ಕೊಪ್ಪ ತಾಲೂಕಿನ ಕಾಂಗ್ರೆಸ್ ಮುಖಂಡ ಬಾಳಗಡಿ ರವಿ ಬಿಜೆಪಿ ಸೇರ್ಪಡೆ.

ನ್ಯೂಸ್ ಕೊಪ್ಪ: ಇಂದು ಕೊಪ್ಪಕ್ಕೆ ಬೇಟಿ ನೀಡಿದ್ದ ಪ್ರವಾಸೋದ್ಯಮ ಮತ್ತು ಯುವಜನ ಕ್ರೀಡಾ ಸಚಿವರಾದ ಸಿ ಟಿ ರವಿ ಸಮ್ಮುಖದಲ್ಲಿ ಕೊಪ್ಪ ತಾಲೂಕಿನ ಕಾಂಗ್ರೆಸ್ ಮುಖಂಡ ಹಾಗೂ ಬಿಂತ್ರವಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಬಾಳಗಡಿ ರವಿ ಇಂದು ಜಿಲ್ಲಾ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾದ ಶ್ರೀಮತಿ ದಿವ್ಯ ದಿನೇಶ್ ರವರ ನಿವಾಸದಲ್ಲಿ ಸಿ ಟಿ ರವಿ , ಡಿ ಎನ್ ಜೀವರಾಜ್ ಹಾಗೂ ಬಿಜೆಪಿ ಮುಖಂಡರ ಸಮ್ಮುಖದಲ್ಲಿ ಕಾಂಗ್ರೇಸ್ ಪಕ್ಷ ತೊರೆದು ಬಾ ಜ ಪ ಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.

ಇವರೊಂದಿಗೆ ನ ರಾ ಪುರ ಕಾಂಗ್ರೇಸ್ ಮುಖಂಡ ನಿಲೇಶ್ ಕೂಡ ಬಾ ಜ ಪ ಕ್ಕೆ ಸೇರ್ಪಡೆಗೊಂಡರು. ಮಾಜಿ ಸಚಿವರಾದ ಡಿ ಎನ್ ಜೀವರಾಜ್ ರಾಮಸ್ವಾಮಿ, ಡಾ ಮಹಾಬಲ ರಾವ್ ಮಂಡಲ ಅಧ್ಯಕ್ಷರಾದ ಸತೀಶ್ ಅದ್ದಡ,ದಿನೇಶ್ ಹೊಸೂರು, ಹಾಗೂ ತಾಲೂಕು ಬಿಜೆಪಿಯ ಹಲವು ಮುಖಂಡರಿದ್ದರು

……ವಿಕ್ರಮ್ ಕೊಪ್ಪ….