪ್ಪ: ತಾಲೂಕಿನ ನುಗ್ಗಿ ಗ್ರಾಮದ ವನದುರ್ಗಿ ಸಹಿತ ಪರಿವಾರ ದೇವರುಗಳ ವರ್ದಂತಿ ಉತ್ಸವ ಇಂದು ವಿಜೃಂಭಣೆಯಿಂದ ನೆರವೇರಿತು, ಏಪ್ರಿಲ್4 ರಂದು ನಡೆಯಬೇಕಿದ್ದ ವರ್ದಂತಿ ಉತ್ಸವ ಕೊರೊನ ಮಹಮಾರಿಯ ಕಾರಣದಿಂದ ಇಂದು ಜರುಗಿತು.ಬೆಳಿಗ್ಗೆಯಿಂದ ದೇವಸ್ಥಾನದಲ್ಲಿ ಪವಮಾನ ಅಭಿಷೇಕ. ಕಲಾ ಹೋಮ,ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು ಹಾಗೂ ಮಧ್ಯಾಹ್ನ ಪೂಜೆ ಮುಗಿದ ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಿದ್ದು ಗ್ರಾಮದ ಎಲ್ಲಾ ಭಕ್ತಾದಿಗಳು ಈ ಒಂದು ದೇವತಾಕಾರ್ಯದಲ್ಲಿ ಪಾಲ್ಗೊಳ್ಳಂಡರು, ಕೊಪ್ಪದ ಅನಂತ ಮೂರ್ತಿ ಭಟ್ ನೇತೃತ್ವದಲ್ಲಿ ಪೂಜಾ ಕಾರ್ಯ ನಡೆಯಿತು. ದೇವಾಲಯದಲ್ಲಿ ಭಕ್ತರಿಗೆ ಮಾಸ್ಕ್ ಕಡ್ಡಾಯ ಮಾಡಲಾಗಿತ್ತು ಮತ್ತು ಎಲ್ಲರಗೂ ಸ್ಯಾನಿಟೈಸ್ ಮಾಡುವುದು ಕಡ್ಡಾಯವಾಗಿತ್ತು.

ಕಾರ್ಯಕ್ರಮದಲ್ಲಿ ದಾನಿ ಹಾಗೂ ಉದ್ಯಮಿ ಮುಂಬಾಯಿಯ ದೇವರಾಜ್ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.

ಗ್ರಾಮದ ಎಲ್ಲಾ ಗ್ರಾಮಸ್ಥರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು, ನುಗ್ಗಿ ಗ್ರಾಮ ಪಂಚಾಯತಿ ಅಧ್ಯಕ್ಷರದ ಹೆಚ್ ಆರ್ ಜಗದೀಶ್, ದೇವಸ್ಥಾನ ಸಮಿತಿಯ ಬಿ ಕೆ ರಮೇಶ್, ರವಿಶೇಖರ್, ಪಂಚಾಯತಿ ಸದಸ್ಯರಾದ ಸ್ವಾತಿ ಸತೀಶ್, ವನಿತಾ ಹೆಚ್ ಆರ್ ಶ್ರೀನಿವಾಸ್, ದೀಕ್ಷೀತ್ ಬಡಿಗೆ, ಸಾತ್ವೀಕ್, ಮುಂತಾದವರು ಪಾಲ್ಗೊಂಡಿದ್ದರು.

……..ವಿಕ್ರಮ್ ಕೊಪ್ಪ….