ಆಟೋ/ಟ್ಯಾಕ್ಸಿ ಚಾಲಕರಿಗೆ ಸರ್ಕಾರದ ಧನಸಹಾಯ ಪಡೆಯಲು ಹೀಗೆ ಮಾಡಿ..

ನ್ಯೂಸ್ ಕೊಪ್ಪ: ರಾಜ್ಯದಲ್ಲಿ ಲಾಕ್ಡೌನ್ ಹಿನ್ನೆಲೆ ಆದಾಯ ಕಳೆದುಕೊಂಡಿರುವ ಆಟೋ, ಟ್ಯಾಕ್ಸಿ ಚಾಲಕರಿಗೆ ಸರ್ಕಾರ 5000 ರೂಪಾಯಿ ಪರಿಹಾರ ಧನ‌ ನೀಡಲು ನಿರ್ದರಿಸಿದೆ ಅರ್ಹರು ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.

ಈ ಯೋಜನೆ ಪಡೆಯಲು ಯಾವ ಚಾಲಕರು ಅರ್ಹರು? ಷರತ್ತುಗಳೇನು?ಮಾಹಿತಿ ಇಲ್ಲಿದೆ.

ಆಟೋರಿಕ್ಷಾ ಚಾಲನೆ ಮಾಡಲು ಡ್ರೈವಿಂಗ್ ಲೈಸೆನ್ಸ್ ಮತ್ತು ಬ್ಯಾಡ್ಜ್ ಹೊಂದಿರುವವರು ಹಾಗೂ ಟ್ಯಾಕ್ಸಿ ಚಾಲಕರು M-cab ಬ್ಯಾಡ್ಜ್ ಹೊಂದಿರುವವರು ಮಾತ್ರ ಈ ಯೋಜನೆಯ ಫಲಾನುಭವಿಗಳಾಗಿರುತ್ತಾರೆ.

ಫಲಾನುಭವಿಗಳು ದಿನಾಂಕ: 01-03-2020ಕ್ಕೆ ಚಾಲ್ತಿಯಲ್ಲಿರುವಂತೆ ಡ್ರೈವಿಂಗ್ ಲೈಸೆನ್ಸ್ ವಿವರಗಳನ್ನು ಸೇವಾಸಿಂಧು ಪೋರ್ಟಲ್ನಲ್ಲಿ ನಮೂದಿಸಬೇಕು.

ಚಾಲಕರ ಆಧಾರ್ ಕಾರ್ಡ್ ವಿವರ, ವಾಹನದ ನೋಂದಣಿ ಸಂಖ್ಯೆ ವಿವರಗಳನ್ನು ಪೋರ್ಟಲ್‌ನಲ್ಲಿ ನಮೂದಿಸಬೇಕು.

ಚಾಲಕರ ಬ್ಯಾಂಕ್ ಅಕೌಂಟ್ ವಿವರ, ಸಂಬಂಧಪಟ್ಟ ಬ್ಯಾಂಕ್ನ IFSC ಕೋಡ್, ವಿವರಗಳನ್ನು ಸಹ ಪೋರ್ಟಲ್ಗೆ ನೀಡಬೇಕು.
ಡ್ರೈವಿಂಗ್ ಲೈಸೆನ್ಸ್ ನ ವಿವರಗಳನ್ನು ಸಾರಿಗೆ ಇಲಾಖೆಯ ಸಾರಥಿ-4 ತಂತ್ರಾಂಶದಿಂದ ನೇರವಾಗಿ ಪಡೆದುಕೊಳ್ಳಬೇಕು.

ಆಟೋರಿಕ್ಷಾ ಅಥವಾ ಟ್ಯಾಕ್ಸಿ ಚಾಲಕರು ತಮ್ಮ ದೈನಂದಿನ ಉದ್ಯೋಗವನ್ನು ನಡೆಸಲಾಗದೆ ಆದಾಯ ಕಳೆದುಕೊಂಡಿರುವ ಬಗ್ಗೆ ಸ್ವಯಂ ಘೋಷಣೆ ಮಾಡಬೇಕು.

ಈ ಯೋಜನೆಯನ್ನು ಜಾರಿಗೊಳಿಸಲು ಅರ್ಹ ಚಾಲಕರು ತಮ್ಮ ಅರ್ಜಿಗಳನ್ನು ಸೇವಾಸಿಂಧುವಿನ ಮುಖಾಂತರ ಸಲ್ಲಿಸಲು ವ್ಯವಸ್ಥೆ ಮಾಡಬೇಕಾಗಿದ್ದು ಇನ್ನೆರಡು ದಿನಗಳಲ್ಲಿ ಆನ್ಲೈನ್ ನಲ್ಲಿ ಅರ್ಜಿ ಸ್ವೀಕರಿಸಲಾಗುವುದು, ಅರ್ಹ ಆಟೋ ಮತ್ತು ಟ್ಯಾಕ್ಸಿ ಚಾಲಕರ ಅರ್ಜಿಗಳನ್ನು ಪರಿಶೀಲಿಸಿ ಅವರ ಬ್ಯಾಂಕ್ ಅಕೌಂಟ್ ಗೆ ಧನಸಹಾಯ ನೇರವಾಗಿ ವರ್ಗಾಯಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

http://www.sevasindhu.karnataka.gov.in ಪೊರ್ಟಲ್
ನಿಮ್ಮ ಮೊಬೈಲ್, ಸ್ಥಳೀಯ ಕಂಪ್ಯೂಟರ್ ಸೆಂಟರ್, ಬೆಂಗಳೂರು ಒನ್ ಗಳಲ್ಲಿ ಅರ್ಜಿ ಸಲ್ಲಿಸಿ..

……..ವಿಕ್ರಮ್ ಕೊಪ್ಪ