ಕೃಷಿ ಹೊಂಡದಲ್ಲಿ ಈಜಲು ಹೋಗಿ ಸಾವು.


ನ್ಯೂಸ್ ಕೊಪ್ಪ: ನರಸಿಂಹರಾಜಪುರ ತಾಲ್ಲೂಕಿನ ಕರಗುಂದ ಗ್ರಾಮ ದಲ್ಲಿ ಕೃಷಿ ಹೊಂಡದಲ್ಲಿ ಈಜಲು ಹೋಗಿ ವ್ಯಕ್ತಿ ಯೊಬ್ಬರು ಮೃತ ಪಟ್ಟಿರುವ ಘಟನೆ ಸೋಮವಾರ ಸಂಜೆ ನಡೆದಿದೆ.
ಕೊಪ್ಪ ತಾಲೂಕಿನ ಜಯಪುರದ ಉಮೇಶ್(38) ಮೃತಪಟ್ಟ ದುರ್ದೈವಿ, ಕೊಪ್ಪ ತಾ ಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಉದಯ್ ರವರ ಸಹೋದರರಾದ ಉಮೇಶ್ ಇಂದು ನ.ರಾ.ಪುರದ ತಮ್ಮ ಪತ್ನಿಯ ಮನೆಗೆ ಬಂದಿದ್ದು ಅಲ್ಲೆ ಕೃಷಿ ಹೊಂಡದಲ್ಲಿ ಈಜಲು ತೆರಳಿದ್ದರು ನ ರಾ ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.