ಆಟೋ, ಟ್ಯಾಕ್ಸಿ, ಚಾಲಕರ ಸರ್ಕಾರದ ಧನಸಹಾಯಕ್ಕೆ ಅಸಂಬದ್ಧವಾಗಿದ್ದ ನಿಯಮ ಸಡಿಲಿಸಿದ ಸರ್ಕಾರ.

ನ್ಯೂಸ್ ಕೊಪ್ಪ; ಕೋವಿಡ್ 19 ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಆಟೋ ಟ್ಯಾಕ್ಸಿ ಚಾಲಕರಿಗೆ ನೆರವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಚಾಲಕರಿಗೆ 5000 ರೂ ಸಹಾಯಧನ ನೀಡುವುದಾಗಿ ಘೋಷಿಸಿ ಅದಕ್ಕಾಗಿ ಚಾಲಕರಿಗೆ ಹಲವಾರು ಅಸಂಬದ್ದ ನಿಯಮಗಳನ್ನು ಹೇರಿತ್ತು ಇದರಿಂದ ಆಟೋ ಟ್ಯಾಕ್ಸಿ ಚಾಲಕರು ಸರ್ಕಾರದ ವಿರುದ್ದ ಕಿಡಿಕಾರಿ ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ಜನ್ಮ ಜಾಲಾಡಿದ್ದರು, ಈಗ ಎಚ್ಚೆತ್ತ ಸರ್ಕಾರ ತನ್ನ ತಪ್ಪನ್ನು ಸರಿಪಡಿಸಿಕೊಂಡು ನಿಯಮಗಳನ್ನು ಸಡಿಲಿಸಿದೆ.

ಆಟೋ, ಟ್ಯಾಕ್ಸಿ ಚಾಲಕರಿಗೆ ಬ್ಯಾಡ್ಜ್‌ ಚಾಸಿ ನಂಬರ್ ಸೇರಿ ಇನ್ನಿತರ ದಾಖಲೆಗಳನ್ನು ನೀಡುವುದು ಕಡ್ಡಾಯಗೊಳಿಸಲಾಗಿತ್ತು, ಇದರಲ್ಲಿ ಸ್ವಂತ ವಾಹನ ಇಲ್ಲದೆ ಚಾಲಕರಾಗಿ ದುಡಿಯುವ ವರ್ಗಕ್ಕೆ ಅನ್ಯಾಯವಾಗಿತ್ತು ಆದರೆ ಒಂದು ಆಟೋ, ಟ್ಯಾಕ್ಸಿಗಳಿಗೆ ಶಿಫ್ಟ್‌ ಆಧಾರದ ಮೇಲೆ ಇಬ್ಬರು ಚಾಲಕರು ಕೆಲಸ ಮಾಡುತ್ತಿದ್ದಾರೆ ಎಂಬುದು ಸರ್ಕಾರಕ್ಕೆ ತಡವಾಗಿಯಾದರೂ ಮನವರಿಕೆಯಾಗಿದ್ದು ಹೀಗಾಗಿ ಒಂದು ವಾಹನಕ್ಕೆ ಒಬ್ಬರು ಪಲಾನುಭವಿಗಳು ಎಂಬ ನಿಯಮ ಸಡಿಸಲಾಗಿದೆ ಎಂದು ಸಂಪುಟ ಸಭೆ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ರೈತರಿಗೂ ನಿಯಮ ಸಡಿಲಿಕೆ.

ಹಾಗೆಯೇ ಹಿಂಗಾರು ಬೆಳೆಯ ರೈತರಿಗೆ ಮಾತ್ರ ಎಕರೆಗೆ 5000 ಸಹಾಯಧನ ಎಂದಿದ್ದ ಸರ್ಕಾರ ಈಗ ಹಿಂಗಾರು ಮುಂಗಾರು ಬೆಳೆ ಬೆಳೆದ ಎಲ್ಲಾ ರೈತರಿಗೂ ಸಹಾಯಧನ ನೀಡಲಾಗುವುದು ಎಂದು ತೀರ್ಮಾನಿಸಿದೆ.

………..ವಿಕ್ರಮ್ ಕೊಪ್ಪ…….