ಕೊರೊನಾ ಭೀತಿ: 7, 8 ಮತ್ತು 9 ನೇ ತರಗತಿ ಪರೀಕ್ಷೆಗಳು ಮಾ 31ರ ವರೆಗೆ ಮುಂದೂಡಿಕೆ..

ನ್ಯೂ‌ಸ್ ಕೊಪ್ಪ, ರಾಜ್ಯದಲ್ಲಿ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಸೋಮವಾರ ಆರಂಭವಾಗಬೇಕಾಗಿದ್ದ 7, 8 ಹಾಗೂ 9 ನೇ ತರಗತಿಯ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಮಾರ್ಚ್‌ 31ರ ವರೆಗೆ ಪರೀಕ್ಷೆಗಳನ್ನು ಮುಂದೂಡಲಾಗಿದ್ದು ಶಿಕ್ಷಣ ಸಚಿವ ಸುರೇಶ್ ಕುಮಾರ್‌ ಆದೇಶಿಸಿದ್ದಾರೆ.

ಪರೀಕ್ಷೆಗಳ ಮುಂದಿನ ದಿನಾಂಕವನ್ನು ಮಾರ್ಚ್‌ 31 ರ ಬಳಿಕ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಿ ಘೋಷಣೆ ಮಾಡಲಾಗುವುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಆದರೆ ಪರೀಕ್ಷಾ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ನಿಗದಿತ ದಿನಾಂಕದಂದು ಪರೀಕ್ಷೆಗಳು ನಡೆಯಲಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ

ವಿಕ್ರಮ್ ಕೊಪ್ಪ……