ನುಗ್ಗಿ ಗ್ರಾಮದಲ್ಲಿ ಕೊರೊನ ವಾರಿಯರ್ಸ್ ಗೆ ಸನ್ಮಾನ, ಕೊರೊನ ವಿರುದ್ದ ಹೋರಾಟ ಅಂತಿಮವಲ್ಲ ಆರಂಭ ! ಹೆಚ್ ಆರ್ ಜಗದೀಶ್.

ಕೊರೊನಾ ವೈರಸ್‌ ತಡೆಗಟ್ಟುವಲ್ಲಿತಮ್ಮ ಪ್ರಾಣದ ಹಂಗು ತೊರೆದು ಸಾರ್ವಜನಿಕರಿಗೆ ಸೇವೆ ನೀಡಿದ ವೈದ್ಯರು, ಆಶಾ, ಅಂಗನವಾಡಿ, ಪೊಲೀಸ್‌ ಸಿಬ್ಬಂದಿಗೆ ನುಗ್ಗಿ ಗ್ರಾಮ ಪಂಚಾಯತ್ ಅಧ್ಯಕ್ಷ ಹೆಚ್ ಆರ್ ಜಗದೀಶ್ ನೇತೃತ್ವದಲ್ಲಿ ನುಗ್ಗಿ ಪಂಚಾಯತಿಯಲ್ಲಿಸನ್ಮಾನಿಸಲಾಯಿತು.

ನ್ಯೂಸ್ ಕೊಪ್ಪ : ತಾಲೂಕಿನ ನುಗ್ಗಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ 10ಕ್ಕೂ ಹೆಚ್ಚು ಕೊರೊನಾ ವಾರಿಯರ್ಸಗಳಿಗೆ ಸನ್ಮಾನಿಸಲಾಯಿತು. ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿಗಳಾದ ಮೇಘರಾಜ್, BHEO ಸುಧಾಕರ್, ಗ್ರಾಮಲೆಖ್ಖಧೀಕಾರಿಗಳಾದ ಸಿದ್ದಪ್ಪ, ಮಧುಸೂದನ್, ಬೀಟ್ ಪೊಲೀಸ್ ಪ್ರಶಾಂತ್, ನರ್ಸ್, ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಹಾಗೂ ಆರು ಮಂದಿ ಆಶಾ ಕಾರ್ಯಕರ್ತರನ್ನು ಸನ್ಮಾನಿ ಅಭಿನಂದಿಸಲಾಯಿತು.

ಸನ್ಮಾನ ಸ್ವೀಕರಿಸಿದ ಮಾತನಾಡಿದ BHEO ಸುಧಾಕರ್
ಕೊಪ್ಪ ತಾಲೂಕಿನಲ್ಲೆ ಕರೋನ ಜಾಗೃತಿ ಮೂಡಿಸುವಲ್ಲಿ ಹಾಗೂ ಗ್ರಾಮದ ಜನರ ಆರೋಗ್ಯ ಜಾಗೃತಿಯಲ್ಲಿ ನುಗ್ಗಿ ಗ್ರಾಮದ ಟಾಸ್ಕ್ ಫೋರ್ಸ್‌ ಸಿಬ್ಬಂದಿ ಮುಂಚೂಣಿಯಲ್ಲಿದ್ದಾರೆ ಎಂದರು.

ಕೊರೊನ ವಿರುದ್ದ ಹೋರಾಟ ಅಂತಿಮವಲ್ಲ ಆರಂಭ ಹೆಚ್ ಆರ್ ಜೆ…

ಎಲ್ಲರಿಗೂ ಸನ್ಮಾನಿಸಿ ಮಾತನಾಡಿದ ಅಧ್ಯಕ್ಷರಾದ ಹೆಚ್ ಆರ್ ಜಗದೀಶ್ ನಮ್ಮ ಗ್ರಾಮದಲ್ಲಿ ಕೊರೊನ ಸೊಂಕು ತಡೆಗಟ್ಟುವಲ್ಲಿ ಕೊರೊನ ವಾರಿಯರ್ಸ್ ಗಳ ಶ್ರಮ ಬಹಳ ಪ್ರಮುಖವಾಗಿದ್ದು,ತಮ್ಮ ಜೀವ ಜೀವನವನ್ನೆ ಪಣಕ್ಕಿಟ್ಟು ವಾರಿಯರ್ಸ ಗಳು ಹೋರಾಟ ನಡೆಸುತ್ತಿದ್ದಾರೆ ಅವರ ನಿಸ್ವಾರ್ಥ ಸೇವೆ ಸಾರ್ಥಕವಾದದ್ದು.ಕೊರೊನ ವಿರುದ್ದದ ಹೋರಾಟದ ಅಂತಿಮವಲ್ಲ ಆರಂಭ ಹಾಗಾಗಿ ಎಲ್ಲರೂ ಕೂಡ ಜವಾಬ್ದಾರಿಯುತ ನಾಗರೀಕರಾಗಬೇಕು, ನಮ್ಮ ಆರೋಗ್ಯ ಮತ್ತು ನಮ್ಮ ಪ್ರಾಣದ ರಕ್ಷಣೆ ನಮ್ಮದೆ ಜವಾಬ್ದಾರಿ ಸರ್ಕಾರದ ಆರೋಗ್ಯ ಇಲಾಖೆಯ ಸೂಚನೆಗಳನ್ನು ಪಾಲಿಸಿ ನಮ್ಮನ್ನು ನಮ್ಮ ಕುಟುಂಭವನ್ನು ನಮ್ಮ ಗ್ರಾಮ ಜಿಲ್ಲೆ ರಾಜ್ಯ ದೇಶವನ್ನು ಕಾಪಾಡುವ ಹೊಣೆ ನಮ್ಮೆಲ್ಲರ ಕರ್ತವ್ಯ ಎಂದರು.

ನುಗ್ಗಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಸನ್ನ ಕಾರ್ಯದರ್ಶಿ ವಸಂತ್ ಕುಮಾರ್, ಉಪಾಧ್ಯಕ್ಷೆ ಶ್ರೀಮತಿ ಶೈನಿ, ಗ್ರಾ ಪಂ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಸವಿನಾಥ್, ಸದಸ್ಯರಾದ ಶೇಖು,ದಿನೇಶ್ ಬಿ ಟಿ ಹಾಜರಿದ್ದರು.
ಇನ್ನು ಕಾರ್ಯಕ್ರಮ ಪ್ರಾರಂಭಕ್ಕೂ ಮೊದಲು ಸ್ಯಾನಿಟೈಸರ್ ಮೂಲಕ ಕೈ ಶುದ್ದ ಮಾಡಲು ತಿಳಿಸಿ ಥರ್ಮಲ್ ಟೆಸ್ಟಿಂಗ್ ನಡೆಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚಿಸಲಾಗಿತ್ತು.

………ವಿಕ್ರಮ್ ಕೊಪ್ಪ……