ತಾಲೂಕು ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಸುಧಾಕರ್ ಗೆ ನುಗ್ಗಿ ಗ್ರಾಮಸ್ಥರಿಂದ ಸನ್ಮಾನ|

ನ್ಯೂಸ್ ಕೊಪ್ಪ: ತಾಲೂಕಿನ ನುಗ್ಗಿ ಗ್ರಾಮದಲ್ಲಿ ವನದುರ್ಗಿ ಪರಿವಾರ ಸಹಿತ ದೇವಸ್ಥಾನದ ನೂತವಾಗಿ ನಿರ್ಮಾಣವಾದ ಸಮುದಾಯ ಭವನ ಹಾಗೂ ಭೋಜನ ಶಾಲಾ ಕಟ್ಟಡಕ್ಕೆ ತಮ್ಮ ಅನುದಾನದಲ್ಲಿ ಹಣ ಬಿಡುಗಡೆ ಮಾಡಿದ ಕೊಪ್ಪ ತಾಲೂಕು ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಸುಧಾಕರ್ ಗೆ ನುಗ್ಗಿ ಗ್ರಾಮಸ್ಥರು ಇಂದು ದೇವಾಲಯದಲ್ಲಿ ನಡೆದ ವರ್ದಂತಿ ಪೂಜಾ ಕಾರ್ಯಕ್ರಮದಲ್ಲಿ ಸನ್ಮಾನಿಸಿದರು. ಸನ್ಮಾನ ನೆರವೇರಿಸಿ ಮಾತನಾಡಿದ ನುಗ್ಗಿ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ದೇವಸ್ಥಾನ ಸಮಿತಿಯ ಹೆಚ್ ಆರ್ ಜಗದೀಶ್ ಸುಧಾಕರ್ ರವರು ತಮ್ಮ ಅನುದಾನವನ್ನು ಇಂತಹ ಜನಹಿತದ ಕಾರ್ಯಗಳಿಗಾಗಿಯೇ ಉಪಯೋಗಿಸಿ ತಮ್ಮ ಅವದಿಯಲ್ಲಿ ನಿಸ್ವಾರ್ಥವಾಗಿ ಜನಸೇವೆ ಮಾಡುತ್ತಿದ್ದಾರೆ ಎಂದು ಅಭಿನಂದಿಸಿದರು.

ಈ ಕಟ್ಟಡ ಪೂರ್ತಿಗೊಳ್ಳಲು ಇನ್ನೂ ಹಣಕಾಸಿನ ಅವಶ್ಯಕತೆ ಎದುರಾದಾಗ ದೇವಸ್ಥಾನ ಸಮಿತಿ ಹಾಗೂ ಗ್ರಾಮದ ದಾನಿಗಳ ದೇಣಿಗೆ ಸಂಗ್ರಹಿಸಿ ಸುಸಜ್ಜಿತವಾಗಿ ನಿರ್ಮಿಸಲಾಗಿದೆ ಎಂದರು.‌‌‌‌‌‌ ಗ್ರಾಮಸ್ಥರು ಊರಿನ ಹಿರಿಯರು, ದೇವಸ್ಥಾನ ಸಮಿತಿಯ ಬಿ ಕೆ ರಮೇಶ್, ರವಿಶೇಖರ್, ಪಂಚಾಯತಿ ಸದಸ್ಯರಾದ ಸ್ವಾತಿ, ವನಿತಾ, ದೀಕ್ಷಿತ್ ಬಡಿಗೆ, ಬಿಲ್ಲವ ಸಂಘದ ಅಧ್ಯಕ್ಷ ಶೇಖರ್ ಪೂಜಾರಿ, ಇದ್ದರು..

…..ವಿಕ್ರಮ್ ಕೊಪ್ಪ….