ಕೊರೋನ ಆತಂಕ ಹೆಚ್ ಆರ್ ಜಗದೀಶ್ ನೇತ್ರತ್ವದಲ್ಲಿ ನುಗ್ಗಿ ಗ್ರಾಮದಲ್ಲಿ ಟಾಸ್ಕ್ ಪೋರ್ಸ್ ರಚನೆ.

ನ್ಯೂಸ್ ಕೊಪ್ಪ: ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಗ್ರಾಮಮಟ್ಟದ ಕಾರ್ಯಪಡೆಯನ್ನು ನುಗ್ಗಿ ಗ್ರಾಮದಲ್ಲಿ ಪಂಚಾಯತಿ ಅಧ್ಯಕ್ಷರಾದ ಹೆಚ್ ಆರ್ ಜಗದೀಶ್ ನೇತೃತ್ವದಲ್ಲಿ ರಚನೆ ಮಾಡಲಾಯಿತು. ನ್ಯೂಸ್ ಕೊಪ್ಪ ಜೊತೆ ಮಾತನಾಡಿದ ಅಧ್ಯಕ್ಷ ಹೆಚ್ ಆರ್ ಜಗದೀಶ್ ನಮ್ಮ ನುಗ್ಗಿ ಗ್ರಾಮದಲ್ಲಿ ಕರೋನ ವೈರಸ್ ತಡೆಗಟ್ಟುವ ಸಲುವಾಗಿ ಜನರಲ್ಲಿ ಜಾಗೃತಿ ಮೂಡಿಸಲು ಟಾಸ್ಕ್ ಫೋರ್ಸ್‌ ರಚಿಸಲಾಗಿದೆ.
ಕೊಪ್ಪ ಮೇಲ್ಪಾಲ್ ರಸ್ತೆಯ ಮಧ್ಯ ಭಾಗದಲ್ಲಿ. ಅನಗತ್ಯವಾಗಿ ತಿರುಗಾಡುವ ಸಾರ್ವಜನಿಕರು ಹಾಗೂ ವಾಹನಗಳಿಗೆ ಚೆಕ್ಪೋಸ್ಟ್ ನಿರ್ಮಾಣ ಮಾಡಲಾಗಿದೆ.

ಸುಮಾರು 180 ವಾಹನಗಳನ್ನು ಪರಿಶೀಲನೆ ನಡೆಸಿ ಅನಗತ್ಯವಾಗಿ ಓಡಾಡುತ್ತಿರುವ ಅನಾಗರೀಕರಿಗೆ ಎಚ್ಚರಿಕೆ ನೀಡಲಾಯಿತು, ಮಾಸ್ಕ್ ದರಿಸದೆ ಓಡಾಡುತ್ತಿದ್ದ ಬೇಜಾವ್ದಾರಿ ವ್ಯಕ್ತಿಗಳಿಗೆ ಈ ರೋಗದ ಬಗ್ಗೆ ಅರಿವು ಮೂಡಿಸಿ ಪಂಚಾಯತಿ ವತಿಯಿಂದ ಉಚಿತ ಮಾಸ್ಕ್ ವಿತರಿಸಿ ಅವರಿಗೆ ಮನೆಯಲ್ಲೆ ಇದ್ದು ಸರ್ಕಾರದ ಆದೇಶ ಪಾಲಿಸುವಂತೆ ಆದೇಶ ನೀಡಲಾಯಿತು ತಪ್ಪಿದರೆ ಸೂಕ್ತ ಕಾನೂನು ಕ್ರಮದ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ .ಕೊರೊನಾ ವೈರಸ್‌ ಬಗ್ಗೆ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳು ಹೊರಡಿಸಿರುವ ಮಾರ್ಗಸೂಚಿಯನ್ನು ಅನುಷ್ಟಾನಗೊಳಿಸಲು ನಾವು ಬದ್ದ ಎಂದರು.

ಗ್ರಾಮದ ಸಾರ್ವಜನಿಕ ಸ್ಥಳಗಳನ್ನು ಗ್ರಾಮಸ್ಥರ ನೆರವಿನಿಂದ ಸ್ವಚ್ಚ ಗೊಳಿಸಲಾಯಿತು. ಗ್ರಾಮದಲ್ಲಿ ಯಾವುದಾದರೂ ವ್ಯಕ್ತಿಗಳು ಹೊರದೇಶದಿಂದ ಹಾಗೂ ಅಂತರ್ ರಾಜ್ಯದಿಂದ ಹಾಗೂ ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಗ್ರಾಮಕ್ಕೆ ಬಂದವರಇದ್ದಲ್ಲಿ ದಯವಿಟ್ಟು 14 ದಿನಗಳ ಕಾಲ ಮನೆಯೊಳಗೆ ತಾವುಗಳು ಇರಬೇಕಾಗಿ ಹಾಗೂ ಗ್ರಾಮ ಪಂಚಾಯತಿ ಅಥವ ಪೊಲೀಸ್ ಇಲಾಖೆಗೆ ತಿಳಿಸಲು ವಿನಂತಿಸಲಾಗಿದೆ. ಸಾರ್ವಜನಿಕರ ಮನೆ ಮನೆಗೆ ತರಳಿ ಸ್ವಚ್ಚತೆಯ ಅರಿವು ಮೂಡಿಸುವಂತಹ ಕಾರ್ಯ ಮಾಡಲಾಗಿದೆ ಎಂದರು.

ಟಾಸ್ಕ್ ಫೋರ್ಸ್‌ ಸದಸ್ಯರ ಜವಾಬ್ದಾರಿ.

* ಗ್ರಾಮದಲ್ಲಿ ಐದಕ್ಕಿಂತ ಹೆಚ್ಚು ಜನರು ಸೇರದದಂತೆ ನೋಡಿಕೊಳ್ಳುವುದು ಹಾಗೂ ಗ್ರಾಮದ ಬಾವಿ, ಕೆರೆ , ನದಿ ಸ್ಥಳಗಳಲ್ಲಿ ಸಾರ್ವಜನಿಕರು ಗುಂಪು ಗುಂಪಾಗಿ ಸೇರುವುದನ್ನು ತಪ್ಪಿಸುವುದು

* ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಯೊಬ್ಬರು ಕನಿಷ್ಠ ಆರು ಅಡಿ ಅಂತರ ಕಾಯ್ದುಕೊಳ್ಳುವಂತೆ ಅರಿವು ಮೂಡಿಸುವುದು

* ಕೊರೊನಾ ಬಗ್ಗೆ ಸುಳ್ಳು ಸುದ್ದಿ, ವದಂತಿ ಹರಡದಂತೆ ನೋಡಿಕೊಳ್ಳುವುದು ಹಾಗೂಗ್ರಾ,ಮೀಣ ಭಾಗಗಳಲ್ಲಿ ಮದುವೆ, ಜಾತ್ರೆ, ಮೆರವಣಿಗೆ, ಸಂತೆ ನಡೆಯದಂತೆ ನೊಡಿಕೊಳ್ಳುವುದು

* 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ಸಮೀಕ್ಷೆ ನಡೆಸಿ ನಿಯಮಿತವಾಗಿ ಇವರುಗಳ ಆರೋಗ್ಯವನ್ನು ಗಮನಿಸುವುದು ಹಾಗೂ ಗರ್ಭಿಣಿ ಹಾಗೂ ಬಾಣಂತಿಯರ ಆರೋಗ್ಯ ವಿಚಾರಣೆ ಮಾಡುವುದು.

* ಕೊರೊನಾ ರೋಗ ಲಕ್ಷಣಗಳು ಕಂಡುಬಂದರನ್ನು ಗುರುತಿಸಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿಸಲು ಕ್ರಮ ಕೈಗೊಳ್ಳುವುದು.

ಹೊರ ದೇಶ ಹಾಗೂ ಜಿಲ್ಲೆಗಳಿಂದ ವ್ಯಕ್ತಿಗಳ ಬಗ್ಗೆ ನಿಗಾ ವಹಿಸುವುದು. ಆಶಾ ಕಾರ್ಯಕರ್ತೆಯರು ಅವರನ್ನು ಪದೆ ಪದೆ ಬೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿ ವರದಿ ನೀಡುವುದು.

ಪ್ರತಿ ಪ್ರಜೆಯೂ ಈ ನಮ್ಮ ತಾಯಿನಾಡಿಗಾಗಿ ಸೈನಿಕರಂತೆ ಹೋರಾಡುವ ಸಮಯ ಬಂದಿದೆ.

ಕರೋನ ವೈರಸ್ ಈಗ ಈ ದೇಶ ಎದುರಿಸುತ್ತಿರುವ ಒಂದು ರೀತಿಯ ಯುದ್ದದ ಸನ್ನಿವೇಶ, ಈ ನಮ್ಮ ದೇಶವನ್ನು ರಕ್ಷಣೆ ಮಾಡುವ ಜವಾಬ್ದಾರಿ ಈಗ ಈ ದೇಶದ ಕಟ್ಟಕಡೆಯ ಪ್ರಜೆಗೂ ದೊರಕಿದೆ, ನಾವೆಲ್ಲರೂ ಸೈನಿಕರಂತೆ ಈ ದೇಶವನ್ನು ರಕ್ಷಿಸಬೇಕಾಗಿದೆ ಸರ್ಕಾರದ ಪ್ರತಿ ಆದೇಶವನ್ನು ಉತ್ತಮ ನಾಗರೀಕರಾಗಿ ಪಾಲನೆ ಮಾಡಬೇಕಾಗಿದೆ, ನಮ್ಮ ಸುಂದರ ನಾಳೆಗಳಿಗಾಗಿ ಇಂದು ನಾವು ಕಷ್ಟ ಪಡಲೇಬೇಕಿದೆ. ಇದು ಮನುಷ್ಯ ನಿಂದ ಮನುಷ್ಯನಿಗೆ ಹರಡುವ ಕಾಯಿಲೆಯಾಗಿದ್ದು ಇದು ಮನುಷ್ಯನ ದೇಹ ಸಿಗದೆ ಇದ್ದರೆ ಇನ್ನು ಕೆಲವೇ ದಿನಗಳಲ್ಲಿ ನಿರ್ನಾಮವಾಗಲಿದೆ ಆದ್ದರಿಂದ ಆದಷ್ಟು ಮನೆಯಲ್ಲೇ ಇರಬೇಕು ಅನಗತ್ಯವಾಗಿ ಓಡಾಡಬೇಡಿ ಎಂದರು.

ಇಂದು ಕೊಪ್ಪ ಠಾಣಾಧಿಕಾರಿ ರವಿ.ಎನ್ ಎನ್, ಬೀಟ್ ಪೊಲೀಸ್ ಶಶಿದರ್ ಗ್ರಾಮ ಲೆಕ್ಕಿಗರಾದ ಮದುಸೂದನ್ ಮಾಜಿ ಅಧ್ಯಕ್ಷ ಸವಿನಾಥ್, ಪಿಡಿಓ ಪ್ರಸನ್ನ, ಕಾರ್ಯದರ್ಶಿ ವಸಂತ್ ಕುಮಾರ್ ಪಂಚಾಯತಿ ಸದಸ್ಯರು ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆಯರು ಶಾಲಾಶಿಕ್ಷಕರು ಪಂಚಾಯತಿ ಸಿಬ್ಬಂದಿಗಳು ಇಂದು ನಡೆದ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

……..ವಿಕ್ರಮ್ ಕೊಪ್ಪ…..