ಗುಂಡಿ ಬಾಯ್ತೆರೆದಿದೆ ಹುಷಾರ್‌!

ಕೊಪ್ಪದ ಪ್ರಮುಖ ರಸ್ತೆಯಲ್ಲಿ ಬೃಹತ್‌ ಗಾತ್ರದ ಮೂರು ಗುಂಡಿ ಬಲಿಗಾಗಿ ಕಾಯುತ್ತಿದೆ.

ನ್ಯೂಸ್ ಕೊಪ್ಪ: ಕೊಪ್ಪ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಕೊಪ್ಪ ಪಟ್ಟಣದಿಂದ ಬಾಳಗಡಿಗೆ ಹೋಗುವ ಮುಖ್ಯರಸ್ತೆ ಅದೂ ಕೂಡ ಇಳಿಜಾರು ರಸ್ತೆ ನಿತ್ಯ ನೂರಾರು ವಾಹನಗಳು ಓಡಾಡುವ ರಸ್ತೆಯಲ್ಲಿ ಮೂರು ಮಾನವ ನಿರ್ಮಿತ! ಹೊಂಡಗಳು ಸುಮಾರು ನಾಲ್ಕು ಐದು ತಿಂಗಳಿನಿಂದ ಬಾಯ್ತೆರೆದು ಕುಳಿತಿವೆ ಸಂಭದಪಟ್ಟ ಪಟ್ಟಣ ಪಂಚಾಯತಿ ಕಣ್ಮುಚ್ಚಿ ಕುಳಿತಿದೆ.

ಅಡಿಯಲ್ಲಿದ್ದ ನೀರಿನ ಪೈಪ್ ಒಡೆದು ತುಂಬಾ ದಿನಗಳಿಂದ ನೀರು ರಸ್ತೆಯ ಮೇಲೆ ಹರಿಯುತ್ತಿತ್ತು ಕಡೆಗೂ ಅದನ್ನು ದುರಸ್ತಿ ಮಾಡಲು ಮನಸು ಮಾಡಿದ ಅಧಿಕಾರಿಗಳು ಸುಸ್ಥಿತಿಯಲ್ಲಿದ್ದ ರಸ್ತೆಯನ್ನು ಮೂರು ಕಡೆ ಅಗೆದು ಪೈಪ್ ದುರಸ್ತಿ ಮಾಡಿದರು, ನೀರು ಸೋರುವುದು ನಿಂತಿತು, ತೋಡಿದ ಗುಂಡಿಗೆ ಅದೇ ಮಣ್ಣು ಎಳೆದು ಕೈತೊಳೆದರು! ಗುಂಡಿ ಹಾಗೇಯೇ ಉಳಿಯಿತು ಆ ಗುಂಡಿ ಮುಚ್ಚಿ ಟಾರು ಹಾಕಿ ಸರಿಪಡಿಸುವ ಕಾರ್ಯ ಮರೆತರು. ಸ್ವಲ್ಪ ದಿನ ಪೊಲೀಸರು ಬ್ಯಾರಿಕೇಡ್ ಇಟ್ಟು ಜಾಗ್ರತೆ ವಹಿಸಿದರು ಈಗ ಅದೂ ಕೂಡ ಮಾಯವಾಗಿದೆ.

ನೂರಾರು ಜನ ಓಡಾಡುವ ರಸ್ತೆ,

ಕಾಲೇಜು, ತಾಲೂಕು ಪಂಚಾಯತಿ, ತಾಲ್ಲೂಕು ಕಛೇರಿ, ಜಿ ಪಂ ಕಛೇರಿ, ಸೇರಿದಂತೆ ಎಲ್ಲಾ ಸರ್ಕಾರಿ ಕಛೇರಿಗಳು ಬಾಳಗಡಿಯಲ್ಲಿಯೇ ಇದ್ದು ಸಾರ್ವಜನಿಕರು ಇದೇ ರಸ್ತೆಯಲ್ಲಿಯೇ ದಿನನಿತ್ಯವೂ ಓಡಾಡಬೇಕು, ಅದರಲ್ಲೂ ದ್ವಿಚಕ್ರ ಸವಾರರು ಸೇರಿದಂತೆ ಎಲ್ಲಾ ವಾಹನಗಳು ಯಮವೇಗದಲ್ಲಿಯೇ ಸಂಚರಿಸುತ್ತಿರುತ್ತವೆ ಸಡನ್ನಾಗಿ ಸಿಗುವ ಈ ಹೊಂಡಗಳಿಗೆ ಸವಾರರು ತಮ್ಮ ವಾಹನದ ನಿಯಂತ್ರಣ ಕಳೆದುಕೊಂಡೊ ಗುಂಡಿ ತಪ್ಪಿಸುವ ಆತುರದಲ್ಲಿ ಅಪಘಾತ ಮಾಡಿಕೊಳ್ಳುತ್ತಿದ್ದಾರೆ. ಈಗ ಮಳೆಗಾಲ ಶುರುವಾಗಿದೆ ಮಲೆನಾಡಿನ ಮಳೆಯ ಅಬ್ಬರಕ್ಕೆ ಈ ಗುಂಡಿಗಳು ಇನ್ನು ದೊಡ್ಡದಾಗಬಹುದು ಇನ್ನಾದರೂ ಪಟ್ಟಣ ಪಂಚಾಯತ್ ದೊಡ್ಡ ಪ್ರಮಾಣದ ಅನಾಹುತ ಆಗುವ ಮುಂಚೆ ಈ ಗುಂಡಿ ಮುಚ್ಚಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಅವಘಡ ಸಂಭವಿಸಿದರೆ ಮಾತ್ರ ಸಂಬಂಧ ಪಟ್ಟ ಜನಪ್ರತಿನಿಧಿಗಳು ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕೇ?

ಜಿಲ್ಲಾಡಳಿತ ಇಂತಹ ಮರಣಗುಂಡಿಗಳನ್ನು ತಕ್ಷಣ ಮುಚ್ಚಿಸುವ ಜವಾಬ್ದಾರಿ ಪಟ್ಟಣ ಪಂಚಾಯತ್‌ನ ಅಭಿವೃದ್ಧಿ ಅಧಿಕಾರಿಗಳಿಗೆ ನೀಡಿ ತಕ್ಷಣ ಈ ಕೆಲಸದಲ್ಲಿ ಯಾವುದೇ ನಿರ್ಲಕ್ಷ ತೋರದೆ ಮಾಡಬೇಕು ಎಂಬುದು ನ್ಯೂಸ್ ಕೊಪ್ಪದ ಆಗ್ರಹ.

……ವಿಕ್ರಮ್ ಕೊಪ್ಪ….